ಬೆಂಗಳೂರು: ಪ್ರಸ್ತುತ ನಿಮ್ಮ ಬಳಿ ವಾಹನ ಚಾಲನಾ ಪರವಾನಗಿ ಇದೆ. ಇನ್ಮುಂದೆ ಆ ವಾಹನವನ್ನು ನಿಮ್ಮ ಮನೆ ಮುಂದೆ ನಿಲ್ಲಿಸಲಿಕ್ಕೂ ಪರವಾನಗಿ ಪಡೆಯಬೇಕಾಗುತ್ತದೆ!
ಒಂದು ವೇಳೆ ಮನೆಮುಂದೆ ಇರುವ ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವುದಾದರೆ, ಅದಕ್ಕೊಂದು ಪರ್ಮಿಟ್ ಹೊಂದಿರಬೇಕಾಗುತ್ತದೆ. ದ್ವಿಚಕ್ರ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳಿಗೂ ಇದು ಅನ್ವಯ ಆಗಲಿದೆ. ಸಂಚಾರ ದಟ್ಟಣೆ ನಿಯಂತ್ರಣ, ಸಮೂಹ ಸಾರಿಗೆ ಹೆಚ್ಚು ಬಳಸುವಂತೆ ಮಾಡಲು ಇಂತಹ ಕಠಿಣ “ಪಾರ್ಕಿಂಗ್ ನೀತಿ 2.0’ಗೆ ಸರ್ಕಾರ ಮುಂದಾಗಿದೆ. ಹೀಗಾಗಿ, ರಸ್ತೆ ನಿಲ್ಲಿಸುವ ವಾಹನಕ್ಕೆ ಪಾರ್ಕಿಂಗ್ ಶುಲ್ಕ ಅನಿರ್ವಾಯವಾಗಿದೆ. ಜತೆಗೆ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ಪರವಾನಗಿ, ಹೊಸ ವಾಹನ ಖರೀದಿಗೆ ಪಾರ್ಕಿಂಗ್ ಸ್ಥಳಾವಕಾಶದ ದೃಢೀಕರಣ ಪತ್ರ ಕಡ್ಡಾಯವಾಗಲಿದೆ.
ನೂತನ ಪಾರ್ಕಿಂಗ್ ನೀತಿಯು ನಗರ ಭೂಸಾರಿಗೆ ನಿರ್ದೇಶನಾಲಯದ ಪ್ರಸಾವನೆಯಾಗಿದ್ದು, ಇದನ್ನು ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ಪಾಲಿ ಕೆಗೆ ವಹಿಸಲಾಗಿದೆ. ಹೊಸ ನೀತಿ ಜಾರಿಗೆ ಬರುವುದರಿಂದ ಬಿಬಿಎಂಪಿ ವ್ಯಾಪ್ತಿಯ ನಿರ್ದಿಷ್ಟ ರಸ್ತೆಗಳಲ್ಲಿ ಉಚಿತವಾಹನ ನಿಲುಗಡೆಗೆ ಇದ್ದ ಅವಕಾಶ ರದ್ದಾಗಲಿದ್ದು, ಎಲ್ಲ ನಿಲುಗಡೆಗೂ ಹಣ ಪಾವತಿಸಬೇಕಾಗುವುದು. ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶ ಎರಡೂ ಕಡೆ ಪಾರ್ಕಿಂಗ್ ನೀತಿ ಅನುಷ್ಠಾನಗೊಳಿಸಬೇಕಾಗಿದೆ.
ಆದರೆ, ಮೊದಲ ಹಂತದಲ್ಲಿ ನಗರದ ವಾಣಿಜ್ಯ ಪ್ರದೇಶಗಳಾದ ಮಾರುಕಟ್ಟೆ, ಮುಖ್ಯ ರಸ್ತೆಗಳು ಹಾಗೂ ಜನದಟ್ಟಣೆ ಇರುವ ಸ್ಥಳ, ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ ಜಾರಿಗೊಳಿಸಿದ ನಂತರದಲ್ಲಿ ವಸತಿ ಪ್ರದೇಶ ಪಾರ್ಕಿಂಗ್ ನೀತಿ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಡಲ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಕಿಂಗ್ ಸ್ಥಳ ತೋರಿಸಿ ವಾಹನ ಖರೀದಿಸಿ: ಇನ್ನು ಮುಂದೆ ಹೊಸ ವಾಹನ ಖರೀದಿಸಲು ಪಾರ್ಕಿಂಗ್ ಸ್ಥಳಾವಕಾಶದ ಬಗ ದೃಢೀಕರಣ ಪತ್ರ ಪಡೆಯಬೇಕು ಎಂದು ಹೊಸ ನೀತಿಯಲ್ಲಿ ಉಲ್ಲೇಖೀಸಲಾಗಿದೆ.ಸರ್ಕಾರದ ಸಮ ರ್ಥನೆ ನಗರದಲ್ಲಿ ನೂತನ ಪಾರ್ಕಿಂಗ್ ನೀತಿ ಜಾರಿ ಮಾಡು ತಿರ್ತು ವು ದರ ಮೂಲ ಉದ್ದೇಶವೇ ಜನ ಸ್ವಂತ ವಾಹನ ಬಿಟ್ಟು ಸಮೂಹ ಸಾರಿಗೆ ಬಳಸುವಂತೆ ಮಾಡುವುದು ಎಂದು ಸರ್ಕಾರ ಹೇಳಿದೆ. ಅಲ್ಲದೆ, ನಗ ರ ದಲ್ಲಿ 2020ರ ಮೇ ಅಂತ್ಯಕ್ಕೆ 94 ಲಕ್ಷಕ್ಕೂ ಹೆಚ್ಚು ವಾಹನಗ ಳ ನೋಂದಣಿ ಪ್ರಕ್ರಿಯೆ ಆಗಿದೆ. ಪ್ರತಿ ವರ್ಷವೂ ನಗರದಲ್ಲಿ ಶೇ.10 ಹೆಚ್ಚು ಪ್ರತಿಶತ ವಾಹನಗ ಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಸಂಚಾರ ದಟ್ಟಣೆಯನ್ನು ತಪ್ಪಿ ಸುವ ಉದ್ದೇಶದಿಂದ ನಗರ ದಲ್ಲಿ ಮೇಲ್ಸೇ ತುವೆ ನಿರ್ಮಾಣ ಹಾಗೂ ಮೊದಲನೇ ಹಂತದ ಮೆಟ್ರೋ ಕಾಮಗಾರಿಗಳು ಚಾಲ್ತಿಯಲ್ಲಿ ಇವೆ. ಆದರೆ, ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಸಂಚಾರದಲ್ಲಿ ಯಾವು ದೇ ರೀತಿಯ ಬದಲಾವಣೆಗಳು ಆಗಿಲ್ಲ. ಹೀಗಾಗಿ ಸಂಚಾರ ದಟ್ಟಣೆ ಕಡಿಮೆ ಆಗಿ, ವಾಯು ಮಾಲಿ ನ್ಯಕ್ಕೂ ಕಡಿವಾಣ ಬೀಳಲಿದೆ ಎಂದು ಅನುಮೋದನೆ ನೀಡಿರುವ ಪತ್ರದಲ್ಲಿ ವಿವರಿಸಿದೆ.