Advertisement

ಸರ್ಕಾರದ ಬೊಕ್ಕಸ ಖಾಲಿ ಆಗಿಲ್ಲ: ಸಚಿವ ಅಶೋಕ್‌

09:36 PM Dec 13, 2022 | Team Udayavani |

ಹನೂರು: ಕೆಲವರು ನಮ್ಮ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎನ್ನುತ್ತಾರೆ. ಆದರೆ, ಯಾವುದೇ ಸರ್ಕಾರದ ಅವಧಿಯಲ್ಲಿ ಬರದಷ್ಟು ಹಣ ಖಜಾನೆಗೆ ಹರಿದುಬರುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವಿಪಕ್ಷಗಳಿಗೆ ತಿರುಗೇಟು ನೀಡಿದರು.

Advertisement

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶೋಕ್‌, ಯಾವುದೇ ಸರ್ಕಾರದ ಅವಧಿಯಲ್ಲಿ ಬರದಷ್ಟು ಹಣ ತೆರಿಗೆ ರೂಪದಲ್ಲಿ ಬಿಜೆಪಿ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದೆ. ಅದರಲ್ಲಿ ರಸ್ತೆ, ಕುಡಿಯುವ ನೀರು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಳೆದ 15-20 ವರ್ಷಗಳಿಂದ ಮೀಸಲಾತಿ ಹೆಚ್ಚಳ ನನೆಗುದಿಗೆ ಬಿದ್ದಿತ್ತು. ಹಲವು ಸಮಿತಿಗಳು ವರದಿ aನೀಡಿದರೂ ಜಾರಿ ಮಾಡಿರಲಿಲ್ಲ. ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಅದನ್ನು ಜಾರಿಗೊಳಿಸಲು ಮುಂದಾದಾಗ ಹಲವರು ಅದಕ್ಕೆ ಕೈಹಾಕಬೇಡಿ, ಅದು ಜೇನುಗೂಡಿನಂತೆ ಎಂದು ಹೇಳಿದರು. ಆದರೆ, ಇದ್ಯಾವುದಕ್ಕೂ ಹೆದರದೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿ, ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.

ಸಚಿವ ಸೋಮಣ್ಣಗೆ ಬಹುಪರಾಕ್‌: ಕಾರ್ಯಕ್ರಮದಲ್ಲಿ ಸಚಿವ ಆರ್‌.ಅಶೋಕ್‌ ಅವರು ವಸತಿ ಸಚಿವ ಸೋಮಣ್ಣ ಅವರಿಗೆ ಬಹುಪರಾಕ್‌ ಹಾಕಿದರು. ಅವರನ್ನು ನಾವೆಲ್ಲಾ ವಿಜಯನಗರದ ವೀರಪುತ್ರ ಎನ್ನುತ್ತೇವೆ. ಅವರು ವಿಜಯನಗರದ ವೀರಪುತ್ರ ಮಾತ್ರ ಅಲ್ಲ, ಜಗದೇಕವೀರ ಎಂದು ಬಣ್ಣಿಸಿದರು. ಸಚಿವ ಸೋಮಣ್ಣ ಅವರು ಬಂದ ಕಡೆ ಅಭಿವೃದ್ಧಿ ತಾನಾಗೇ ನಡೆಯುತ್ತದೆ ಎಂದು ಹೊಗಳಿದರು.

Advertisement

Udayavani is now on Telegram. Click here to join our channel and stay updated with the latest news.

Next