ಬೆಂಗಳೂರು: ಯುವ ಉದ್ಯಮಿಗಳು ದೇಶವನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಬಹುದಾಗಿದ್ದು, ಯುವಶಕ್ತಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.
ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಯಂಗ್ ಪ್ರಸಿಡೆಂಟ್ ಆರ್ಗನೈಸೇಶನ್‌ವತಿಯಿಂದ ಆಯೋಜಿಸ ಲಾಗಿದ್ದ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ದೇಶ ಸದೃಢ ರಾಷ್ಟ್ರ ವನ್ನಾಗಿಸಲು ಯುವಜನತೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಇಂದಿನ ಯುವಜನತೆಯೇ ನಮ್ಮ ದೇಶದ ಭವಿಷ್ಯ.
ಇದನ್ನೂ ಓದಿ;- ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಶಾಸಕ ಅಮರೇಗೌಡ ಪಾಟೀಲರಿಗೆ ಮನವಿ
ಹಾಗಾಗಿ, ಯುವಜನತೆಯಲ್ಲಿ ನಾವೆಲ್ಲರೂ ಶಕ್ತಿ ತುಂಬ ಬೇಕು, ಯುವಶಕ್ತಿ ಜಾಗೃತವಾದರೆ ಮಾತ್ರ ನಮ್ಮ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ಉತ್ತಮ ಶಿಕ್ಷಣ ಪಡೆದು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಯವಜನತೆ ಮೇಲಿದೆ.
ಸಂವಹನಾ, ವೃತ್ತಿ ಕೌಶಲ್ಯ, ಆತ್ಮವಿಶ್ವಾಸ, ತಾಳ್ಮೆ ರೂಢಿಸಿಕೊಳ್ಳುವುದರ ಜೊತೆಗೆ ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ಉದ್ಯೋಗ ಅರ ಸುವ ಬದಲು ಯುವಪೀಳಿಗೆ ಉದ್ಯೋಗದಾತರಾಗ ಬೇಕು ಎಂದು ಅವರು ಅಭಿಪ್ರಾಯಪಟ್ಟರು. ವೈಪಿಒ ಅಧ್ಯಕ್ಷರಾದ ತುಲಸ್ಯಾನ್, ಅಮಿತ್ ಚಾವ್ಲಾ ಮತ್ತು ತ್ರಿಷ್ಟಾ ರಾಮಮೂರ್ತಿ ಇದ್ದರು