Advertisement

ಪ್ರಬಲವಾದ ಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸರ್ಕಾರ ಸೇರಿಸಬಾರದು: ಕೆ.ಎಂ. ರಾಮಚಂದ್ರಪ್ಪ  

06:01 PM Oct 21, 2021 | Team Udayavani |

ಸೊರಬ: ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಎಲ್ಲಾ ರೀತಿಯಿಂದಲೂ ಮುಂದುವರೆದ ಪ್ರಬಲವಾದ ಜಾತಿಗಳನ್ನು ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸರ್ಕಾರ ಸೇರಿಸಬಾರದು ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಒತ್ತಾಯಿಸಿದರು.

Advertisement

ಗುರುವಾರ ಪಟ್ಟಣದ ಬಂಗಾರಧಾಮದಲ್ಲಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಚ್. ಕಾಂತರಾಜು ಅವರ ಆಯೋಗದ ನೇತೃತ್ವದಲ್ಲಿ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸುಭಾಷ್ ಆಡಿ ಅವರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಪ್ರವರ್ಗ 1 ಮತ್ತು 2ಎ ನಿಜವಾದ ಹಿಂದುಳಿದ ವರ್ಗಗಳಾಗಿದ್ದು, ರಾಜ್ಯದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸಂಘಟನೆಯ ಕೊರತೆಯಿಂದ ಅನೇಕ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಹಿಂದುಳಿದ ಸಮುದಾಯಗಳ ಸಾಮಾಜಿಕ ಸ್ಥಿತಿಗತಿ ಬಗ್ಗೆ 1931ರಲ್ಲಿ ಸಿದ್ಧಪಡಿಸಿದ ಕಾಂತರಾಜ್ ವರದಿ ಅನುಷ್ಠಾನಗೊಳಿಸಬೇಕಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಕೈಗೊಂಡಿರುವ ಅನೇಕ ಯೋಜನೆಗಳು ಸ್ಥಗಿತಗೊಂಡಿರುತ್ತವೆ. ವಿದ್ಯಾರ್ಥಿಗಳಿಗೆ ಕಳೆದರಡು ವರ್ಷಗಳಿಂದ ವಿದ್ಯಾರ್ಥಿ ವೇತನವನ್ನೇ ನೀಡಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ:  ಹೂಡಿಕೆದಾರರಿಗೆ ನಷ್ಟ: ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 336 ಅಂಕ ಕುಸಿತ, ನಿಫ್ಟಿ ಇಳಿಕೆ

ಸುಮಾರು 2 ಕೋಟಿ ಜನಸಂಖ್ಯೆ ಹೊಂದಿರುವ ಪ್ರವರ್ಗ 1 ಮತ್ತು 2ಎ ಸಮುದಾಯಕ್ಕೆ ಕೇವಲ 80 ಕೋಟಿ ರೂ., ಮೀಸಲಿಟ್ಟು 20 ಕೋಟಿ ರೂ., ಮಾತ್ರ ಬಿಡುಗಡೆಗೊಳಿಸಿದೆ. ಆದರೆ, ಪ್ರಬಲ ಸಮುದಾಯಗಳ ನಿಗಮಕ್ಕೆ 500 ಕೋಟಿ ರೂ. ನಂತೆ ಬಿಡುಗಡೆ ಮಾಡಲಾಗಿದೆ.

Advertisement

ದೇವರಾಜ ಅಸರು ಅಭಿವೃದ್ಧಿ ನಿಗಮಕ್ಕೆ 2000 ಕೋಟಿ ರೂ. ನೀಡಬೇಕು ಎಂದ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ವರದಿಯನ್ನು ಕೂಡಲೇ ಜಾರಿಗೊಳಿಸಲು ಆಗ್ರಹಿಸಿ ಅ. 30ರಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಈದ್ಗಾ ಮೈದಾನದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಈ ಧರಣಿ ಸತ್ಯಾಗ್ರಹಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಹಿಂದುಳಿದ ಸಮುದಾಯಗಳ ನಾಯಕರು ಆಗಮಿಸಲಿದ್ದಾರೆ. ತಾಲ್ಲೂಕಿನ ಹಿಂದುಳಿದ ವರ್ಗಗಳ ಸಮಾಜದವರು ಪಾಲ್ಗೊಂಡು ಧರಣಿಯನ್ನು ಯಶಸ್ವಿಗೊಳಿಸಿಕೊಡುವಂತೆ ವಿನಂತಿಸಿದರು.

ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿ. ರಾಜು, ಪ್ರಧಾನ ಕಾರ್ಯದರ್ಶಿ ಅಶೋಕ ಕುಮಾರ್, ಸೂಡ ಮಾಜಿ ಅಧ್ಯಕ್ಷ ಎನ್. ರಮೇಶ, ಜಿಲ್ಲಾ ಮುಖಂಡರಾದ ಪಿ. ಶೇಷಾದ್ರಿ, ಗೋಪಾಲ. ಅಶೋಕ್, ಲೋಕೇಶ್, ತಾಲೂಕು ಈಡಿಗ ಸಮಾಜದ ಅಧ್ಯಕ್ಷ ಕೆ. ಅಜ್ಜಪ್ಪ, ಕುರುಬ ಸಮಾಜದ ಅಧ್ಯಕ್ಷ ನಿಂಗಪ್ಪ, ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ, ವಿಶ್ವಕರ್ಮ ಸಮಾಜದ ಪ್ರಮುಖರಾದ ಜಗದೀಶ ಕಕ್ಕರಸಿ, ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀಕಾಂತ ಶೇಟ್, ದೇವಾಂಗ ಸಮಾಜದ ಪರಸಪ್ಪ, ಮುಖಂಡರಾದ ಕೆ. ಮಂಜುನಾಥ್, ತಬಲಿ ಬಂಗಾರಪ್ಪ, ನಾಗರಾಜ ಚಿಕ್ಕಸವಿ, ಅಣ್ಣಪ್ಪ ಹಾಲಘಟ್ಟ, ಎಚ್. ಗಣಪತಿ, ಪ್ರವೀಣ್ ಹಿರೇಇಡಗೋಡು, ಕುಮಾರ್ ಉಮಟೆಗದ್ದೆ, ಎಂ.ಡಿ.ಶೇಖರ್, ಕಲ್ಲಪ್ಪ, ನಾಗರಾಜ್ ಕೈಸೋಡಿ, ರಾಜಣ್ಣ ಸೇರಿದಂತೆ ವಿವಿಧ ಸಮುದಾಯದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next