ಜೈಪುರ: ರಾಜಸ್ಥಾನ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಜಟಾಪಟಿ ಮುಂದುವರಿದಿದ್ದು, ಜುಲೈ 31ರಿಂದ ಅಧಿವೇಶನ ಕರೆಯಲು ಅನುಮತಿ ನೀಡಬೇಕೆಂಬ ಗೆಹ್ಲೋಟ್ ಅವರ ಪ್ರಸ್ತಾಪವನ್ನು ರಾಜ್ಯಪಾಲ ಕಲ್ ರಾಜ್ ಮಿಶ್ರಾ ಮೂರನೇ ಬಾರಿಯೂ ತಿರಸ್ಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ರಾಜ್ಯಪಾಲರಿಗೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಸಿಎಂ ಗೆಹ್ಲೋಟ್ ಕೂಡಾ ಬಹುಮತ ಪರೀಕ್ಷೆ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುವಂತೆ BSP ಶಾಸಕರಿಗೆ ವಿಪ್
ವಿಧಾನಸಭೆ ಅಧಿವೇಶನ ನಡೆಸುವಂತೆ ಕೋರಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಇತ್ತೀಚೆಗಷ್ಟೇ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಅವರ ಮೊರೆಹೋಗಿದ್ದರು. ಎರಡನೇ ಬಾರಿಗೆ ಮನವಿ ಸಲ್ಲಿಸಿದ್ದ ಅವರು, ಜು.31ರಂದು ವಿಶೇಷ ಅಧಿವೇಶನ ಕರೆಯುವಂತೆ ಕೋರಿದ್ದರು. ಆದರೆ, ಅವರು ಎಲ್ಲೂ ವಿಶ್ವಾಸಮತ ಯಾಚನೆ ಕುರಿತು ಪ್ರಸ್ತಾವಿಸಿಲ್ಲ. ಬದಲಾಗಿ, ಕೋವಿಡ್ 19ವೈರಸ್ ಕುರಿತ ಚರ್ಚೆಯೇ ಅಧಿವೇಶನದ ಪ್ರಮುಖ ಅಜೆಂಡಾ ಎಂದು ಹೇಳಿದ್ದರು.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ಪೈಲಟ್ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಸ್ಪೀಕರ್ ಸುಪ್ರೀಂಗೆ
ಈಗಾಗಲೇ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರು ವಾಪಸ್ ಪಡೆದಿದ್ದರು. ಅಲ್ಲದೇ ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ನೋಟಿಸ್ ಸಂಬಂಧ ನೀಡಿರುವ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಹೊಸ ಅರ್ಜಿಯನ್ನು ದಾಖಲಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.