ಹದ್ದುಬಸ್ತ್ ಮಾಡಿಕೊಂಡಿದ್ದಾರೆ.
Advertisement
ಹೌದು. ಮೆದಕಿನಾಳ, ಚಿಕ್ಕಅಂತರಗಂಗಿ ವ್ಯಾಪ್ತಿಯಲ್ಲಿ ಹತ್ತಾರು ಎಕರೆ ಸರಕಾರಿ ಗೈರಾಣಿ ಜಮೀನು ಇದ್ದು, ಇಲ್ಲಿ ಹಲವು ಪ್ರಭಾವಿಗಳುಜಮೀನನ್ನು ಒತ್ತುವರಿ ಮಾಡಿಕೊಂಡು ಪಟ್ಟಾ ಭೂಮಿಯಾಗಿಸಿಕೊಳ್ಳಲು ಹುನ್ನಾರ ನಡೆಸಿದ್ದರು. ಈ ಬಗ್ಗೆ ಕರ್ನಾಟಕ ರೈತ ಸಂಘ ಇತ್ತೀಚೆಗೆ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ದೂರಿನನ್ವಯ ಕಂದಾಯ ಇಲಾಖೆ ಅ ಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ, ಪಂಚನಾಮೆ ನಡೆಸಿದ ಬಳಿಕ ಮೇಲ್ನೋಟಕ್ಕೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು ಕಂಡು ಬಂದಿತ್ತು. ನಿಖರ ಮಾಹಿತಿಗಾಗಿ ಭೂಮಾಪನ ಇಲಾಖೆಯಿಂದ ಸರ್ವೇ ಮಾಡಲಾಗಿದ್ದು, ಸರ್ವೇ ನಂ.125ರಲ್ಲಿನ ಸರಕಾರಿ ಜಮೀನಿನಲ್ಲಿ 1.36 ಎಕರೆ ಜಮೀನು ಒತ್ತುವರಿಯಾದ ಅಂಶ ಬಯಲಿಗೆ ಬಂದಿದೆ.
Related Articles
ಮಸ್ಕಿ ತಾಲೂಕಿನ ಮೆದಕಿನಾಳ, ಅಂತರಗಂಗಿ ಸೇರಿ ಈ ಭಾಗದಲ್ಲಿ ನೂರಾರು ಎಕರೆ ಸರಕಾರಿ ಜಮೀನು ಇದ್ದು, ಇಲ್ಲಿ ನಿರಂತರ ಒತ್ತುವರಿ ನಡೆಯುತ್ತಿದೆ. ಮರಂ ಕ್ವಾರಿ ಆರಂಭಿಸುವುದಕ್ಕಾಗಿ ಇಲ್ಲಿ ಸರಕಾರಿ ಜಮೀನು ಒತ್ತುವರಿ ಸಾಮಾನ್ಯವಾಗಿದೆ. ಕಂದಾಯ ಇಲಾಖೆಯಿಂದ ಸ್ವಯಂ ಆಗಿ ಸರ್ವೇ ನಡೆಸಿದರೆ ಇಂತಹ ಹಲವು ಪ್ರಕರಣ ಬಯಲಿಗೆ ಬರಲಿದೆ. ಮತ್ತೂಂದು ಅಂಶವೆಂದರೆ ಜಮೀನು ಒತ್ತುವರಿ ಅಂಶ ಪತ್ತೆಯಾದರೂ ಒತ್ತುವರಿದಾರರ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇದೇ ಕಾರಣಕ್ಕೆ ಇಲ್ಲಿ ಸರಕಾರಿ ಜಮೀನು ಯಾರೂ ಬೇಕಾದರೂ ಒತ್ತುವರಿ
ಮಾಡುವ ಅಂಶ ನಡೆಯುತ್ತಲೇ ಇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
Advertisement
ಸರ್ವೇ ನಂಬರ್ 125ರಲ್ಲಿ ಸರಕಾರಿ ಜಮೀನು ಒತ್ತುವರಿ ದೃಢವಾಗಿದೆ. ಆದರೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪ್ರಭಾವಕ್ಕೆ ಹೆದರಿ ಅರೆಬರೆ ವರದಿ ನೀಡಿದ್ದಾರೆ. ಇಲ್ಲಿ ಹೆಚ್ಚಿನ ಜಮೀನು ಒತ್ತುವರಿಯಾಗಿದೆ. ಆದರೆ ವರದಿ ಸಮರ್ಪಕವಾಗಿ ನೀಡಿಲ್ಲ. ಇನ್ನು ಒತ್ತುವರಿದಾರರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಬೇರೆ ತಾಲೂಕಿನ ಅಧಿ ಕಾರಿಗಳನ್ನು ಪರಿಶೀಲನೆಗೆ ನೇಮಕ ಮಾಡಿ ಈ ಬಗ್ಗೆ ನೈಜ ವರದಿ ಪಡೆದು ಕ್ರಮ ಕೈಗೊಳ್ಳಬೇಕು.-ಸಂತೋಷ ಹಿರೇದಿನ್ನಿ, ದೂರುದಾರರು. ಮೆದಕಿನಾಳ ಸೀಮಾ ವ್ಯಾಪ್ತಿಯ ಸರ್ವೇ ನಂ.125ರಲ್ಲಿ ಸರಕಾರಿ ಜಮೀನು ಒತ್ತುವರಿ ಬಗ್ಗೆ ದೂರು ಬಂದಿತ್ತು. ಈ ಆಧಾರದ ಮೇಲೆ ಪರಿಶೀಲನೆ ನಡೆಸಿ, ಒತ್ತುವರಿ ಭೂಮಿತೆರವು ಮಾಡಿ ಹದ್ದುಬಸ್ತ್ ಮಾಡಲಾಗಿದೆ.
-ಕವಿತಾ, ಆರ್.ತಹಶೀಲ್ದಾರ್, ಮಸ್ಕಿ -ಮಲ್ಲಿಕಾರ್ಜುನ ಚಿಲ್ಕರಾಗಿ