Advertisement

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

05:08 PM Oct 16, 2021 | Team Udayavani |

ಬೆಂಗಳೂರು :1 ರಿಂದ 5 ನೇ ತರಗತಿಯವರೆಗೆ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ತೀರ್ಮಾನ ಮಾಡಿದೆ‌,ಆದರೆ ತಾಂತ್ರಿಕ ಸಲಹಾ ಸಮಿತಿ ಏನು ಹೇಳುತ್ತದೆ ಎಂಬುದನ್ನು ನೋಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

Advertisement

ತಾಂತ್ರಿಕ ಸಲಹಾ ಸಮಿತಿ ಹಂತ ಹಂತವಾಗಿ ಶಾಲೆ ಆರಂಭಿಸಲು ಸೂಚಿಸಿದರೆ ಶಾಲಾರಂಭಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಸಚಿವರು ತಿಳಿಸಿದರು.

ಒಂದು ಹತ್ತು ದಿನಗಳಲ್ಲಿ ಉಳಿದ ತರಗತಿ ಗಳ ಬಗ್ಗೆ ಆರಂಭಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಶಾಲೆ ಆರಂಭಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದಿಲ್ಲ
ಮುಖ್ಯಮಂತ್ರಿಗಳು ಸಭೆಗೆ ಸಮಯ ಕೊಟ್ಟ ಕೂಡಲೇ, ತಜ್ಞರಿಂದ ಅಭಿಪ್ರಾಯ ಪಡೆಯುತ್ತೇವೆ.ಆ ನಂತರ ಶಾಲೆ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

ಈಗಾಗಲೇ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ದತೆ ನಡೆಸಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next