Advertisement

250 ಪಿಎಚ್‌ಸಿ ಮೇಲ್ದರ್ಜೆಗೆ: ಸಚಿವ ಡಾ|ಸುಧಾಕರ್‌

01:35 AM Oct 07, 2021 | Team Udayavani |

ಪುತ್ತೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ, ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು.

Advertisement

ಪುತ್ತೂರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕ್ಯಾಂಪ್ಕೋ ಮತ್ತು ಎಸ್‌ಡಿಆರ್‌ಎಫ್‌ ನಿಧಿಯಿಂದ 1.84 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾದ ಆಮ್ಲಜನಕ ಘಟಕದ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ವೀಡಿಯೋ ಸಂದೇಶ ನೀಡಿದರು. ಮುಂದಿನ ಮೂರು ವರ್ಷಗಳಲ್ಲಿ ಎಲ್ಲ 2,500 ಪಿಎಚ್‌ಸಿಗಳನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಮೀನುಗಾರಿಕಾ ಸಚಿವ ಎಸ್‌. ಅಂಗಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರವು ಕೋವಿಡ್‌ ನಿಯಂತ್ರಣಕ್ಕೆ ಮಾದರಿ ಕಾರ್ಯಕ್ರಮ ಅನುಷ್ಠಾನಿಸಿ ಯಶಸ್ವಿಯಾಗಿದೆ. ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಸೌಲಭ್ಯ ಹೆಚ್ಚಳಗೊಳಿಸಿದೆ ಎಂದು ಹೇಳಿದರು.

ಮೆಡಿಕಲ್‌ ಕಾಲೇಜಿಗೆ ಮನವಿ
ದ.ಕ. ಜಿಲ್ಲೆಯ ಪುತ್ತೂರಿಗೆ ಸರಕಾರಿ ಮೆಡಿಕಲ್‌ ಕಾಲೇಜು ಮಂಜೂರು ಮಾಡುವಂತೆ ಮನವಿ ಮಾಡಿದ ದ. ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೂ ಆದ್ಯತೆ ನೀಡಬೇಕು ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮಾತನಾಡಿ, ಆಮ್ಲಜನಕ ಘಟಕಕ್ಕೆ ಅಗತ್ಯವಾಗಿರುವ ಕಂಪ್ರಶರ್‌ ಅಳವಡಿಕೆಗೆ ಸಂಸದರು ತನ್ನ ನಿಧಿಯಿಂದ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು, ತಾಲೂಕು ಆಸ್ಪತ್ರೆ
ಯಲ್ಲಿ 300 ಬೆಡ್‌ಗೆ ಏರಿಸುವ 189 ಕೋ.ರೂ ಯೋಜನೆಯ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡಬೇಕು ಎಂದರು.

Advertisement

ಇದನ್ನೂ ಓದಿ:ಅಂತಾರಾಷ್ಟ್ರೀಯ ಹಾಕಿ ಪ್ರಶಸ್ತಿ ಬಾಚಿಕೊಂಡ ಭಾರತೀಯರು

ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಕೃಷ್ಣ ಕುಮಾರ್‌, ನಗರಸಭೆ ಅಧ್ಯಕ್ಷ ಕೆ. ಜೀವಂಧರ್‌ ಜೈನ್‌, ಪುಡಾ ಅಧ್ಯಕ್ಷ
ಭಾಮಿ ಅಶೋಕ್‌ ಶೆಣೈ, ಜಿಲ್ಲಾಆರೋಗ್ಯಾಧಿಕಾರಿ ಡಾ| ಕಿಶೋರ್‌ಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್‌ ರೈ, ತಹಶೀಲ್ದಾರ್‌ ರಮೇಶ್‌, ಇಒ ನವೀನ್‌ ಭಂಡಾರಿ ಉಪಸ್ಥಿತರಿದ್ದರು. ಆಡಳಿತ ವೈದ್ಯಾಧಿಕಾರಿ ಡಾ| ಆಶಾ ಜ್ಯೋತಿ ಸ್ವಾಗತಿಸಿ,ವೈದ್ಯ ಡಾ| ಜಯದೀಪ್‌ ವಂದಿಸಿದರು. ಜಯರಾಮ ಸುವರ್ಣ ನಿರೂಪಿಸಿದರು.

250 ಆಮ್ಲಜನಕ ಘಟಕ
ಸರಕಾರವು ರಾಜ್ಯಾದ್ಯಂತ 250 ಆಮ್ಲಜನಕ ಘಟಕ ನಿರ್ಮಾಣಕ್ಕೆ ಯೋಜನೆರೂಪಿಸಿದೆ. 130 ಘಟಕ ಖಾಸಗಿಯಾಗಿ ಉಳಿದವು ಸರಕಾರಿ ಮತ್ತು ಸಾರ್ವಜನಿಕ ದೇಣಿಗೆಯ ಮೂಲಕ ನಿರ್ಮಾಣಗೊಳ್ಳಲಿವೆ. ಈಗಾಗಲೇ 110 ಘಟಕ ನಿರ್ಮಾಣ ಪ್ರಗತಿ ಯಲ್ಲಿದ್ದು 25 ಘಟಕ ಕಾರ್ಯಾ ರಂಭಕ್ಕೆ ಸಿದ್ಧಗೊಂಡಿವೆ. ಈ ತಿಂಗಳಿನಲ್ಲಿ ಎಲ್ಲ ಘಟಕಗಳ ನಿರ್ಮಾಣ ಪೂರ್ಣಗೊಳಿಸಲು ಸೂಚನೆ ನೀಡ ಲಾಗಿದೆ. ಇದರಿಂದ 250 ಮೆಟ್ರಿಕ್‌ ಟನ್‌ ಆಮ್ಲಜನಕ ಹೆಚ್ಚುವರಿ ಯಾಗಿ ದೊರೆಯಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಆದೇಶ ನೀಡಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next