Advertisement

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

03:01 PM Jul 07, 2022 | Team Udayavani |

ತುಮಕೂರು: ಅತೀ ವೇಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಕಾರಿಗೆ  ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಜಿಲ್ಲೆಯ  ತಿಪಟೂರು ತಾಲೂಕಿನ  ತಿಮ್ಮಲಾಪುರ ಮತ್ತಿಹಳ್ಳಿ ಗೇಟ್ ಬಿ ಎಚ್ ರಸ್ತೆ ನಡೆದಿದೆ.

Advertisement

ಮೃತಪಟ್ಟವರನ್ನು ಸಿದ್ದರಾಜು (38) ಮೋಹನ್( 35) ರಾಜಣ್ಣ (28 ) ಎಂದು ಗುರುತಿಸಲಾಗಿದ್ದು, ಗಾಯಗೊಂಡವರಿಗೆ ತಿಪಟೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿದರೆಗುಡಿ ನಿಂದ ತಿಪಟೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ  ಬಸ್‌, ತಿಪಟೂರಿನಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

ತಿಪಟೂರು ಪೊಲೀಸ್‌ ಠಾಣಾ ವ್ಯಾಪ್ರತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಾಯಗೊಂಡವರನ್ನು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next