Advertisement

ಕನ್ನಡಕ್ಕೆ ಗೋವಿಂದ ಪೈ ಕೊಡುಗೆ ಅಪಾರ: ಸಿದ್ದು

03:45 AM Jan 20, 2017 | |

ಮಂಜೇಶ್ವರ: ಗ್ರೀಕ್‌ ಕೃತಿಗಳಲ್ಲಿ ಕನ್ನಡದ ಶಬ್ದಗಳನ್ನು ಪತ್ತೆಹಚ್ಚಿ ಕನ್ನಡದ ಪ್ರಾಚೀನತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ಕನ್ನಡ ಭಾಷೆಗೆ ಶಾಸಿಸ್ತ್ರಿಯ ಸ್ಥಾನಮಾನ ಲಭಿಸಲು ಕಾರಣರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ರಾಷ್ಟ್ರೀಯ ಸ್ಮಾರಕ “ಗಿಳಿವಿಂಡು’ ಯೋಜನೆಯಲ್ಲಿ ನಿರ್ಮಾಣಗೊಂಡ ಭವನಿಕಾ ರಂಗಮಂದಿರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಭವನದ ಮುಂದಿನ ಚಟುವಟಿಕೆಗಳಿಗೆ ಈಗಾಗಲೇ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದು,
ಇನ್ನೂ 1 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಈ ಮೊತ್ತ ಸಿಗಲಿದೆ. ಸ್ಮಾರಕದ ಎಲ್ಲ ಚಟುವಟಿಗೆಗಳಿಗೆ ಕರ್ನಾಟಕ ಸರ್ಕಾರ ಎಲ್ಲ ವಿಧದ ಸಹಕಾರ ನೀಡಲಿದೆ ಎಂದು ಭರವಸೆ ಸಿಎಂ ನೀಡಿದರು.

ಕೇರಳ ಸಿಎಂ ಪಿಣರಾಯಿ ವಿಜ ಯನ್‌, ಕರ್ನಾಟಕ ಅರಣ್ಯ ಇಲಾಖೆ ಸಚಿವ ಬಿ.ರಮಾನಾಥ ರೈ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next