ಪಣಜಿ: ಶಿಕ್ಷಣ ಕ್ಷೇತ್ರದಲ್ಲಿ ಗೋವಾ ರಾಜ್ಯವನ್ನು ಅಗ್ರಸ್ಥಾನಕ್ಕೆ ತರಲು ಸರ್ಕಾರ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಸಹಕಾರದಲ್ಲಿ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಹಡಗು ಉದ್ಯೋಗದ ಕುರಿತು ಪ್ರಾಧಾನ್ಯತೆ ನೀಡಲಿದೆ. ಕೌಶಲ್ಯ ಭಾರತದ ಅಡಿಯಲ್ಲಿ ಗೋವಾ ಸರ್ಕಾರ ವಿದ್ಯಾರ್ಥಿಗಳಿಗೆ ವಿವಿಧ ವೈಜ್ಞಾನಿಕ ಜ್ಞಾನ ನೀಡಲು ಒತ್ತು ಕೊಡಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.
ಇದನ್ನೂ ಓದಿ:ಬಿಜೆಪಿ ಜಾರಿಗೆ ತಂದಿರುವ ಬೃಹತ್ ಯೋಜನೆಗಳನ್ನು ಕಾಂಗ್ರೆಸ್ ರದ್ಧುಗೊಳಿಸಲಿದೆ: ಪಿ.ಚಿದಂಬರಂ
ವಾಸ್ಕೊದ ಜುವಾರಿ ನಗರದ ಮುರಗಾಂವ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಶಾಸಕ ದಿ. ವಸಂತರಾವ್ ಜೋಶಿ ರವರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪಾಲಿದೆ. ಈ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದ ರಾಜೇಂದ್ರ ಅರ್ಲೇಕರ್ ರವರು ಹಿಮಾಚಲಪ್ರದೇಶದ ರಾಜ್ಯಪಾಲರಾಗಿದ್ದಾರೆ. ಅಂತೆಯೇ ಮಾವಿನ್ ಗುದಿನ್ಹೊ ಮತ್ತು ಮಿಲಿಂದ್ ನಾಯ್ಕ ರಾಜ್ಯ ಮಂತ್ರಿಮಂಡಳದ ಸಚಿವರಾಗಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಧವ ಕಾಮತ್, ಉಪಾಧ್ಯಕ್ಷ ಪ್ರಶಾಂತ್ ಜೋಶಿ, ಭಾಸ್ಕರ ನಾಯ್ಕ, ಮತ್ತಿತರರು ಉಪಸ್ಥಿತತರಿದ್ದರು.