Advertisement

ಉತ್ತಮ ದಾಖಲಾತಿಯ ಶಾಲೆಗೆ ಬೇಕು ಇನ್ನಷ್ಟು ಸೌಕರ್ಯ

05:58 PM Oct 17, 2021 | Team Udayavani |

ಬಸ್ರೂರು: ಮೂಡ್ಲಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ಶೈಕ್ಷಣಿಕ ಸಾಲಿನಲ್ಲಿ 21 ಮಕ್ಕಳು ಒಂದನೇ ತರಗತಿಗೆ ಹೊಸದಾಗಿ ದಾಖಲಾಗಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ದಾಖಲಾತಿಯಾಗಿದ್ದು, ಅದಕ್ಕೆ ತಕ್ಕಂತೆ ಕೆಲವೊಂದು ಅಗತ್ಯ ಸೌಕರ್ಯಗಳು ಅಗತ್ಯತೆಯೂ ಎದುರಾಗಿದೆ.

Advertisement

ಪ್ರಸ್ತುತ ಒಂದರಿಂದ ಏಳನೇ ತರಗತಿಗಳವರೆಗೆ ತರಗತಿಗಳಿದ್ದು, ಒಟ್ಟು 136 ವಿದ್ಯಾರ್ಥಿಗಳು ಈ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಏಳು ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನ ಕೊನೆಯಲ್ಲಿ 105 ವಿದ್ಯಾರ್ಥಿಗಳು ಮಾತ್ರ ಉಳಿದಿದ್ದು, ಈ ವರ್ಷ 30 ವಿದ್ಯಾರ್ಥಿಗಳು ಶಾಲೆಗೆ ಹೊಸದಾಗಿ ದಾಖಲಾಗಿದ್ದಾರೆ.

ಕಳೆದ ವರ್ಷದವರೆಗೆ ಈ ಶಾಲೆಯಲ್ಲಿ ಎಂಟನೇ ತರಗತಿಯೂ ನಡೆಯುತ್ತಿದ್ದು ಇಬ್ಬರು ಪದವೀಧರ ಶಿಕ್ಷಕಿಯರು, ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉನ್ನತೀಕರಿಸಿದ ಶಾಲೆಯು ಇದಾಗಿದ್ದು, 1958ರಲ್ಲಿ ಮೂಡ್ಲಕಟ್ಟೆಯ ಎತ್ತರದ ಜಾಗದಲ್ಲಿ ಕಿರಿಯ ಪ್ರಾಥಮಿಕ ಶಾಲೆಯು ಆರಂಭವಾಗಿದ್ದು, ಈ ಶಾಲೆಯನ್ನು ಇಂದಿಗೂ “ಗುಡ್ಡೆ ಶಾಲೆ’ ಎಂದು ಕರೆಯುತ್ತಾರೆ. ಅನಂತರದ ವರ್ಷಗಳಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, ಈ ಶಾಲೆಯಲ್ಲಿ ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. 2002-03ನೇ ಸಾಲಿನಿಂದಲೂ ಶಾಲೆಯಲ್ಲಿ ಎಂಟನೇ ತರಗತಿಯನ್ನೂ ನಡೆಸಲಾಗಿತ್ತು.

ಸಾರಿಗೆ ವ್ಯವಸ್ಥೆ ಕಲ್ಪಿಸಿ
ಶಾಲೆಯ ಶೌಚಾಲಯ ರೋಟರಿ ವತಿಯಿಂದ 2000ರಲ್ಲಿ ನಿರ್ಮಾಣವಾಗಿದ್ದು, ಈಗ ಶೌಚಾಲಯದ ದುರಸ್ತಿ ಮಾಡಬೇಕಾಗಿದೆ. ಕಲಿಕೋಪಕರಣ, ಪೀಠೊಪಕರಣದ ಜತೆಗೆ ಶಾಲೆಯಲ್ಲಿ ಸಮರ್ಪಕ ಪ್ರಯೋಗಾಲಯವಿಲ್ಲ. ದೂರದ ಊರುಗಳಿಂದ ಶಾಲೆಗೆ ಮಕ್ಕಳು ಬರುತ್ತಿದ್ದು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.

ಇದನ್ನೂ ಓದಿ:ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

Advertisement

ಬೇಡಿಕೆಗಳು ಏನೇನು?
ಪ್ರಸ್ತುತ ಶಾಲೆಯಲ್ಲಿ ಉಳಿದಿಲ್ಲ ವ್ಯವಸ್ಥೆಗಳೂ ಸಮರ್ಪಕವಾಗಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಮಳೆಗಾಲ ಬಿಟ್ಟು ಉಳಿದ ಸಮಯದಲ್ಲಿ ಅಳವಾದ ಬಾವಿಯ ನೀರು ಬತ್ತಿ ಹೋಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೂ, ಅಡುಗೆ ಸಿಬಂದಿಗೆ ನೀರಿಲ್ಲದೆ ಸಮಸ್ಯೆಯಾಗುತ್ತಿದೆ. ಶಾಲಾ ಮುಖ್ಯೋಪಾಧ್ಯಾಯರು ಹೊಸ ಬಾವಿಗಾಗಿ ಮನವಿ ಸಲ್ಲಿಸಿದ್ದಾರೆ. ಶಾಲಾಭಿವೃದ್ಧಿ ಸಮಿತಿಯವರೂ ಮನವಿ ಮಾಡಿಕೊಂಡಿದ್ದಾರೆ.

ಬಾವಿ ಬೇಕಾಗಿದೆ
ಶಾಲೆಯು ಉತ್ತಮ ಶೈಕ್ಷಣಿಕ ಪರಂಪರೆಯನ್ನು ಹೊಂದಿದ್ದು ಬೇಸಗೆಯಲ್ಲಿ ಬಿಸಿಯೂಟಕ್ಕೂ ನೀರಿಲ್ಲವಾಗಿದೆ. ರೋಟರಿ ಕ್ಲಬ್‌ನವರು 2000 ರಲ್ಲಿ ನಿರ್ಮಿಸಿಕೊಟ್ಟ ಶೌಚಾಲಯಕ್ಕೂ ನೀರಿಲ್ಲವಾಗಿದೆ. ಹೊಸ ಬಾವಿ ಮತ್ತು ಶೌಚಾಲಯದ ದುರಸ್ತಿ, ಪ್ರಯೋಗಾಲಯ, ಸಾರಿಗೆ ವ್ಯವಸ್ಥೆ ಬೇಕಾಗಿದೆ. ಈ ಬಗ್ಗೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ.
-ಐವನ್‌ ಸಂತೋಷ್‌ ಸಾಲಿನ್ಸ್‌,
ಮುಖ್ಯೋಪಾಧ್ಯಾಯರು

ಹೊಸ ಬಾವಿ ಅಗತ್ಯವಿದೆ
ಮೂಡ್ಲಕಟ್ಟೆ ಶಾಲೆಯಲ್ಲಿ ಪ್ರಸ್ತುತ 136 ವಿದ್ಯಾರ್ಥಿಗಳು ವಾಸಂಗ ಮಾಡುತ್ತಿದ್ದು ಬೇಸಗೆಯಲ್ಲಿ ಬಾವಿಯ ನೀರು ಬತ್ತಿ ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ಹೊಸ ಬಾವಿ ಬೇಕಾಗಿದೆ. ಪ್ರಯೋಗಾಲಯ ಹಾಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.
-ಎಸ್‌.ವಿ.ನಾಗರಾಜ್‌,
ಅಧ್ಯಕ್ಷರು, ಶಾಲಾ ಮೇಲುಸ್ತುವಾರಿ ಸಮಿತಿ.

ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next