Advertisement
ಇದರಿಂದ ಹಲವು ವರ್ಷಗಳಿಂದ ಪ್ರಸ್ತಾವನೆ ಹಂತದಲ್ಲಿರುವ ಜಾಗ ಅಂತಿಮ ಗೊಂಡಿಲ್ಲ. ಸರಕಾರದ ಅನುದಾನ ಲಭ್ಯ ವಿದ್ದರೂ ಹತ್ತಾರು ಯೋಜನೆಗಳ ಅನು ಷ್ಠಾನಕ್ಕೆ ಜಾಗದ ಕಡತ ವಿಲೇ ವಿಳಂಬ ಅಡ್ಡಿ ಉಂಟು ಮಾಡಿದೆ. ಅರಣ್ಯ, ಖಾಸಗಿ ಸೇರಿ ಜಾಗ ಗುರುತಿಸುವಿಕೆ ಮೊದಲಾದ ಕೆಲಸ ಗಳಿರುವುದರಿಂದ ಸಂಖ್ಯಾ ಬಲದ ಕೊರ ತೆಯ ಬಿಸಿ ಭೂ ಮಾಪಕರಿಗೂ ತಟ್ಟಿದೆ.
ಮಾತ್ರ ಲಾಗಿನ್ ಸೌಲಭ್ಯ
ಸರಕಾರಿ ಜಮೀನು ಅಳತೆ ಕೆಲಸ ನಿರ್ವಹಣೆ ಹೊಂದಿರುವುದು ತಾಲೂಕು ಭೂ ಮಾಪಕರಿಗೆ ಮಾತ್ರ. ಇತರ ಸರಕಾರಿ ಭೂ ಮಾಪಕರು ಇದ್ದರೂ ಅವರು ಸರಕಾರಿ ಇಲಾಖೆಗೆ ಸಂಬಂಧಿಸಿದ ಜಮೀನಿಗೆ ಸಂಬಂಧಿಸಿ ಅಳತೆ ಕಾರ್ಯ ಮಾಡುವುದು ವಿರಳ. ಯಾಕೆಂದರೆ ಅದರ ಲಾಗಿನ್ ಇರುವುದು ತಾಲೂಕು ಭೂ ಮಾಪಕರಲ್ಲಿ. ಸಮಾಜ ಕಲ್ಯಾಣ, ಕಂದಾಯ ಸೇರಿ ಇತರ ಇಲಾಖೆಗಳ ಕಡತಗಳು ತಾಲೂಕು ಭೂ ಮಾಪಕರ ವ್ಯಾಪ್ತಿಗೆ ಒಳಪಡುತ್ತದೆ. ಉಳಿದ ಭೂ ಮಾಪಕರಿಗೆ ಲಾಗಿನ್ ಇಲ್ಲ. ಹಾಗಾಗಿ ಲಾಗಿನ್ ಹೊಂದಿರುವ ತಾಲೂಕು ಭೂ ಮಾಪಕರು ಶ್ಮಶಾನ, ಶಾಲೆ, ಮೈದಾನ ಮೊದಲಾದ ಸರಕಾರಿ ಇಲಾಖೆಗೆ ಸಂಬಂಧಿಸಿದ ಜಾಗ ಅಳತೆ ಮಾಡಲು ಸಾಧ್ಯವಾಗುತ್ತದೆ. ಹುದ್ದೆ ಖಾಲಿ
ಪುತ್ತೂರು ಭೂ ಮಾಪನ ಇಲಾಖೆಯಲ್ಲಿ ಮಂಜೂರಾತಿ ಹುದ್ದೆಗಳ ಪೈಕಿ ಹಲವು ಹುದ್ದೆಗಳು ಖಾಲಿ ಇವೆ. ಹನ್ನೊಂದು ಜನರ ಪೈಕಿ ನಾಲ್ಕು ಮಂದಿ ನಿಯೋಜನೆ ನೆಲೆಯಲ್ಲಿ ಕಡಬಕ್ಕೆ ಕರ್ತವ್ಯಕ್ಕೆ ತೆರಳಿದ್ದಾರೆ. ಜಮೀನು ಹಂಚಿಕೆ, ಗಡಿ ಗುರುತು ಮಾಡಲು ಸರ್ವೇ ನಡೆಸುವುದು ಅಗತ್ಯವಾಗಿದೆ. ಸರಕಾರದಿಂದ ನೇಮಕಗೊಂಡ ಸರ್ವೇಯರ್‌ಗಳು ಹಾಗೂ ಸರಕಾರದ ಪರವಾನಿಗೆ ಪಡೆದಿರುವ ಖಾಸಗಿ ಸರ್ವೇಯರ್‌ಗಳು ಜಮೀನುಗಳ ಸರ್ವೇ ನಡೆಸಲು ಅವಕಾಶವಿದೆ. ದಿನಂಪ್ರತಿ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು ವರ್ಷಾನುಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯದ ಎಲ್ಲ ಭೂ ಮಾಪನ ಇಲಾಖೆಗಳ ಸದ್ಯದ ಚಿತ್ರಣ.
