Advertisement
ಕಲಾದಗಿಯಲ್ಲಿ ಶನಿವಾರ “ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಿಟಿಷರ ಕಾಲದ ಅಮಲದಾರರು, ಜನರ ಮನೆ ಬಾಗಿಲಿಗೆ ಬರುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಜನರೇ ಸರ್ಕಾರದ ಕಚೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಬಿಜೆಪಿ ನೇತೃತ್ವದ ನಮ್ಮ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ “ನಾಳೆ ಬಾ’ ಎಂಬ ಸಂಸ್ಕೃತಿಯನ್ನೇ ತೊಡೆದು ಹಾಕಿ, ಬಡವರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ನೀಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
Related Articles
ಕಂದಾಯ ಸಚಿವನಾದ ಬಳಿಕ ಈವರೆಗೆ 60 ಲಕ್ಷ ರೈತರಿಗೆ ಪಹಣಿ ನೀಡಲಾಗಿದೆ. ಪಿಂಚಣಿಗಾಗಿ ಆರು ತಿಂಗಳ ಕಾಲ ತಹಶೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು. ಈಗ ಟೋಲ್ ಫ್ರೀ ನಂಬರ್ ಮಾಡಿದ್ದು, ಕರೆ ಮಾಡಿದ ಅಥವಾ ಅರ್ಜಿ ಕೊಟ್ಟ 72 ಗಂಟೆಯಲ್ಲಿ ಪಿಂಚಣಿ ಮಂಜೂರು ಮಾಡಲಾಗುತ್ತಿದೆ ಎಂದು ಹೇಳಿದರು.
Advertisement
ರೈತರು ಕಳ್ಳರಲ್ಲ: ಸರ್ಕಾರಿ ಜಾಗೆಯಲ್ಲಿ ಮನೆ ಕಟ್ಟಿಕೊಂಡ ತಾಂಡಾ, ಗೊಲ್ಲರಹಟ್ಟಿ, ಹಟ್ಟಿ ಹಾಗೂ ಬಡಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಲಾಗಿದೆ. ರೈತರು, ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ಅವರನ್ನು ಕಳ್ಳರಂತೆ ಕಾಣಲಾಗುತ್ತಿತ್ತು. ಅವರು ಕಳ್ಳರಲ್ಲ. ದೇಶಕ್ಕೆ ಅನ್ನ ನೀಡುವ ಅನ್ನದಾತರು. ಅವರು ಕಟ್ಟಿಕೊಂಡ ಮನೆಗೆ, ಒತ್ತುವರಿ ಮಾಡಿಕೊಂಡ ಭೂಮಿಗೆ ಹಕ್ಕುಪತ್ರ ಕಲ್ಪಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಶಾ, ಪ್ರಧಾನ್ ವಾಸ್ತವ್ಯ ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಆಧಿಕಾರಕ್ಕೆ ತರಲು ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮುಂತಾದವರು ರಾಜ್ಯದಲ್ಲೇ ಮನೆ ಮಾಡಿ ವಾಸ್ತವ್ಯ ಹೂಡಲಿದ್ದಾರೆ ಎಂದು ಸಚಿವ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮದು ನಾಳೆ ಬಾ ಎನ್ನುವ ಪಕ್ಷವಲ್ಲ. ನಮ್ಮದು ಟು ಡೇ ಎನ್ನುವ ಪಕ್ಷ. ಕಾಂಗ್ರೆಸ್‌ನವರಂತೆ ರಾಜ್ಯಕ್ಕೆ ಬಂದು ಭಾಷಣ ಮಾಡಿ ಹೋಗುವ ಕೆಲಸವನ್ನು ನಮ್ಮ ಪಕ್ಷದ ನಾಯಕರು ಮಾಡಲ್ಲ. ನಮ್ಮ ವರಿಷ್ಠರು ಈಗಾಗಲೇ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಾರೆ. ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾಷಣ ಮಾಡಿ ಓಡಿ ಹೋಗುವ ಮನಸ್ಥಿತಿ ನಮ್ಮ ನಾಯಕರಲ್ಲಿಲ್ಲ ಎಂದರು. ನಾವು ಪ್ರತಿ ಕುಟುಂಬದ ಮುಖ್ಯಸ್ಥ ಮಹಿಳೆಗೆ ಒಂದು ಸಾವಿರ ರೂ. ಘೋಷಣೆ ಮಾಡಿದ್ದೇವೆ. ಇದು ಶೀಘ್ರವೇ ಮಹಿಳೆಯರ ಖಾತೆಗೆ ಜಮೆಯಾಗಲಿದೆ. ಕಾಂಗ್ರೆಸ್‌ನವರು ಕೇವಲ ಭಾಷಣ ಮಾಡಿ, ಭರವಸೆ ಕೊಡುತ್ತಾರೆ. ನಾವು ಹೇಳದೇ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಸ್ಟೆಲ್ ಒದಗಿಸಲಾಗಿದೆ. ಈಗ ಹಾಸ್ಟೆಲ್‌ಗಳ ಬೇಡಿಕೆಯೇ ಇಲ್ಲ ಎಂದರು. 500 ಎಕರೆ ಮಂಜೂರು: ಕಲಾದಗಿ ಮುಳುಗಡೆ ಗ್ರಾಮದ ಜನರಿಗೆ ಪುನರ್ವಸತಿ, ಪುನರ್ ನಿರ್ಮಾಣ ಸಹಿತ ವಿವಿಧ ಕಾರ್ಯಕ್ಕೆ 500 ಎಕರೆ ಭೂಮಿಯ ಬೇಡಿಕೆ ಇಡಲಾಗಿದೆ. ಈ ಗ್ರಾಮಸ್ಥರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು 500 ಎಕರೆ ಭೂಮಿ ನೀಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಲಾಗು ವು ದು. ಕಂದಾಯ ಮತ್ತು ವಿವಿಧ ಇಲಾಖೆಗಳ ಒಟ್ಟು 13 ಸಾವಿರ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.