Advertisement

ಗೋವಾ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸದೆ ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ

05:49 PM Nov 10, 2022 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ಎರಡು ದಿನಗಳ ಮೆಗಾ ಉದ್ಯೋಗ ಮೇಳಕ್ಕೆ ರಾಜ್ಯದ ಯುವಕರು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ. ಸಾವಿರಾರು ಯುವಕರು ನೋಂದಣಿ ಮಾಡಿಸಿ ಮೇಳದಲ್ಲಿ ಭಾಗವಹಿಸಿದ್ದಾರೆ. ಆದರೆ ಗೋವಾ ಟಿಎಂಸಿ ಈ ಕುರಿತು ಆಕ್ರಮಣಕಾರಿಯಾಗಿದೆ. 40 ಸಾವಿರ ಯುವಕರಿಗೆ 4000 ಉದ್ಯೋಗ ಸಾಕೇ? ಎಂದು ಟಿಎಂಸಿ ಗಂಭೀರ ಪ್ರಶ್ನೆ ಮಾಡಿದೆ.

Advertisement

ತೃಣಮೂಲ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಟ್ರೋಜನ್ ಡಿಮೆಲೊ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋವಾ ಸರ್ಕಾರ ಹಮ್ಮಿಕೊಂಡಿರುವ ಉದ್ಯೋಗ ಮೇಳಕ್ಕೆ ರಾಜ್ಯದ ಯುವಕರು, ಮಹಿಳೆಯರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಗೋವಾ ರಾಜ್ಯದಲ್ಲಿ ಯುವಕರ ನಿರುದ್ಯೋಗದಿಂದಾಗಿ ಆತಂಕ ವ್ಯಕ್ತವಾಗುತ್ತಿದೆ. ಸದ್ಯ ರಾಜ್ಯದಲ್ಲಿ ಯುವಕ ಯುವತಿಯರ ಈ ಪ್ರತಿಕ್ರಿಯೆಯಿಂದಾಗಿ ಗೋವಾದಲ್ಲಿ ಎಷ್ಟು ನಿರುದ್ಯೋಗಿಗಳಿದ್ದಾರೆ ಎಂದು ಅರ್ಥವಾಗುತ್ತದೆ.  ಗೋವಾ ರಾಜ್ಯದಲ್ಲಿ 40,000 ಯುವಕ-ಯುವತಿಯರಿಗೆ 4,000 ಉದ್ಯೋಗಗಳು ಸಾಕೇ? ಎಂದು ಟ್ರೋಜನ್ ಡಿಮೆಲೊ ಪ್ರಶ್ನಿಸಿದರು.

ಉದ್ಯೋಗ ಮೇಳದ ಕುರಿತು ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದ ಅವರು, ಎರಡು ದಿನಗಳಲ್ಲಿ ಸುಮಾರು 40 ಸಾವಿರ ಯುವಕರು ಈ ಉದ್ಯೋಗ ಮೇಳದಲ್ಲಿ ಉದ್ಯೋಗಕ್ಕಾಗಿ ಭಾಗವಹಿಸಿದ್ದಾರೆ. ಆದರೆ ಈ ಮೂಲಕ ಸುಮಾರು 4,000 ಯುವಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಗೋವಾ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ 40,000 ಯುವಕ ಯುವತಿಯರಿಗೆ 4,000 ಉದ್ಯೋಗ ಸಾಕೇ? ಇದಕ್ಕೆ ಗೋವಾ ಸರ್ಕಾರ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ಗೋವಾ ರಾಜ್ಯ ವಿಧಾನಸಭಾ ಚುನಾವಣೆಯ ಮೊದಲು ಉಚಿತ ಎಲ್‍ಪಿಜಿ ಸಿಲಿಂಡರ್‍ ಗಳನ್ನು ಒದಗಿಸುವುದಾಗಿ ಸಾವಂತ್ ನೇತೃತ್ವದ ಬಿಜೆಪಿ ಜನತೆಗೆ ಭರವಸೆ ನೀಡಿತ್ತು. ಇದನ್ನು ನೆನಸಿಕೊಂಡರೆ ಈಗಿನ ವಾಸ್ತವವನ್ನು ಬೇರೆಯಾಗಿ ಹೇಳುವ ಅಗತ್ಯವಿಲ್ಲ. ಆದ್ದರಿಂದ ಡಾ. ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸದೆ ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ಗೋವಾ ಟಿಎಂಸಿ ನಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next