Advertisement

ಕುಂದುಕೊರತೆಗಳ ಮೇಲ್ಮನವಿ ಸಮಿತಿಯ ರಚನೆ ಕುರಿತು ಶೀಘ್ರ ಪ್ರಕಟ

09:11 PM Oct 29, 2022 | Team Udayavani |

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿನ ಕುಂದು-ಕೊರತೆಗಳು ಮತ್ತು ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರಂಭದಲ್ಲಿ ಒಂದು ಅಥವಾ ಎರಡು ಸಮಿತಿಗಳನ್ನು ರಚಿಸಲಾಗುವುದು. ನಂತರ ಅಗತ್ಯಕ್ಕೆ ಅನುಸಾರವಾಗಿ ಸಮಿತಿಗಳ ಸಂಖ್ಯೆಯನ್ನು ಏರಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯದ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

Advertisement

ಶುಕ್ರವಾರ ಕೇಂದ್ರ ಸರ್ಕಾರ ಮಾಹಿತಿ ಮತ್ತು ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತಂದಿತ್ತು. “ಕೇಂದ್ರ ಸರ್ಕಾರವು ಕುಂದುಕೊರತೆಗಳ ಮೇಲ್ಮನವಿ ಸಮಿತಿಯ ರಚನೆ, ವ್ಯಾಪ್ತಿ, ಕಾರ್ಯವಿಧಾನ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಶೀಘ್ರದಲ್ಲೇ ಪ್ರಕಟಿಸಲಿದೆ. ಮೂರು ತಿಂಗಳ ಒಳಗಾಗಿ ಸಮಿತಿಯನ್ನು ರಚಿಸಲಿದೆ,’ ಎಂದು ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

“ಸಾಮಾಜಿಕ ಜಾಲತಾಣಗಳ ಬಗೆಗಿನ ಅನೇಕ ದೂರುಗಳು ಪರಿಹಾರವಾಗದೇ ಹಾಗೇ ಉಳಿದಿವೆ. ಇದನ್ನು ಸೂಕ್ತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಮಿತಿಯ ಅಗತ್ಯವಿದೆ,’ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, “ಮೊದಲು ಅವರು ಟಿವಿ ಜಾಲತಾಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಈಗ ಸಾಮಾಜಿಕ ಜಾಲತಾಣಗಳನ್ನು ತಮ್ಮ ನಿಯಂತ್ರಣದಲ್ಲಿ ಇರಿಸಲು ಮುಂದಾಗಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next