Advertisement

ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿ

04:28 PM Feb 05, 2018 | Team Udayavani |

ರಾಮನಗರ: ಸರ್ಕಾರಿ ಅಧಿಕಾರಿಗಳು ಜನ ಸೇವಕರಾಗಿದ್ದು, ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಸುವಂತೆ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ.ಎಂ. ಚಂದ್ರೇಗೌಡ‌ ಅವರು ಕರೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ವಿವಿಧ ಪ್ರಕರಣಗಳ ವಿಚಾರಣೆ ನಡೆಸಿ, ತದನಂತರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್‌ಟಿಐ ಒಂದು ಉತ್ಕೃಷ್ಟ ಕಾಯ್ದೆ. ಸಾರ್ವಜನಿಕರಿಗೆ ಅಗತ್ಯರುವ  ಅಥವಾ ಅವರು ಬಯಸುವ ಮಾಹಿತಿಯನ್ನು ಸರ್ಕಾರಿ ಇಲಾಖೆಗಳು ತಮ್ಮಲ್ಲಿ ಲಭ್ಯದ್ದಲ್ಲೀ 30 ದಿನದೊಳಗೆ ನೀಡುವಂತೆ ಕಾಯ್ದೆ ತಿಳಿಸಿದೆ. ಹೊಸದಾಗಿ ಮಾಹಿತಿಯನ್ನು ಸೃಷ್ಟಿಸಿ ನೀಡುವ ಅಗತ್ಯವಿಲ್ಲ.

ಇರುವ ಮಾಹಿತಿಯನ್ನೇ ಅಥವಾ ದಾಖಲಾತಿಗಳನ್ನೇ ನಿಗದಿ ಪಡಿಸಲಾದ ಶುಲ್ಕ ಭರಿಸಿಕೊಂಡು ಅವಧಿಯೊಳಗೆ ನೀಡುವಂತೆ ತಿಳಿಸಿದ ಅವರು ಕಾಲಕಾಲಕ್ಕೆ ಕಾಯ್ದೆಯಲ್ಲಾಗುವ ಬದಲಾವಣೆಗಳನ್ನು ಓದಿಕೊಂಡು ಅಪ್‌ಡೇಟ್‌ ಆಗುವಂತೆ ಸೂಚಿಸಿದರು.

ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊದಲು ಕಾಯ್ದೆಯಡಿ ದಾಖಲಾದ ಅರ್ಜಿಗಳನ್ನು ಸ್ಪಷ್ಟವಾಗಿ ಓದಿಕೊಳ್ಳಬೇಕು. ಅದಕ್ಕೆ ಪ್ರತ್ಯೇಕ ಕಡತವನ್ನಿರಿಸುವುದು ಉತ್ತಮ. ಕಾಯ್ದೆಯ 4(1)ಎ ಹಾಗೂ 4(1)ಬಿ ಯ ಮಾಹಿತಿಯನ್ನು ಸಂಪೂರ್ಣವಾಗಿ ಸಿದ್ಧಪಡಿಸಿಟ್ಟುಕೊಂಡಿರಬೇಕು, ಅಲ್ಲದೇ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿವರ ಹಾಗೂ ದೂರವಾಣಿಯ ಸಂಖ್ಯೆಯ ವಿವರದ ಫ‌ಲಕವನ್ನು ನಮೂದಿಸಿರಬೇಕು ಎಂದರು.

Advertisement

ಸಭೆಯಲ್ಲಿ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಡಾ.ಪ್ರಶಾಂತ್‌ ಅವರನ್ನು ಕುರಿತು ಮಾತನಾಡಿದ ಅವರು, ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಸುವ ವಿಧಾನವನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದರು.

59 ಪ್ರಕರಣ ಇತ್ಯರ್ಥ: ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲೆಗೆ ಸಂಬಂಧಿಸಿದ 66 ವಿವಿಧ ಪ್ರಕರಣಗಳ ವಿಚಾರಣೆಯನ್ನು  ಇದೇ ವೇಳೆ ನಡೆಸಲಾಯಿತು. ಅವುಗಳ ಪೈಕಿ 59 ಪ್ರಕರಣಗಳು ಸ್ಥಳದಲ್ಲಿಯೇ ಇತ್ಯರ್ಥಗೊಂಡವು. ಉಳಿದ 7 ಪ್ರಕರಣಗಳ ವಿಚಾರಣೆಯನ್ನು ಮುಂದೂಡಲಾಯಿತು.

ಬೆಂಗಳೂರಿನ ವೇಕಾನಂದ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಬಿ. ಕೆಂಪೇಗೌಡ ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾತಿ ಹಕ್ಕು ಕಾಯ್ದೆಯ ಅರ್ಜಿದಾದರರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next