Advertisement

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ

04:02 PM Apr 14, 2017 | Team Udayavani |

ಅಫಜಲಪುರ: ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ಪಟ್ಟಣದ ಹೊರವಲಯದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2014-15ನೇ ಸಾಲಿನ ಎಂಎಸ್‌ಡಿಪಿ ಯೋಜನೆ ಅಡಿ ನಿರ್ಮಿಸಿದ ಮೆಟ್ರಿಕ್‌ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪಟ್ಟಣದ ಹೊರವಲಯದಲ್ಲಿ ನಿರ್ಮಾಣವಾದ  ಎರಡು ವಸತಿ ನಿಲಯಗಳಿಗೆ ಅಂದಾಜು ತಲಾ 99.99 ಲಕ್ಷ ರೂ. ಖರ್ಚು ಮಾಡಲಾಗಿದೆ. ಸುಸಜ್ಜಿತ ಕಟ್ಟಡ ನಿರ್ಮಾಣವಾಗಿವೆ. ಬರುವ ದಿನಗಳಲ್ಲಿ ಎರಡು ಕಟ್ಟಡಗಳಿಗೆ ಭದ್ರತಾ ಸಿಬ್ಬಂದಿ, ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುವುದು. 

ಅದರಲ್ಲೂ ಬಾಲಕಿಯರ ವಸತಿ ನಿಲಯದ ಭದ್ರತೆ ಮತ್ತು ಬಾಲಕಿಯರ ವೈಯಕ್ತಿಕ ಕಾಳಜಿ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದು ಇಲಾಖೆ ಮತ್ತು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. 

ಎಲ್ಲ ಇಲಾಖೆಗಳನ್ನು ಒಂದೇ ಕಡೆ ಮಾಡುವ ಉದ್ದೇಶದಿಂದಾಗಿ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಸುವರ್ಣ ಸೌಧ ನಿರ್ಮಿಸಲಾಗುತ್ತಿದೆ. ಆದರೆ ನಿವೇಶನದ ಕೊರತೆ ಕಾಡುತ್ತಿದೆ. ಸೌಧ ನಿರ್ಮಾಣಕ್ಕೆ ಸುಮಾರು 10 ಎಕರೆಯಷ್ಟು ಜಾಗದ ಅವಶ್ಯಕತೆ ಇದೆ. 

ನಿವೇಶನ ಸಿಕ್ಕರೆ ಒಳ್ಳೆಯ ಕಟ್ಟಡ ತಲೆ ಎತ್ತಲಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಉರ್ದು ಭಾಷಿಕ ಅಲ್ಪಸಂಖ್ಯಾತರ ಬಾಂಧವರಿಗೆ ಸರ್ಕಾರ ಸಾಕಷ್ಟು ಕೊಡುಗೆ ಕೊಟ್ಟಿದೆ. ನೀವು ನಿಮ್ಮ ಮಾತೃಭಾಷೆಯಾದ ಉರ್ದು ಕಲಿಯುವುದರ ಜತೆಗೆ ಅನ್ನದ ಭಾಷೆ ಕನ್ನಡ ಮರೆಯಬಾರದು.

Advertisement

ಕನ್ನಡ ಭಾಷೆ, ನಾಡು-ನುಡಿ ವಿಷಯದಲ್ಲಿ ಬದ್ಧತೆ ತೋರಬೇಕು ಎಂದು ಕಿವಿಮಾತು ಹೇಳಿದರು. ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಮೈಬೂಬಸಾಬ್‌ ಕಾರಟಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡಡಗಿ ಅಧ್ಯಕ್ಷತೆ ವಹಿಸಿದ್ದರು. 

ಪಪ್ಪು ಪಟೇಲ್‌, ಶಾಂತಯ್ಯ ಹಿರೇಮಠ, ಪಾಶಾ ಮಣೂರ, ಶಂಕರ ಕಣ್ಣಿ, ಅರವಿಂದ ಹಾಳಕಿ, ನಬಿಲಾಲ ಮಾಶಾಳಕರ, ದೇವೇಂದ್ರ ಜಮಾದಾರ, ಬಿಸಿಎಂ  ಅಧಿಕಾರಿ ಎಸ್‌. ಎನ್‌. ಗಿಣ್ಣಿ, ಭೂಸೇನಾ ನಿಗಮದ ಅಧಿಕಾರಿ ಜಾಫರ್‌, ಬಸಯ್ಯ ಗೋಳಮಠ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next