Advertisement

ಜೂನ್‌ನೊಳಗೆ 60 ಲಕ್ಷ ಉದ್ಯೋಗ ಸೃಷ್ಟಿ

01:07 AM Nov 18, 2020 | mahesh |

ಹೊಸದಿಲ್ಲಿ: ಮುಂದಿನ ವರ್ಷದ ಜೂನ್‌ ಒಳಗಾಗಿ “ಆತ್ಮನಿರ್ಭರ ಭಾರತ್‌ ರೋಜ್‌ಗಾರ್‌ ಯೋಜನೆ’ (ಎಬಿಆರ್‌ವೈ) ಅನ್ವಯ 50-60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಕಳೆದ ವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ ಹೊಸ ಯೋಜನೆಯಾ­ಗಿದೆ. ಮತ್ತೂಂದು ಮಹತ್ವದ ಮಾಹಿತಿಯಂತೆ ಉದ್ಯೋಗಿಗಳ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ)ಯ ದತ್ತಾಂಶ ಪ್ರಕಾರ ಕೊರೊನಾ ವೈರಸ್‌ ದೇಶದಲ್ಲಿ ಧಾಂಗುಡಿ ಇಡಲು ಶುರು ಮಾಡಿದ ಸಂದರ್ಭ­ದಲ್ಲಿ 20 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದು ಗೊತ್ತಾಗಿದೆ.

Advertisement

“ಕೇಂದ್ರ ಸರ್ಕಾರ 2021ರ ಜೂನ್‌ ಒಳಗಾಗಿ 50-60 ಲಕ್ಷ ಉದ್ಯೋಗವನ್ನು ಎಬಿಆರ್‌ವೈ ಮೂಲಕ ಸೃಷ್ಟಿಸಲು ಉದ್ದೇಶಿಸ­ಲಾಗಿದೆ. ಇಪಿಎಫ್ಒ ಪ್ರಕಾರ ಸೋಂಕು ವ್ಯಾಪಕವಾಗಿ ಹಬ್ಬಲು ಆರಂಭ­ವಾದ ದಿನಗಳಲ್ಲಿ 20 ಲಕ್ಷ ಉದ್ಯೋಗ ನಷ್ಟವಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಯೋಜನೆ ಬಗ್ಗೆ ಮಾತನಾಡಿದ ಆ ಅಧಿಕಾರಿ, 2020ರ ಅಕ್ಟೋಬರ್‌ನಿಂದ 2021 ಜೂನ್‌ವರೆಗೆ ಖಾಸಗಿ ಕಂಪನಿಗಳು ಕನಿಷ್ಠ ಉದ್ಯೋಗಿಗಳನ್ನು ಇರಿಸಿಕೊಳ್ಳಬೇಕಾಗಿದೆ. ಈ ಮೂಲಕ ಇಪಿಎಫ್ನ ಸಬ್ಸಿಡಿ ಪಡೆಯಲು ಅರ್ಹತೆ ಪಡೆಯುತ್ತವೆ ಎಂದಿದ್ದಾರೆ.

ಮೋದಿ ಕರೆಗೆ ಆಧ್ಯಾತ್ಮಿಕ ಗುರುಗಳ ಸ್ಪಂದನೆ
ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ “ಸ್ಥಳೀಯ ಉತ್ಪನ್ನಗಳ ಖರೀದಿ’ಗೆ ಆದ್ಯತೆ ನೀಡುವಂಥ ಅಭಿಯಾನಕ್ಕೆ ಬೆಂಬಲ ನೀಡುವಂತೆ ಪ್ರಧಾನಿ ಮೋದಿ ನೀಡಿದ್ದ ಕರೆಗೆ ಹಲವು ಆಧ್ಯಾತ್ಮಿಕ ಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶ್ರೀ ರವಿಶಂಕರ್‌ ಗುರೂಜಿ, ಸದ್ಗುರು ಜಗ್ಗಿ ವಾಸುದೇವ್‌, ಸ್ವಾಮಿ ಅವಧೇಶಾನಂದ, ದೇವಕಿ ನಂದನ್‌ ಠಾಕೂರ್‌ ಹಾಗೂ ಯೋಗಗುರು ಬಾಬಾ ರಾಮ್‌ದೇವ್‌ ಅವರು ಪ್ರಧಾನಿ ಮೋದಿಯವರ ಕರೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಸ್ವಾವಲಂಬನೆ ಎನ್ನುವುದು ಒಂದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಮೂಲ ಶಕ್ತಿಯಾಗಿದೆ ಎಂದು ಆಧ್ಯಾತ್ಮಿಕ ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next