Advertisement

“ಕೋವಿಡ್ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ” : ರಾಹುಲ್ ಗಾಂಧಿ

11:15 AM Feb 17, 2021 | Team Udayavani |

ನವ ದೆಹಲಿ : ಬ್ರೆಜ್ಹಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ರೂಪಾಂತರಿ ಕೋವಿಡ್ ವೈರಾಣು ಭಾರತಕ್ಕೆ ಬಂದಿರುವುದನ್ನು ಭಾರತೀಯ ಔಷಧ ಸಂಶೋಧನಾ ಘಟಕ ದೃಢಪಡಿಸಿದ ಬೆನ್ನಿಗೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

Advertisement

ಕೋವಿಡ್ ನಿಯಂತ್ರಿಸುವಲ್ಲಿ ನರೇಂದ್ರ ಮೋದಿ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನು ತೋರಿಸುತ್ತಿದೆ ಎಂದು ರಾಹುಲ್ ಗುಡುಗಿದ್ದಾರೆ.

ಓದಿ : ಟೇಕ್ ಆಫ್ ಗೆ ಸಿದ್ಧವಾಗುತ್ತಿದೆ ಫ್ಲೈಯಿಂಗ್ ಕಾರ್…! ಇನ್ಮೇಲೆ ಪ್ರಯಾಣ ಮತ್ತಷ್ಟು ಸುಖಮಯ…

“GOI (ಗವರ್ನಮೆಂಟ್ ಆಫ್ ಇಂಡಿಯಾ) ಕೋವಿಡ್ 19 ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದೆ. ಓವರ್ ಕಾನ್ಫಿಡೆನ್ಸ್ ತೋರಿಸುತ್ತಿದೆ. ಆದರೇ, ಕೋವಿಡ್ ಸಮಸ್ಯೆ ಇನ್ನೂ ಮುಗಿದಿಲ್ಲ.” ಎಂದು ತಮ್ಮ ಟ್ವೀಟ್ ಖಾತೆಯಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಹರಿಹಾಯ್ದಿದ್ದಾರೆ.

Advertisement

“ಕಳೆದ ತಿಂಗಳಲ್ಲಿ, ದಕ್ಷಿಣ ಆಫ್ರಿಕಾದ ರೂಪಾಂತರಿ SARS-CoV-2 ಹೊಂದಿರುವ ನಾಲ್ವರನ್ನು ಪತ್ತೆ ಹಚ್ಚಲಾಗಿದೆ. ಬ್ರೆಜ್ಹಿಲ್ ನಿಂದ ಭಾರತಕ್ಕೆ ಮರಳಿದ ಓರ್ವರಿಗೆ ಸೋಂಕು ದೃಢಗೊಂಡಿದೆ” ಎಂದು ಮಂಗಲವಾರ(ಫೆ.16)ದಂದು ಮಾಧ್ಯಮಗಳಿಗೆ ಐ ಸಿ ಎಮ್ ಆರ್ ನ  ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಇನ್ನು, ಅವರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚುವ ಕಾರ್ಯ ಹಾಗೂ ಅವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ “ಕೋವಿಡ್ ಸೋಂಕನ್ನು ನಿರ್ವಹಿಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ಮುಂದೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ವಿಷಯಗಳಾಗಲಿವೆ” ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಕೇಂದ್ರ ಸರ್ಕಾರಕ್ಕೆ ವ್ಯಂಗ್ಯ ಮಾಡಿದ್ದರು.

ಓದಿ :  ಮನೆಕಟ್ಟುವ ಕನಸು ಭಗ್ನ!ಪೆಟ್ಟಿಗೆಯಲ್ಲಿನ ಲಕ್ಷಾಂತರ ರೂ. ಗೆದ್ದಲು ಹುಳಗಳಿಗೆ ಆಹಾರ!

 

Advertisement

Udayavani is now on Telegram. Click here to join our channel and stay updated with the latest news.

Next