ಉಪಹಾರ ಮತ್ತು ಊಟ ಒದಗಿಸಲು 2017ರ ಜ.1ರಿಂದ ಉಪಹಾರ ಕೇಂದ್ರ ತೆರೆಯುವ ಬಗ್ಗೆ ಆರೋಗ್ಯ ಸಚಿವ ರಮೇಶ್‌ಕುಮಾರ್ ಮಾಡಿದ್ದ ಘೋಷಣೆ ಅನುಷ್ಠಾನಕ್ಕೆ ಬಂದಿಲ್ಲ.
Advertisement
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಎಂಎಸ್‌ಐಎಲ್ ಸಹಯೋಗದೊಂದಿಗೆ ಯೋಜನೆ ಜಾರಿಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿತ್ತು. ಅದರಂತೆ, ಉಪಹಾರ ಕೇಂದ್ರ ಗಳಿಗೆ ಬೇಕಾಗುವ ಜಾಗ ಆರೋಗ್ಯ ಇಲಾಖೆ ಒದಗಿಸುವುದು. ಆಹಾರಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಆಹಾರ ಇಲಾಖೆ ನೀಡುವುದು. ಉಪಹಾರ ಕೇಂದ್ರಕ್ಕೆ ಬೇಕಾಗುವ ಮೂಲ ಸೌಕರ್ಯಗಳನ್ನು ಎಂಎಸ್‌ಐಎಲ್ ಒದಗಿಸುವುದು. ಉಪಹಾರ ಕೇಂದ್ರಗಳ ನಿರ್ವಹಣೆ ಸ್ತ್ರೀಶಕ್ತಿ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ಮಾಡುವುದು ಎಂಬಂತಾಗಿತ್ತು. ಉಪಹಾರ ಕೇಂದ್ರಗಳನ್ನು ನಡೆಸಲು ಸ್ಥಳೀಯ ಸಂಸ್ಥೆಗಳ ಆಯ್ಕೆಯನ್ನು ಜಿಲ್ಲಾಮಟ್ಟದ ಸಮಿತಿ ಮೂಲಕ ಮಾಡಲಾಗುತ್ತದೆ. ಸಬ್ಸಿಡಿ ದರದಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ನೀಡುವಂತೆ ಆಹಾರ ಇಲಾಖೆಗೆ ಮನವಿ ಮಾಡಲಾಗಿದೆ. ಅದು ಹೊರತು ಪಡಿಸಿದರೆ ಈ ವಿಚಾರದಲ್ಲಿ ಬೇರೇನೂ ಪ್ರಗತಿ ಆಗಿಲ್ಲ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.ಈಗಾಗಲೇ 30 ಜಿಲ್ಲಾ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನಡೆಸಲಾಗುತ್ತಿರುವ ಉಪಹಾರ ಕೇಂದ್ರಗಳಲ್ಲಿಯೇ ಗುತ್ತಿಗೆ ಅವಧಿ ಮುಗಿಯುವವರಿಗೆ ರಿಯಾಯಿತಿ ದರದ ಆಹಾರ ಪದಾರ್ಥಗಳನ್ನು ನೀಡುವಂತೆ ಸೂಚಿಸಲಾಗಿದೆ.