ಬೆಂಗಳೂರು: ಲೋಕಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕರು ಅಹಿಂಸಾ ಮಾರ್ಗವನ್ನು ಅನುಸರಿಸುವ ಮೂಲಕ ಶಾಂತಿಯ ಸಮಾಜ ನಿರ್ಮಾಣ ಮಾಡಲು ಮುಂದಡಿಯಿಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಚಿಕ್ಕಪೇಟೆಯಲ್ಲಿ ಜೈನ ಸಮುದಾಯದ ವತಿಯಿಂದ ಆಯೋಜಿಸ ಲಾಗಿದ್ದ ಸದ್ಗುರು ಸಮಾಗಮ, ರಾಜೋಹರನ್ ಉತ್ಸವದಲ್ಲಿ ಮಾತನಾಡಿದ ಅವರು, ಜೈನ ಸಮಾಜವು ಮಾನವ ಸೇವೆಯ ಜತೆಗೆ ಅನೇಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ ದತ್ತಿ ಕಾರ್ಯಗಳ ಮೂಲಕ ಜೈನ ಧರ್ಮದ ಕೊನೆಯ ತೀರ್ಥಂಕರರಾದ ಶ್ರೀ ಮಹಾವೀರ ಸ್ವಾಮಿಗಳ “ಬದುಕು ಮತ್ತು ಬದುಕಲು ಬಿಡಿ” ಎಂಬ ಅಮರ ಸಂದೇಶವನ್ನು ಈಡೇರಿಸುತ್ತಿದೆ. ಧೀಕ್ಷೆ ಪಡೆದವರು ಕ್ರೋಧ, ಅಹಂಕಾರ, ಮೋಸ, ಆಸೆ ಇತ್ಯಾದಿಗಳನ್ನು ಜಯಿಸುತ್ತಿದ್ದಾರೆ ಎಂದುವರು ಹೇಳಿದರು.
ಆಚಾರ್ಯ ಪ್ರವರ್ ಶ್ರೀ ವರ್ಧಮಾನ್ ಸಾಗರ್ ಸುರೀಶ್ವರ್ ಮಹಾರಾಜ್ ಮತ್ತು ಶ್ರೀಮದ್ ವಿಜಯ್ ನರರತ್ನ ಸುರೀಶ್ವರ್ ಮಹಾರಾಜ್ ಸಾಹಿಬ್, ಸಚಿವ ಬಿ.ಸಿ. ನಾಗೇಶ್ ಮತ್ತಿತರರಿದ್ದರು.