Advertisement

ನೇರ್ಲಿಗೆ ಸರ್ಕಾರಿ ಶಾಲೆ ಕಟ್ಟಡ ಕುಸಿತ

05:57 PM Nov 25, 2021 | Team Udayavani |

ಜಾವಗಲ್‌: ಜಾವಗಲ್‌ ಹೋಬಳಿ ನೇರ್ಲಿಗೆ ಗ್ರಾಮದ ಶತಮಾನದ ಅಂಚಿ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಕುಸಿದು ಬಿದ್ದಿದೆ. 2023ಕ್ಕೆ 100 ವರ್ಷ ತುಂಬಲಿರುವ ಹೋಬಳಿಯ ಅತ್ಯಂತ ಹಳೆಯದಾದ ಸರ್ಕಾರಿ ಶಾಲೆಗಳಲ್ಲಿ ಒಂದಾಗಿದ್ದು, 1ನೇ ತರಗತಿಯಿಂದ 7ನೇ ತರಗತಿ ವರೆಗೆ ಒಟ್ಟು 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು ಮುಖ್ಯ ಶಿಕ್ಷಕರು ಸೇರಿ ಒಟ್ಟು 6 ಶಿಕ್ಷಕರು ಕಾರ್ಯ ನಿರ್ವ ಹಿಸುತ್ತಿದ್ದಾರೆ.

Advertisement

ಇತ್ತೀಚೆಗೆ ಬಿದ್ದ ಮಳೆ ಯಿಂದ ಕಟ್ಟಡವು ಕುಸಿದು ಬಿದ್ದಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಆತಂಕದ ವಾತಾವರಣದಲ್ಲಿ ದಿನಕಳೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್‌ಡಿಎಂಸಿ ಸಮಿತಿ, ಪೋಷಕರು, ಸಾರ್ವಜನಿಕರು, ಹಳೆಯ ವಿದ್ಯಾ ರ್ಥಿಗಳ ಸಂಘದವರು ಆತಂಕ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ;- ಹೊನ್ನರಹಳ್ಳಿ ಶಾಲೆಗೆ ಬಿಇಒ ಬೆಳ್ಳಣ್ಣವರ ಭೇಟಿ

ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಹೊಸ ಕೊಠಡಿಗಳನ್ನು ಕಟ್ಟಿಸಿಕೊಡುವಂತೆ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಗ್ರಹಿಸಿದ್ದಾರೆ.

ನೂತನ ಕೊಠಡಿ ನಿರ್ಮಾಣಕ್ಕೆ ಕ್ರಮ: ಸುದ್ದಿ ತಿಳಿದ ಕೂಡಲೇ ಅರಸೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಹೋಬಳಿ ಶಿಕ್ಷಣ ಸಂಯೋಜಕ ಆಣಾ ಧ್ಯಾನಾಯಕ್‌ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕಿ ಶಕುಂತಲಾ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದು ಕಟ್ಟಡ ವೀಕ್ಷಿಸಿದರು.

Advertisement

ಕೂಡಲೇ ಇಲಾಖೆ ಆಯುಕ್ತರ ಗಮನಕೆ ತಂದು 4 ಹೊಸ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಪಂ ಮಾಜಿ ಸದಸ್ಯ ಮಹೇಶ, ಹಳೆಯ ವಿದ್ಯಾರ್ಥಿಗಳ ಸಂಘದ ಯಶಸ್ವಿನಿ, ಮಂಜುನಾಥ್‌, ರಘು, ಕೃಷ್ಣಮೂರ್ತಿ ಹಾಜರಿದ್ದರು.

ಜಾವಗಲ್‌: ಜಾವಗಲ್‌ ಹೋಬಳಿ ನೇರ್ಲಿಗೆ ಗ್ರಾಮದ ಶತಮಾನದ ಅಂಚಿ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವು ಕುಸಿದು ಬಿದ್ದಿದೆ. 2023ಕ್ಕೆ 100 ವರ್ಷ ತುಂಬಲಿರುವ ಹೋಬಳಿಯ ಅತ್ಯಂತ ಹಳೆಯದಾದ ಸರ್ಕಾರಿ ಶಾಲೆಗಳಲ್ಲಿ ಒಂದಾಗಿದ್ದು, 1ನೇ ತರಗತಿಯಿಂದ 7ನೇ ತರಗತಿ ವರೆಗೆ ಒಟ್ಟು 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು ಮುಖ್ಯ ಶಿಕ್ಷಕರು ಸೇರಿ ಒಟ್ಟು 6 ಶಿಕ್ಷಕರು ಕಾರ್ಯ ನಿರ್ವ ಹಿಸುತ್ತಿದ್ದಾರೆ.

ಇತ್ತೀಚೆಗೆ ಬಿದ್ದ ಮಳೆ ಯಿಂದ ಕಟ್ಟಡವು ಕುಸಿದು ಬಿದ್ದಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಆತಂಕದ ವಾತಾವರಣದಲ್ಲಿ ದಿನಕಳೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಸ್‌ಡಿಎಂಸಿ ಸಮಿತಿ, ಪೋಷಕರು, ಸಾರ್ವಜನಿಕರು, ಹಳೆಯ ವಿದ್ಯಾ ರ್ಥಿಗಳ ಸಂಘದವರು ಆತಂಕ ವ್ಯಕ್ತ ಪಡಿಸಿದ್ದಾರೆ. ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 4 ಹೊಸ ಕೊಠಡಿಗಳನ್ನು ಕಟ್ಟಿಸಿಕೊಡುವಂತೆ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಅಗ್ರಹಿಸಿದ್ದಾರೆ.

ನೂತನ ಕೊಠಡಿ ನಿರ್ಮಾಣಕ್ಕೆ ಕ್ರಮ: ಸುದ್ದಿ ತಿಳಿದ ಕೂಡಲೇ ಅರಸೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಹೋಬಳಿ ಶಿಕ್ಷಣ ಸಂಯೋಜಕ ಆಣಾ ಧ್ಯಾನಾಯಕ್‌ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕಿ ಶಕುಂತಲಾ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದು ಕಟ್ಟಡ ವೀಕ್ಷಿಸಿದರು. ಕೂಡಲೇ ಇಲಾಖೆ ಆಯುಕ್ತರ ಗಮನಕೆ ತಂದು 4 ಹೊಸ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಗ್ರಾಪಂ ಮಾಜಿ ಸದಸ್ಯ ಮಹೇಶ, ಹಳೆಯ ವಿದ್ಯಾರ್ಥಿಗಳ ಸಂಘದ ಯಶಸ್ವಿನಿ, ಮಂಜುನಾಥ್‌, ರಘು, ಕೃಷ್ಣಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next