Advertisement

ಸರ್ಕಾರಿ ವಾಹನಗಳ ನೋಂದಣಿ ಸಂಖ್ಯೆ ಕನ್ನಡದಲ್ಲಿ: ರಮೇಶ್‌

10:02 AM Sep 15, 2017 | Team Udayavani |

ದಾವಣಗೆರೆ: ತಮ್ಮ ವಾಹನ ಸೇರಿದಂತೆ ಎಲ್ಲಾ ಸರ್ಕಾರಿ ವಾಹನಗಳ ನೋಂದಣಿ ಸಂಖ್ಯೆಯನ್ನು ಕನ್ನಡದಲ್ಲಿ ಬರೆಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಭರವಸೆ ನೀಡಿದ್ದಾರೆ.

Advertisement

ಗುರುವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕನ್ನಡ ಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು,ತಾವು ಬಳಸುವ ಸರ್ಕಾರಿ ವಾಹನ ಸೇರಿದಂತೆ ಎಲ್ಲಾ ವಾಹನಗಳ ನೋಂದಣಿ ಸಂಖ್ಯೆಯನ್ನು ಕನ್ನಡೀಕರಣಗೊಳಿಸಲಾಗುವುದು ಎಂದರು.

ಸಭೆಯ ಆರಂಭದಲ್ಲಿಯೇ ಜಾಗೃತಿ ಸಮಿತಿ ಸದಸ್ಯ ಜಿ.ಎಂ. ಹನುಮಂತಪ್ಪ ವಿಷಯ ಪ್ರಸ್ತಾಪಿಸಿ, ಸರ್ಕಾರಿ ವಾಹನಗಳ ನೋಂದಣಿ ಸಂಖ್ಯೆ ಕನ್ನಡದಲ್ಲಿರಬೇಕು. ಜಿಲ್ಲಾಧಿಕಾರಿಗಳ ವಾಹನ ನೋಂದಣಿ ಸಂಖ್ಯೆ ಸಹ ಇಂಗ್ಲಿಷ್‌ನಲ್ಲಿದೆ ಎಂದರು.

ನಂತರ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮುಂಜುನಾಥ್‌ ಕುರ್ಕಿ, ನವೆಂಬರ್‌ 1ರ ಒಳಗೆ ನಗರ ಹಾಗೂ ಜಿಲ್ಲೆಯ ವಿವಿಧ ಅಂಗಡಿ ಮುಂಗಟ್ಟುಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೆ ಪ್ರದರ್ಶಸಿಸುವಂತೆ ಕ್ರಮ ಕೈಗೊಳ್ಳಬೇಕು. ಇಡೀ ತಿಂಗಳು ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ, ಕಡ್ಡಾಯವಾಗಿ ಕನ್ನಡ ಚಲನಚಿತ್ರ ಪ್ರದರ್ಶನವಾಗುವಂತೆ ಆದೇಶ ಮಾಡಬೇಕೆಂದರು.

‌ರ್ಷ ಮೇಲ್ಪಟ್ಟವರ ಆಯ್ಕೆ ಸೂಕ್ತ. ಕಿರು ವಯಸ್ಸಿನವರಿಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿವೆ. ಹಾಗೂ ಆಯ್ಕೆ ಸಮಿತಿಯಲ್ಲಿ ಗರಿಷ್ಠ 5 ಮಂದಿ ಇರುವಂತೆ ಸಿಮೀತಗೊಳಿಸುವುದು ಒಳ್ಳೆಯದು ಎಂದರು.

Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಡಾ| ಸರೋಜಿನಿ ಮಹಿಷಿನಿ ವರದಿಯ
ಅಂಶಗಳು ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಜಾರಿಯಾಗುವಂತೆ ಕ್ರಮ ವಹಿಸಬೇಕು ಎಂದರು.

ಇನ್ನೋರ್ವ ಸದಸ್ಯ ಡಿ.ಎನ್‌. ಮಂಜಪ್ಪ ಮಾತನಾಡಿ, ಬ್ಯಾಂಕ್‌ಗಳಲ್ಲಿ ಎಲ್ಲಾ ನಮೂನೆಗಳು ಇಂಗ್ಲೀಷ್‌ನಲ್ಲಿವೆ. ಸರ್ಕಾರದ ಆದೇಶ ತ್ರಿಭಾಷ ಸೂತ್ರದ ಅನ್ವಯ ಮೊದಲು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕೆಂದಿದೆ. ಹೊರ ರಾಜ್ಯದಿಂದ ಬಂದಿರುವ ಬ್ಯಾಂಕ್‌ ಅಧಿಕಾರಿಗಳು ಕನ್ನಡ ಕಲಿತು ಕನ್ನಡಿಗರೊಂದಿಗೆ ಕನ್ನಡದಲ್ಲಿಯೆ ವ್ಯವಹರಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್‌. ಅಶ್ವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುಲಾಂಬ, ತಾಪಂ ಇಒ ಪ್ರಭುದೇವ, ಕನ್ನಡಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ ಜೈನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next