Advertisement

ಸರಕಾರದ ಸೌಲಭ್ಯಗಳು ಜನರ ಹಕ್ಕು; ಭಿಕ್ಷೆ ಅಲ್ಲ: ಪ್ರಮೋದ್‌

03:45 AM Jul 01, 2017 | |

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳು ತಮ್ಮ ಪ್ರಭುಗಳನ್ನು ಆರಿಸು ವಲ್ಲಿ ಎಷ್ಟರಮಟ್ಟಿನ ಹುಮ್ಮಸ್ಸಿನಿಂದ ವರ್ತಿಸುತ್ತಾರೋ ಅದೇ ಹುಮ್ಮಸ್ಸು ತಾವು ಆರಿಸಿದ ವ್ಯಕ್ತಿಯ ಅಧಿಕಾರವಧಿ ಇರುವವರೆಗೂ ಅವರಿಂದ ಸೇವೆ ಪಡೆ ಯುವ ವರೆಗೂ ಇರಬೇಕು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಹೇಳಿದರು.

Advertisement

ನಿಟ್ಟೂರು ವಿಷ್ಣುಮೂರ್ತಿ ನಗರದ ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇಗುಲದ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “ನಿಟ್ಟೂರು ವಾರ್ಡ್‌ ಮಟ್ಟದ ಜನಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರೊಂದಿಗೆ ನೇರ ಸಂಪರ್ಕ ಉಡುಪಿ ವಿಧಾನಸಭಾ ಕ್ಷೇತ್ರ ದಲ್ಲಿ ಮಹತ್ತರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಹೊಸ ಕ್ರಾಂತಿಯನ್ನು ಮಾಡಬೇಕೆ ನ್ನುವ ಉದ್ದೇಶದಿಂದ, ಜನರ ಕಷ್ಟ- ಕಾರ್ಪಣ್ಯಗಳನ್ನು ಇತರರಿಂದ ಕೇಳಿ ತಿಳಿದುಕೊಂಡು ಸ್ಪಂದಿಸುವುದಕ್ಕಿಂತ ನಾನೇ ವೈಯಕ್ತಿಕವಾಗಿ ಜನರಲ್ಲಿ ಮುಕ್ತವಾಗಿ ಮಾತನಾಡಿ ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರೋ ಪಾಯಗಳನ್ನು ನೀಡಬೇಕೆನ್ನುವ ದೃಷ್ಟಿಯನ್ನಿರಿಸಿ ಕೊಂಡು ಹಮ್ಮಿಕೊಳ್ಳ ಲಾದ ಈ ವಿನೂತನವಾದ “ಜನ ಸಂಪರ್ಕ ಸಭೆ’ ಯಶಸ್ವಿಯತ್ತ ಸಾಗು ತ್ತಿದೆ ಎಂದು ಪ್ರಮೋದ್‌ ತಿಳಿಸಿದರು.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವ ಮೂಲಕ ಜನರ ಬೇಡಿಕೆಗೆ ಸದಾ ಸ್ಪಂದಿಸುತ್ತ ಬಂದಿ ದ್ದೇನೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗಾಗಿ ಈಗಾಗಲೇ ಕೋಟಿಗಟ್ಟಲೆ ವಿಶೇಷ ಅನುದಾನಗ‌ಳನ್ನು ತಂದಿದ್ದೇನೆ. “ದೇವರು ಎಲ್ಲಿಯ ವರೆಗೆ ನನಗೆ ಶಕ್ತಿ ಕೊಡುತ್ತಾನೋ, ಅಲ್ಲಿಯ ವರೆಗೆ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಲು ಬದ್ಧನಿದ್ದೇನೆ ಎಂದು ಸಚಿವರು ಭರವಸೆ ನೀಡಿದರು. 

ಸಮ್ಮಾನ: ಇದೇ ಸಂದರ್ಭ ನಿಟ್ಟೂರು ವಿಷ್ಣುಮೂರ್ತಿನಗರದ ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇಗುಲದ ವತಿಯಿಂದ ಸಚಿವರನ್ನು ಸಮ್ಮಾನಿಸಿ ಗೌರವಿಸಲಾಯಿತು. 

Advertisement

ಸವಲತ್ತು ವಿತರಣೆ 
ಸಚಿವರು ಅರ್ಹ ಫ‌ಲಾನುಭವಿ ಗಳಿಗೆ ವಿವಿಧ ಪಿಂಚಣಿ, ಸವಲತ್ತು ಗಳನ್ನು ವಿತರಿಸಿದರು. ಗ್ರಾಮಸ್ಥರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿದ ಸಚಿವರು ಬಹುತೇಕ ಅರ್ಜಿಗಳಿಗೆ ಸ್ಥಳ ದಲ್ಲಿಯೇ ಪರಿಹಾರ ಸೂಚಿಸಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ನಿಟ್ಟೂರು ನಗರಸಭೆ ವಾರ್ಡ್‌ ಸದಸ್ಯೆ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರಸಭೆ ಸದಸ್ಯರಾದ ಪಿ. ಯುವರಾಜ್‌, ಜನಾರ್ದನ್‌ ಭಂಡಾರ್ಕರ್‌, ಗಣೇಶ್‌ ನೇರ್ಗಿ, ನಗರ ಸಭೆ ಮಾಜಿ ಸದಸ್ಯ ಸಂಜೀವ ಜತ್ತನ್ನ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್‌ ಉಪಸ್ಥಿತರಿದ್ದರು.ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿದರು. ಸುಧಾಕರ ಪೆರಂಪಳ್ಳಿ ನಿರೂಪಿಸಿ, ತಹ ಶೀಲ್ದಾರ್‌ ಮಹೇಶ್ಚಂದ್ರ ವಂದಿಸಿದರು.

ಕೊಳಚೆ ನೀರು ಶುದ್ಧೀಕರಣ ಘಟಕ ಅಭಿವೃದ್ಧಿ
ನಿಟ್ಟೂರಿನಲ್ಲಿರುವ ಎಸ್‌ಟಿಪಿ ಕೊಳಚೆ ನೀರು ಶುದ್ಧೀಕರಣ ಘಟಕವನ್ನು 3.85 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ನೀರನ್ನು ವಾಸನೆರಹಿತವಾಗಿ ಶುದ್ಧೀಕರಿ ಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿ ದರು. ಮಲ್ಪೆ ಕಲ್ಮಾಡಿಯ ಸ್ಟೆಲ್ಲಾ ಮಾರೀಸ್‌ ದೇವಾಲಯದ ದುರಸ್ತಿಗೆ ಅಲ್ಪಸಂಖ್ಯಾಕರ ಇಲಾಖೆ ವತಿಯಿಂದ ಮಂಜೂರಾದ 20 ಲ.ರೂ. ಚೆಕ್‌ ಅನ್ನು  ಸಚಿವರು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next