ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹಿಂದಿನವರು ಬೆಂಗಳೂರು ಅಭಿವೃದ್ಧಿ ಮಾಡದ ಕಾರಣ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಕಾಲಕಾಲಕ್ಕೆ ರಸ್ತೆ ಅಭಿವೃದ್ಧಿ, ರಾಜಕಾಲುವೆ ಸಮಸ್ಯೆ ಸರಿಪಡಿಸಿದ್ದರೆ ಈ ಸಮಸ್ಯೆಗಳು ಉದ್ಭವವಾಗುತ್ತಿರಲಿಲ್ಲ. ಇವಾಗ ನಾನು ರಸ್ತೆ, ರಾಜಕಾಲುವೆ ಅಭಿವೃದ್ಧಿ ಸವಾಲನ್ನು ಸ್ವೀಕಾರ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದರು.
ಹೆಬ್ಬಾಳ ವಿಧಾನಸಭಾಕ್ಷೇತ್ರದ ಗಂಗಾನಗರದಲ್ಲಿ ಕೆಂಪೇಗೌಡ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾಲುವೆಗೆ 1600 ಕೋಟಿ ಕೊಟ್ಟಿದ್ದೇವೆ. ಸಬ್ ಅರ್ಬನ್ ಗೆ ಪ್ರಧಾನಿಗಳು ಅಡಿಗಲ್ಲು ಹಾಕಿದ್ದಾರೆ. ಫೆರಿಫರಲ್ ರಿಂಗ್ ರಸ್ತೆಗೂ ಮುಂದೆ ಅಡಿಗಲ್ಲು ಹಾಕುತ್ತೇವೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ದೂರದೃಷ್ಟಿ ಮೂಲಕ ಮೂಲಭೂತ ಸೌಕರ್ಯ ಸಿಗಲು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವ ಎಂದರು.
ಇದನ್ನೂ ಓದಿ:ಪ್ರವಾದಿ ವಿರುದ್ಧ ಹೇಳಿಕೆ: ನೂಪುರ್ ಶರ್ಮಾ ಬಹಿರಂಗವಾಗಿ ದೇಶದ ಕ್ಷಮೆಯಾಚಿಸಬೇಕು: ಸುಪ್ರೀಂ
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎನರ್ಜಿ ಇದ್ದಂತೆ. ವಿಶೇಷವಾಗಿ ಅವರಿಗೆ ಈ ಕ್ಷೇತ್ರದ ಜೊತೆ ಆತ್ಮೀಯ ಸಂಬಂಧ ಇದೆ. ಚುನಾವಣೆಗೆ ನಿಲ್ಲದಿದ್ದರೂ ಎಲ್ಲರ ಜೊತೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು, ರಾಜ್ಯದ ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಮಾಡುವ ನಾಯಕ. ಒಬ್ಬ ವ್ಯಕ್ತಿ ಜನಪರ ನಾಯಕ ನಾಗಲು ಅಧಿಕಾರವೇ ಬೇಕಿಲ್ಲ. ಜನರ ಹೃದಯದಲ್ಲಿ ಸ್ಥಾನ ಪಡೆದವರಿಗೆ ಜನರ ಆಶೀರ್ವಾದ ಸಿಗುವುದು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕಾರ್ಯಗಳೆಲ್ಲವೂ ಯಶಸ್ವಿ ಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸಚಿವ ಬಿಸಿ ನಾಗೇಶ್,ಉಮೇಶ್ ಕತ್ತಿ,ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಾಗಿಯಾಗಿದ್ದರು.