Advertisement

ಸಿದ್ದುಗೆ ಮತ್ತಷ್ಟು ಶಾಸಕರು ಪಕ್ಷ ಬಿಡುವ ಹತಾಶೆ: ಕಾರಜೋಳ

01:29 PM Nov 02, 2020 | sudhir |

ಬಾಗಲಕೋಟೆ: ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ಬಿಡುವ ಭೀತಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಹತಾಶೆಗೊಂಡು ಏನೇನೋ ಹೇಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಿಂದ ಬಿಜೆಪಿಗೆ ಹೋಗಿರುವ ಎಲ್ಲ ಶಾಸಕರಿಗೆ ಉಪ ಚುನಾವಣೆ ಬಳಿಕ
ನಾಯಿ ಪಾಡು ಆಗಲಿದೆ ಎನ್ನುವ ಸಿದ್ದರಾಮಯ್ಯ ಮೊದಲ ತಮ್ಮ ಸ್ಥಿತಿ ನೋಡಿಕೊಳ್ಳಲಿ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿರುವ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವ ಜತೆಗೆ ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ.

Advertisement

ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಆ ಪಕ್ಷ ಬಿಡುವ ಭೀತಿ ಸ್ವತಃ ಸಿದ್ದರಾಮಯ್ಯ ಅವರಿಗಿದೆ. ಹೀಗಾಗಿ ಹತಾಶೆಗೊಂಡು ಈ ರೀತಿ ಹೇಳುತ್ತಿದ್ದಾರೆ. ನಾವು ಕಾಂಗ್ರೆಸ್‌ನ ಇನ್ನಷ್ಟು ಶಾಸಕರನ್ನು ಕರೆತರುವ ಕೆಲಸ ಮಾಡಲ್ಲ. ಆದರೆ, ಯಾರೇ ಬಂದರೂ ಪಕ್ಷ ಅವರನ್ನು ಕರೆದುಕೊಳ್ಳುತ್ತದೆ. ಪಕ್ಷ ಬೆಳೆಯಬೇಕು. ಬಿಜೆಪಿ ನಿಂತ ನೀರಲ್ಲ. ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಬೀಳುತ್ತದೆ ಎನ್ನುವ ಮಾಜಿ ಸಚಿವ ತನ್ವೀರ ಶೇಠ್ ಹೇಳಿಕೆ ನರಿ ಕಥೆ ಇದ್ದಂತೆ. ಹೋರಿಯೊಂದು ಮುಂದೆ ಹೋಗುತ್ತಿರುತ್ತದೆ. ಅದರ ಹಿಂದೆ ನರಿ ಬೆನ್ನು ಹತ್ತಿ ಹೋರಿ ಬಾಯಿಯಿಂದ ಬೀಳುವ ಅನ್ನ ತಿನ್ನಲು ಹಾತೊರೆಯುತ್ತದೆ. ಹೋರಿಯ ಬಾಯಿಯಿಂದ ಏನೂ ಬೀಳಲ್ಲ, ನರಿಗೆ ಏನೂ ಸಿಗುವುದಿಲ್ಲ. ಈ ಕಥೆಯಂತೆ ತನ್ವೀರ ಶೇಠ್ ಹೇಳುತ್ತಲೇ ಹೋಗುತ್ತಾರೆ. ಸರ್ಕಾರ ಬೀಳುವುದಿಲ್ಲ.

ಇದನ್ನೂ ಓದಿ:ಯಡಿಯೂರಪ್ಪ ನೇತೃತ್ವದಲ್ಲಿಯೇ ಮುಂದಿನ‌ ಚುನಾವಣೆ: ಬಿ.ಸಿ.ಪಾಟೀಲ್

ನ್ಯಾ.ಸದಾಶಿವ ಆಯೋಗದ ವರದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next