ಹೊಸದಿಲ್ಲಿ: ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ಡಾ| ವಿ. ಅನಂತ ನಾಗೇಶ್ವರನ್ ಅವರನ್ನು ನೇಮಿಸಲಾಗಿದೆ. ಶುಕ್ರವಾರವೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
2021 ಡಿ.17ರಿಂದ ಈ ಹುದ್ದೆ ತೆರವಾ ಗಿಯೇ ಇತ್ತು. 3 ವರ್ಷಗಳ ಅವಧಿ ಮುಕ್ತಾಯವಾದ ಹಿನ್ನೆಲೆ ಸಲಹೆಗಾರರ ಹುದ್ದೆಯಲ್ಲಿ ಇದ್ದ ಕೆ.ವಿ. ಸುಬ್ರ ಹ್ಮಣ್ಯನ್ ನಿವೃತ್ತಿಯಾಗಿದ್ದರು.
ಅಹ್ಮದಾಬಾದ್‌ನ ಐಐಎಂ ಪದವೀಧರರಾಗಿರುವ ಅವರು, ಸಿಂಗಾಪುರ ಮತ್ತು ದೇಶದ ವಿವಿಧ ಪ್ರತಿಷ್ಠಿತ ಉದ್ಯಮಾಡಳಿತ ವಿದ್ಯಾ ಕೇಂದ್ರ ಗಳಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ವಿತ್ತೀಯ ಮಾರುಕಟ್ಟೆ, ಅಂತಾರಾಷ್ಟ್ರೀಯ ಹಣಕಾಸು ವಿನಿಮಯಗಳ ಬಗ್ಗೆ ಅವರು ಪರಿಣಿತರು.
ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ
2019ರಿಂದ 2021ರ ವರೆಗೆ ಪ್ರಧಾನಮಂತ್ರಿಗಳ ವಿತ್ತೀಯ ಸಲಹಾ ಸಮಿತಿಯ ಸದಸ್ಯರಾಗಿಯೂ ಅವರು ಇದ್ದರು.
2001ರಲ್ಲಿ ಆವಿಷ್ಕಾರ್ ಗ್ರೂಪ್ ಎಂಬ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಸಾರ್ವಜನಿಕ ಆಡಳಿತ ನೀತಿ ನಿರೂಪಣೆಯ ಸಂಸ್ಥೆ ತಕ್ಷ ಶಿಲಾದ ಸಹ- ಸಂಸ್ಥಾಪಕರೂ ಆಗಿದ್ದಾರೆ.