ಕುಷ್ಟಗಿ : ನವೆಂಬರ್ 1 ಕನ್ನಡ ರಾಜ್ಯೋತ್ಸವ ದಂದು ಸಾರಿಗೆ ನೌಕರರಿಬ್ಬರು ಕುಷ್ಟಗಿ- ಮಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ಸನ್ನು ನವ ವಧುವಿನಂತೆ ಅಲಂಕರಿಸಿ ಸಂಭ್ರಮಿಸಿದ್ದಾರೆ.
ಚಾಲಕ ಶಿವಮೂರ್ತಿ ಅಳವಂಡಿ ಹಾಗೂ ನಿರ್ವಾಹಕ ಮಲ್ಲಪ್ಪ ಸುಲ್ತಾನಪುರ ಇವರೀರ್ವರು ಮಂಗಳೂರಿನಲ್ಲಿ ತರಹೇವಾರಿ ಹೂಗಳಿಂದ ಅಲಂಕರಿಸಿದ್ದಾರೆ. ಕರ್ನಾಟಕ ರತ್ನ ಪುನೀತ ರಾಜಕುಮಾರ ಭಾವಚಿತ್ರ ಹಾಗೂ ಸಾಹಿತಿಗಳ ಭಾವಚಿತ್ರ ಕನ್ನಡ ಹಾಡುಗಳೊಂದಿಗೆ ಅಲಂಕೃತ ಬಸ್ಸು ಕುಷ್ಟಗಿ ನಿಲ್ದಾಣಕ್ಕೆ ಬೆಳಗಿನ ಜಾವ ಬಂದಿದೆ. ಬಸ್ಸು ಬರುತ್ತಿದ್ದಂತೆ ಅಲ್ಲಿದ್ದ ಪ್ರಯಾಣಿಕರು ಕನ್ನಡದ ಅಲಂಕೃತ ಬಸ್ಸಿನೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರಲ್ಲದೇ ಅವರೊಂದಿಗೂ ಫೋಟೋ ತೆಗೆಸಿಕೊಂಡು ಸಂಭ್ರಮಿಸಿ ಚಾಲಕ ಶಿವಮೂರ್ತಿ ಅಳವಂಡಿ ಹಾಗೂ ನಿರ್ವಾಹಕ ಮಲ್ಲಪ್ಪ ಸುಲ್ತಾನಪುರ ಸೇವೆಯನ್ನು ಕೊಂಡಾಡಿದರು.
ಈ ಕುರಿತು ಚಾಲಕ ಶಿವಮೂರ್ತಿ ಅಳವಂಡಿ ಪ್ರತಿಕ್ರಿಯಿಸಿ ಕಳೆದ 15 ವರ್ಷಗಳಿಂದ ನವೆಂಬರ 1 ರ ಸಂಭ್ರಮ ಸಾರಲು ಈ ಸೇವೆ ಯಾವೂದೇ ಫಲಾಪೇಕ್ಷೆ ಇಲ್ಲದೇ ಅಭಿಮಾನದಿಂದ ಮಾಡುತ್ತಿರುವೆ. ಇದರಲ್ಲಿ ಖುಷಿ ಇದೆ. ಇದಕ್ಕಾಗಿ ಕ್ವಿಂಟಲ್ ಗಟ್ಟಲೇ ಹೂಗಳಿಗೆ 10ರಿಂದ 12 ಸಾವಿರ ರೂ.ಖರ್ಚಾಗುತ್ತದೆ. ಮೇಲಾಧಿಕಾರಿಗಳು, ನಮ್ಮ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಇದರ ಜೊತೆಗೆ ಪ್ರಯಾಣಿಕರು ಸಹ ನಮ್ಮೊಂದಿಗೆ ಸಂಭ್ರಮ ವ್ಯಕ್ತ ಪಡಿಸುವುದು ಇದಕ್ಕಿಂತ ಸಂಭ್ರಮ ಇನ್ನೊಂದಿಲ್ಲ ಎಂದರು. ಈ ಕುರಿತು ಸ್ಥಳೀಯರಾದ ನಾಗರಾಜ ಜಿಗಜಿನ್ನಿ ಮಾತನಾಡಿ ಹೂವಿನ ಅಲಂಕಾರದ ಬಸ್ಸು ನೋಡಲು ಕಣ್ಣು ಸಾಲದು ಅಷ್ಟೊಂದು ಚನ್ಮಾಗಿ ತಮ್ಮ ಮನೆತ ವಾಹನ ಎನ್ನುವಂತೆ ಅಲಂಕರಿಸುವುದು ನಮಗೂ ಕನ್ನಡ ಅಭಿಮಾನ ಉಕ್ಕುತ್ತದೆ ಎಂದರು.
ಇದನ್ನೂ ಓದಿ : ಕನ್ನಡ ಅಂಕಿ ಬಳಸಿದ್ದಕ್ಕೆ 2 ಬಾರಿ ವಜಾಗೊಂಡಿದ್ದ ನೌಕರ… ಕುಷ್ಟಗಿಯಲ್ಲಿ ಹೀಗೊಬ್ಬ ಕನ್ನಡಿಗ