Advertisement
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಹಿರಿಯ ಅ ಧಿಕಾರಿಗಳು ಮತ್ತು ಸ್ಥಳೀಯ ಶಾಸಕ ಮಹಾಂತೇಶ ದೊಡಗೌಡರ ಸಾಥ್ ನೀಡಿದರು. ಅರಮನೆಗೆ ಭೇಟಿ ನೀಡಿದ ಅವರು, ದರ್ಬಾರ್ ಹಾಲ್, ಬತೇರಿ, ಅರಮನೆಯ ಮುಖ್ಯದ್ವಾರ, ಅತಿಥಿ ಕೋಣೆಗಳು, ಸಭಾಗೃಹ, ಭೋಜನಾಲಯ, ಪೂಜಾ ಕೊಠಡಿ, ಬಾವಿಗಳು, ಸ್ನಾನದ ಮನೆ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ನಂತರ ಕಿತ್ತೂರು ರಾಣಿ ಚೆನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆಭೇಟಿ ನೀಡಿ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳು, ಕತ್ತಿಗಳು, ಕೋಟ್, ಗುರಾಣಿ, ಕೆತ್ತಿದ ಮರದ ಬಾಗಿಲುಗಳು ಮತ್ತು ಕಿತ್ತೂರು ಅರಮನೆಯ ಕಿಟಕಿಗಳು, ಶಾಸನಗಳನ್ನು ಮತ್ತು ಪ್ರಾಚೀನ ವಸ್ತುಗಳ ಸಂಗ್ರಹವನ್ನು ವೀಕ್ಷಿಸಿದರು.
Related Articles
Advertisement
ರಾಜ್ಯಪಾಲರು ಮಾತನಾಡಿ, ಮಹಿಳಾ ದಿನದಂದು ಕಿತ್ತೂರಿಗೆ ಆಗಮಿಸಿರುವದು ಬಹಳ ಸಂತೋಷ ತಂದಿದೆ. ರಾಣಿ ಚನ್ನಮ್ಮಾಜಿ ಕರ್ಮಭೂಮಿಗೆ ಭೇಟಿ ನೀಡುವ ಉದ್ದೇಶವಿತ್ತು. ಅದು ಈಗ ಸಾಧ್ಯವಾಯಿತು. ದೇಶದ ಸ್ವಾತಂತ್ರ್ಯದ ಕಿಡಿ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದ ವೀರ ಮಹಿಳೆ ರಾಣಿ ಚನ್ನಮ್ಮಾಜಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ಮಹನೀಯರು ಹೋರಾಟ ಮಾಡಿದರು.ಅವರ ತ್ಯಾಗ-ಬಲಿದಾನ-ಸಂಘರ್ಷದಿಂದ ಸ್ವಾತಂತ್ರ್ಯ ದೊರೆಯಿತು. ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಮತ್ತಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸಿದರು