Advertisement

ಮತ್ತೊಂದು ಬೆಂಕಿ ಅನಾಹುತಕ್ಕೆ ಸಜ್ಜಾಗುತ್ತಿರುವ ಸರಕಾರಿ ಜಾಗ!

11:34 AM Apr 19, 2022 | Team Udayavani |

ಕೂಳೂರು: ಕೊಟ್ಟಾರ ಚೌಕಿ ಯಿಂದ ಕೂಳೂರು ಆಗಿ ಉಡುಪಿಗೆ ಹೋಗುವ ಹೆದ್ದಾರಿ 66ರ ಬಂಗ್ರಕೂಳೂರು ಸಮೀಪ ಹೆದ್ದಾರಿ ಬದಿ ಇರುವ ಸರಕಾರಿ ಜಾಗದಲ್ಲಿ ಹೇರಳವಾಗಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ಉದಯವಾಣಿ ಸತತ ವರದಿ ಬಳಿಕ ಸಮತಟ್ಟು ಮಾಡಿ ತ್ಯಾಜ್ಯ ಮುಕ್ತ ಮಾಡಿದ್ದರೂ ಇದೀಗ ಒಂದೆರಡು ತಿಂಗಳ ಅಂತರದಲ್ಲಿ ಮತ್ತೆ ಟನ್‌ ಗಟ್ಟಲೆ ಬಳಸಿದ ಮಣ್ಣು, ಕಾಂಕ್ರೀಟ್‌ ತುಂಡು, ಕೊಳೆತ ತ್ಯಾಜ್ಯವನ್ನು ಲಾರಿಯಲ್ಲಿ ತಂದು ಬಿಸಾಡಿ ಹೋಗಲಾಗುತ್ತಿದೆ.

Advertisement

ಈಗಾಗಲೇ ಪ್ರದೇಶದಲ್ಲಿ ಗುಜರಿ ಹೆಕ್ಕುವ ಆಸೆಗೆ ಬೆಂಕಿ ಹಾಕಿದ ಪರಿಣಾಮ ಸುತ್ತಮುತ್ತ ಹೊಗೆ ಮಾಲಿನ್ಯ ಜತೆಗೆ ಇಲ್ಲಿರುವ ಹೈಟೆನ್ಷನ್‌ ವಿದ್ಯುತ್‌ ತಂತಿಗಳಿಗೂ ಹಾನಿಯಾಗುವ ಸಾಧ್ಯತೆಯಿದ್ದು, ಇದೀದ ಮತ್ತೆ ಅಗ್ನಿ ಅನಾಹುತದ ಆತಂಕ ಎದುರಾಗಿದೆ.

ರಾತ್ರಿ ಆದೊಡನೆ ಲಾರಿ, ಟೆಂಪೊ, ಪಿಕಪ್‌ ಮತ್ತಿತರ ವಾಹನಗಳಲ್ಲಿ ತಂದು ಎಸೆದು ಹೋಗಲಾಗುತ್ತದೆ. ಒಂದೆರಡು ಬಾರಿ ಊರವರ ಕೈಗೆ ತ್ಯಾಜ್ಯ ಎಸೆಯುವ ವಾಹನ ಸಿಕ್ಕಿಬಿದ್ದು ದಂಡವನ್ನೂ ಹೇರಲಾಗಿದೆ. ಆದರೆ ಸ್ವಚ್ಛಗೊಳಿಸಿದ ಜಾಗದಲ್ಲಿ ಬೇಲಿ ನಿರ್ಮಾಣ ಮಾಡದ ಕಾರಣ ಇಂದು ಮತ್ತೆ ತ್ಯಾಜ್ಯ ರಾಶಿ ಈ ಭಾಗದಲ್ಲಿ ಹಾಕಲಾಗುತ್ತಿದೆ.

ಈ ಸರಕಾರಿ ಭೂಮಿಯನ್ನು ಹಲವು ಯೋಜನೆಗೆ ಬಳಕೆ ಮಾಡಬಹುದಾದರೂ ಸ್ಪಷ್ಟ ನಿರ್ಧಾರವನ್ನು ಇದುವರೆಗೂ ಕೈಗೊಳ್ಳದಿರುವುದು ಖೇದಕರ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next