Advertisement
ಹಾಗಾಗಿ ನಿಮ್ಮ ಮೇಲಿನ ಆರೋಪ ಮಾಫಿ ಆಗುವುದೇ ಅಥವಾ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವಿರಾ?’ ಎಂದು ಹಲವು ಸಚಿವರು ಅಶೋಕ್ ವಿರುದ್ಧ ಬುಧವಾರ ಅಕ್ಷರಶಃ ಮುಗಿಬಿದ್ದಿದ್ದಾರೆ.
Related Articles
Advertisement
ನೀವು ಸರಿ; ಸಿಎಂ ಹೇಗೆ ತಪ್ಪು?ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಅಶೋಕ್ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡು ಅನಂತರ ಬಿಡಿಎಗೆ ವಾಪಸ್ ನೀಡಿದವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ. ನೀವು ಮಾಡಿದ್ದು ಸರಿಯಾದರೆ ಸಿಎಂ ಅವರ ಪತ್ನಿ ಪಾರ್ವತಮ್ಮ ಅವರು ಮಾಡಿದ್ದು ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಕೊಡು ತ್ತೀರಿ, ಮುಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದದ್ದನ್ನು ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಿ. ಇದು ಎಷ್ಟು ಸರಿ ಎಂದು ಖಾರವಾಗಿ ಕೇಳಿದರು. ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸರಕಾರಿ ಜಾಗವನ್ನು 23 ವರ್ಷಗಳ ಅನಂತರ ಡಿನೋಟಿಫಿಕೇಶನ್ ಮಾಡಿರುವುದು ಅಕ್ರಮ ಅಲ್ಲವೇ? ಶುದ್ಧಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬವವರ ವಾರಸುದಾರರು ಯಾರು ಎಂದು ನೋಡಿದರೆ ಜಿ. ಶಾಮಣ್ಣ, ಜಿ. ಮುನಿರಾಜು, ಜಿ. ಗೋವಿಂದಪ್ಪ, ಜಿ. ಕಾಂತರಾಜು, ಜಿ. ಸುಬ್ರಹ್ಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬವವರಿಗೆ ಗುಳ್ಳಮ್ಮ ಹೇಗೆ ಸಂಬಂಧ ಎಂದು ಗೊತ್ತಿಲ್ಲ. ಮೂಲ ವಾರಸುದಾರರು ಡಿನೋಟಿಫಿಕೇಶನ್‌ಗೆ ಅರ್ಜಿಯನ್ನೇ ಕೊಟ್ಟಿಲ್ಲ. ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬವರನ್ನು ಸೃಷ್ಟಿ ಮಾಡಲಾಗಿದೆ. ಇದು ಕ್ರಮವೇ, ಅಕ್ರಮವೇ ಎಂದು ಪ್ರಶ್ನಿಸಿದರು. ಏನಿದು ಆರೋಪ?
-ಲೊಟ್ಟೆಗೊಲ್ಲಹಳ್ಳಿಯಲ್ಲಿ ಜಾಗ ಖರೀದಿಸಿದ್ದ ಆರ್. ಅಶೋಕ್
-ಶುದ್ಧ ಕ್ರಯದ ಮೂಲಕ ಜಮೀನು ಖರೀದಿ
-ಡಿನೋಟಿಫಿಕೇಶನ್ ಬಳಿಕ ಲೋಕಾಯುಕ್ತಕ್ಕೆ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ. ಅತ್ರಿ ದೂರು
-ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣ
-2011ರಲ್ಲಿ ಜಮೀನನ್ನು ಬಿಡಿಎಗೆ ಗಿಫ್ಟ್ ಮೂಲಕ ಹಿಂದಿರುಗಿಸಿದ್ದ ಅಶೋಕ್