Related Articles
76 ಅರ್ಜಿ ಅಳತೆ ಬಾಕಿ
ಭೂಮಾಪನ ಇಲಾಖೆ ತಾಲೂಕು ಭೂ ಮಾಪಕರಿಗೆ ಪುತ್ತೂರು ತಾಲೂಕು ಕಚೇರಿಯಿಂದ ಸರಕಾರಿ ಜಮೀನಿನ ಅಳತೆ ಬಗ್ಗೆ 3 ತಿಂಗಳಲ್ಲಿ 199 ಕಡತಗಳನ್ನು ನೀಡಲಾಗಿದೆ.
Advertisement
ಇದರಲ್ಲಿ 123 ಅರ್ಜಿ ಅಳತೆ ಆಗಿ 76 ಕಡತ ವಿಲೇಗೆ ಬಾಕಿ ಇದೆ. 76 ಅರ್ಜಿಗಳ ಪೈಕಿ 43 ಅರ್ಜಿಗಳು ಗ್ರಾ.ಪಂ.ಗೆ, 21 ಕಡತಗಳು ಅಂಗನವಾಡಿ ಮತ್ತು ಶಾಲೆಗಳಿಗೆ ಸಂಬಂಧಿಸಿ ಶಿಕ್ಷಣ ಇಲಾಖೆ, ಇತರ ಇಲಾಖೆಗೆ ಸಂಬಂಧಿಸಿ 12 ಅರ್ಜಿಗಳು ವಿಲೇವಾರಿಗೆ ಬಾಕಿ ಇದೆ. ತಾಲೂಕು ಕಚೇರಿಯಲ್ಲಿ ಆರ್‌ಟಿಸಿ ತಿದ್ದುಪಡಿ ಮತ್ತು ನಮೂನೆ 1-5ನಲ್ಲಿ 912 ಕಡತಗಳು ವಿಲೇವಾರಿಗೆ ಬಾಕಿ ಇದೆ.
ಸೂಚನೆ ನೀಡಲಾಗಿದೆವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಡತಗಳು ಭೂ ದಾಖಲೆಗಳ ಇಲಾಖೆಯಲ್ಲಿ ಬಾಕಿ ಇದ್ದರೆ ಅಂತಹ ಕಡತಗಳನ್ನು ತ್ವರಿತವಾಗಿ ವಿಲೇ ಮಾಡುವಂತೆ ಸೂಚನೆ ನೀಡಲಾಗಿದೆ.
-ಸಂಜೀವ ಮಠಂದೂರು,
ಶಾಸಕರು, ಪುತ್ತೂರು ಸರಕಾರಿ ಭೂ ಮಾಪಕರು
ಸರಕಾರಿ ಜಮೀನಿಗೆ ಸಂಬಂಧಿಸಿದ ಅಳತೆ ಕಾರ್ಯವನ್ನು ಲಾಗಿನ್ ಹೊಂದಿರುವ ತಾಲೂಕು ಭೂ ಮಾಪಕರೇ ಮಾಡುತ್ತಾರೆ. ಉಳಿದ ಜಮೀನುಗಳ ಸರ್ವೇಗೆ ಇತರೆ ಸರಕಾರಿ ಭೂ ಮಾಪಕರು ಇದ್ದಾರೆ.
-ಮಲ್ಲಿಕ್ ಕುಮಾರ್,
ಪ್ರಥಮ ದರ್ಜೆ ಸಹಾಯಕ
ಭೂ ಮಾಪನ ಇಲಾಖೆ, ಪುತ್ತೂರು