ಹೆಚ್ಚುವರಿ ಹಾಸ್ಟೆಲ್ ತೆರೆಯಲು ಸರಕಾರ ನಿರ್ಧರಿಸಿದೆ: ಶ್ರೀನಿವಾಸ ಪೂಜಾರಿ
Team Udayavani, Dec 24, 2021, 6:20 AM IST
ಬೆಳಗಾವಿ: ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿ ವಸತಿ ನಿಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಬಂದಿರುವುದರಿಂದ ಹೆಚ್ಚುವರಿ ಹಾಸ್ಟೆಲ್ ತೆರೆಯಲು ಸರಕಾರ ನಿರ್ಧರಿಸಿದೆ
ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಬಿಜೆಪಿಯ ಚಿದಾನಂದ ಗೌಡ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಮಾತ್ರ ಈ ಸಮಸ್ಯೆಯಿದೆ. 1,137 ಹಾಸ್ಟೆಲ್‌ಗಳಲ್ಲಿ 1 ಲಕ್ಷ 22 ಸಾವಿರ 78 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲು ಅವಕಾಶವಿದೆ. ಪ್ರಸಕ್ತ ಸಾಲಿನಲ್ಲಿ 1 ಲಕ್ಷ 26 ಸಾವಿರ 259 ಅರ್ಜಿ ಬಂದಿವೆ. ನಿಗದಿತ ಗುರಿಗಿಂತ ಶೇ. 5ರಷ್ಟು ಹೆಚ್ಚುವರಿ ಪ್ರವೇಶ ಪಡೆದುಕೊಳ್ಳಲು ಸೂಚಿಸಲಾಗಿತ್ತು. ಅನಂತರದಲ್ಲಿ ಮತ್ತೆ ಶೇ. 10ರಷ್ಟು ಹೆಚ್ಚಿಸಲಾಯಿತು. ಆದರೆ, ಕುಡಿಯುವ ನೀರು, ಶೌಚಾಲಯ ಸೇರಿ ಸೌಲಭ್ಯ ಸಮಸ್ಯೆಗಳಿಗೆ ಸಂಬಂಧಿಸಿದ ದೂರು ಬಂದಿದ್ದವು ಎಂದರು.
ಇದನ್ನೂ ಓದಿ:ಮಣಿಪುರಕ್ಕೆ ಮಯನ್ಮಾರ್ ಉಗ್ರರಿಂದ ದಾಳಿ? ಕೇಂದ್ರ ಗುಪ್ತಚರ ಇಲಾಖೆಯ ಮುನ್ನೆಚ್ಚರಿಕೆ
ಪೊಲೀಸರ ಬಾಕಿ ಪಾವತಿ
ಬೆಳಗಾವಿ: ಪೊಲೀಸರ ಬಾಕಿ ವೇತನವನ್ನು ಒಂದು ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಪಾವತಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಗೃಹ ಸಚಿವರ ಪರ ಉತ್ತರಿಸಿದ ಅವರು, ಹಿಂದಿನ ವರ್ಷದ ವೇತನ ಭತ್ತೆಗೆ 105 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ. ಆಯ ವ್ಯಯದಲ್ಲಿ ಅವಕಾಶ ನೀಡಲು ಇಲಾಖೆಗೆ ನಿರ್ದೇಶಿಸ ಲಾ ಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕೇಂದ್ರ ಸ್ಪಂದಿಸದಿದ್ದರೆ ರಾಜ್ಯ ಸರ್ಕಾರದಿಂದಲೇ ಓವರ್ ಬ್ರಿಡ್ಜ್ ನಿರ್ಮಾಣ…
Belagavi: ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ: ಸಚಿವೆ ಹೆಬ್ಬಾಳ್ಕರ್
Belagavi; ಲಕ್ಷ್ಮೀ ಹೆಬ್ಬಾಳ್ಕರ್ ನಾಳೆ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ತ್ವರಿತ ಕ್ರಮಕ್ಕೆ ಸಚಿವೆ ಹೆಬ್ಬಾಳ್ಕರ್ ಸೂಚನೆ
ಮನೆ ಬೀಗ ತೆರವು ಮಾಡಿಸಿ ಮಾನವೀಯತೆ ತೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್