Advertisement

ಆಮೀರ್‌ಪೆಟ್‌-ಹೈ ಟೆಕ್‌ ಸಿಟಿ ಮೆಟ್ರೋ : ರಾಜ್ಯಪಾಲರಿಂದ ಚಾಲನೆ

06:40 AM Mar 20, 2019 | udayavani editorial |

ಹೈದರಾಬಾದ್‌ : ಬಹುಕಾಲದಿಂದ ಈ ಮಹಾನಗರದ ಜನರು ಕಾಯುತ್ತಿದ್ದ ಮೆಟ್ರೋ ರೈಲು ಸೇವೆ ಕೊನೆಗೂ ಸಾಕಾರಗೊಂಡಿದೆ. 

Advertisement

ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲರಾಗಿರುವ ಇ ಎಸ್‌ ಎಲ್‌ ನರಸಿಂಹನ್‌ ಅವರಿಂದು ಹತ್ತು ಕಿಲೋ ಮೀಟರ್‌ ಮಾರ್ಗದ ಆಮೀರ್‌ಪೆಟ್‌ ನಿಂದ ಹೈ ಟೆಕ್‌ ಸಿಟಿ ವರೆಗಿನ ಮೆಟ್ರೋ ರೈಲು ಕಾರಿಡಾರ್‌ 3 ಸೇವೆಗೆ ಚಾಲನೆ ನೀಡಿದರು. 

10 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ 9 ಸ್ಟೇಶನ್‌ಗಳಿವೆ. ಈ ಮೆಟ್ರೋ ಸೇವೆಯಲ್ಲಿ ಅತ್ಯಂತ ಜನ-ವಾಹನ ದಟ್ಟನೆಯ ಐಟಿ ಮತ್ತು ಐಟಿಇಎಸ್‌ ಸೇವೆಗಳ ಹೈಟೆಕ್‌ ಸಿಟಿ ಪ್ರದೇಶ, ಮಾಧಾಪುರ, ಗಚ್ಚೀಬೌಲೀ, ಜುಬಿಲಿ ಹಿಲ್ಸ್‌ ಪ್ರದೇಶಗಳನ್ನು ಪರಸ್ಪರ ಜೋಡಿಸಲಿದೆ. ಇಂದು ಬುಧವಾರ ಸಂಜೆ 4 ಗಂಟೆಯಿಂದ ಕ್ರಮಬದ್ಧ ಮೆಟ್ರೋ ರೈಲು ಸೇವೆ ಆರಂಭವಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next