Advertisement

ತೈಲ ಬೆಲೆ ಇಳಿಕೆಗೆ ಸರಕಾರದ ಯತ್ನ

12:32 AM Oct 19, 2021 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಪ್ರತಿದಿನವೂ ಪೆಟ್ರೋಲ್‌-ಡೀಸೆಲ್‌ ಬೆಲೆ ಸಾರ್ವಕಾಲಿಕ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತೈಲ ಬೆಲೆ ಇಳಿಕೆ ಕುರಿತು ಹಣಕಾಸು ಸಚಿವಾಲಯದೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಪೆಟ್ರೋಲಿಯಂ ಬೆಲೆಯನ್ನು ಕಡಿತಗೊಳಿಸಲು ಯಾವ್ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪೆಟ್ರೋಲಿಯಂ ಸಚಿವಾಲಯವು ವಿತ್ತ ಸಚಿವಾಲಯದ ಜತೆ ಚರ್ಚಿಸುತ್ತಿದೆ. ಇಂಧನ ಬೆಲೆ ಗ್ರಾಹಕರ ಜೇಬು ಸುಡಲು ಅತ್ಯಧಿಕ ತೆರಿಗೆಯೂ ಕಾರಣವಾಗಿದ್ದು, ತೆರಿಗೆ ಕಡಿತ ಮಾಡುವ ಮೂಲಕ ಜನಸಾಮಾನ್ಯರ ಹೊರೆ ಇಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಒಂದಾಗಿ ತೈಲ ಬೆಲೆಯ‌ನ್ನು ಇಳಿಕೆ ಮಾಡಬೇಕಾಗುತ್ತದೆ. ಈ ವಿಚಾರಗಳ ಕುರಿತು ಅಂತಿಮ ನಿರ್ಧಾರವನ್ನು ಕೇಂದ್ರ ವಿತ್ತ ಇಲಾಖೆ ಕೈಗೊಳ್ಳಬೇಕು ಎಂದು ಮೂಲಗಳನ್ನು ಉಲ್ಲೇಖೀಸಿ ಎನ್‌ಡಿಟಿವಿ ವರದಿ ಮಾಡಿದೆ.

ಒಪೆಕ್‌ಗೆ ಭಾರತ ಮನವಿ: ಅತ್ಯಧಿಕ ತೈಲ ಬೆಲೆಯು ಈಗಷ್ಟೇ ಚೇತರಿಕೆ ಕಾಣುತ್ತಿರುವ ಜಾಗತಿಕ ಆರ್ಥಿಕತೆಗೆ ದೊಡ್ಡ ಹೊಡೆತ ನೀಡುತ್ತಿದೆ. ತೈಲ ಬೆಲೆಯು ಯಾವತ್ತೂ ಉತ್ಪಾದಕರು ಮತ್ತು ಗ್ರಾಹಕರ ಹಿತಾಸಕ್ತಿಯ ಸಮತೋಲನವನ್ನು ಕಾಯ್ದುಕೊಳ್ಳಬೇಕು.

ಇದನ್ನೂ ಓದಿ:ಸೇನಾ ಕವಾಯತು ಸ್ಪರ್ಧೆ: ಗೋರ್ಖಾ ಪಡೆಗೆ ಸ್ವರ್ಣ ಪದಕ

Advertisement

ಈಗ ಪೂರೈಕೆಗಿಂತಲೂ ಬೇಡಿಕೆ ಹೆಚ್ಚಿರುವ ಕಾರಣ ಬೆಲೆಯೂ ಹೆಚ್ಚಿದೆ. ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೈಲ ಬೆಲೆ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ತೈಲ ಉತ್ಪಾದಕ ರಾಷ್ಟ್ರಗಳಾದ ಸೌದಿ ಅರೇಬಿಯಾ ಮತ್ತು ಒಪೆಕ್‌ ರಾಷ್ಟ್ರಗಳಿಗೆ ಭಾರತ ಮನವಿ ಮಾಡಿದೆ.

ತೆರಿಗೆ ಸುಲಿಗೆ: ರಾಹುಲ್‌ ಆರೋಪ
ಪೆಟ್ರೋಲ್‌-ಡೀಸೆಲ್‌ ಬೆಲೆಯು ವೈಮಾನಿಕ ಇಂಧನ ಬೆಲೆಯನ್ನೂ ಮೀರಿಸಿದ ಬೆನ್ನಲ್ಲೇ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಕೇಂದ್ರ ಸರಕಾರವು ಜನರಿಂದ ತೆರಿಗೆ ಸುಲಿಗೆ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಪ್ರಿಯಾಂಕಾ ವಾದ್ರಾ ಅವರೂ ಟ್ವೀಟ್‌ ಮಾಡಿ, “ಹವಾಯಿ ಚಪ್ಪಲಿ ಧರಿಸುವವರನ್ನು ವಿಮಾನದಲ್ಲಿ ಹಾರುವಂತೆ ಮಾಡುತ್ತೇನೆ ಎಂದಿದ್ದ ಸರಕಾರ, ಈಗ ಜನರು ರಸ್ತೆಯಲ್ಲೂ ಸಂಚರಿಸದಂತೆ ಮಾಡಿಬಿಟ್ಟಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next