Advertisement

ನಿಮಗಿನ್ನೂ ಗೊತ್ತಿಲ್ಲಶೆಟ್ರ ಮ್ಯಾಟರ್‌

03:45 AM Jan 11, 2017 | Harsha Rao |

ನಾ ಶೀತಲ, ನಾ ಕೋಮಲ, ನಾ ನೇರ

Advertisement

“ಬಿಗ್‌ಬಾಸ್‌ ಮನೆಗೂ ಹೊರಜಗತ್ತಿಗೂ ಹೆಚ್ಚಿನ ವ್ಯತ್ಯಾಸ ಕಾಣಲಿಲ್ಲ. ಇಲ್‌ ಹೇಗಿರಿ¤àನೋ ಅಲ್ಲೂ ಹಾಗೇ ಇದ್ದಿದ್ದಕ್ಕೆ ಹಾಗನಿಸಿರಬಹುದು’ ಅಂತಾರೆ ಶೀತಲ್‌. ಶೀತಲ್‌ ಅಲ್ಲಿ ಅತ್ತು ನಕ್ಕು ಹಗುರಾದ ಕ್ಷಣಗಳು, ಸೀಕ್ರೆಟ್‌ ರೂಂನ ಸೀಕ್ರೆಟ್‌ಗಳನ್ನೆಲ್ಲ ಹಂಚಿಕೊಂಡಿದ್ದಾರೆ, ಎಲ್ಲಕ್ಕಿಂತ ಹೆಚ್ಚಾಗಿ ಸಂಜನಾಗೆ ಭೂತವಾಗಿ ಕಾಡಿದ್ದು ತಾವು ಹೌದಾ ಅಲ್ವಾ ಅನ್ನೋದನ್ನು ಹೇಳಿದ್ದಾರೆ. 
*
ಬೆಂಗಳೂರು ಹೊಸ ವರ್ಷದ ಮಂಪರಲ್ಲಿತ್ತು. ಬರೋಬ್ಬರಿ 85 ದಿನಗಳನ್ನು ಬಿಗ್‌ಬಾಸ್‌ ಮನೆಯಲ್ಲಿ ಕಳೆದು ಬಂದ ಶೀತಲ್‌ ಬಿಡದಿಯ ರೆಸಾರ್ಟ್‌ನಲ್ಲಿ ಹೊಸ ಬೆಳಗಿನ ನಿರೀಕ್ಷೆಯಲ್ಲಿದ್ದರು. “ಛೇ, ಒಂದಿನ ಮೊದೆÉà ಹೊರಬಂದಿದ್ರೆ ಫ್ರೆಂಡ್ಸ್‌ ಜತೆ ನ್ಯೂಯಿರ್‌ ಸೆಲೆಬ್ರೇಟ್‌ ಮಾಡಬಹುದಿತ್ತಲ್ಲಾ’ ಅಂತ ರಾತ್ರಿಯಿಡೀ ಒದ್ದಾಡಿದ್ದ ಮನಸ್ಸು ಈಗ ತುಸು ಶಾಂತವಾಗಿತ್ತು. ಇದೊಂದು ದಿನ ಕಳೆದರೆ ಮತ್ತೆ ಎಂದಿನ ದಿನಚರಿ, ವೇಗವಾಗಿ ಚಲಿಸುವ ಜಗತ್ತಿಂದ ಸಣ್ಣ ಬ್ರೇಕ್‌ ತಗೊಂದು ಮತ್ತೆ ಆ ಪ್ರವಾಹದಲ್ಲಿ ಮುಂದುವರಿದ ಹಾಗೆ. 

ಅಲ್ಲೂ ಇಲ್ಲೂ ಎಲ್ಲೂ ನಾನಿರೋದೆ ಹೀಗೆ 
“ಬಿಗ್‌ಬಾಸ್‌ನಲ್ಲಿ ಚಾನ್ಸ್‌ ಸಿಕ್ಕರೆ ಖಂಡಿತಾ ಮಿಸ್‌ ಮಾಡ್ಕೊಳ್ಬೇಡಿ, ಧಾರಾಳವಾಗಿ ಹೋಗಬಹುದು’ ಅಂದರು ಶೀತಲ್‌. ಆಗ ನಡುಮಧ್ಯಾಹ್ನ ಎರಡೂಮೂವತ್ತರ ಆಸುಪಾಸು. ಬಿಗ್‌ಬಿ ಮನೆಯಿಂದ ಹೊರಬಂದು ಕೆಲವು ದಿನಗಳಷ್ಟೇ ಕಳೆದಿದ್ದವು. ಶೀತಲ್‌ ಮಾತಲ್ಲಿ ಸಣ್ಣ ಏದುಸಿರಿತ್ತು. “ಹೆØ, ತಮ್ಮನ ಜೊತೆ ಜಗಳಾಡ್ತಿದ್ದೆ, ನಮುª ಯಾವಾಗ್ಲೂ ಇದ್ದಿದ್ದೆ’ ಅಂದ್ರು ನಗುತ್ತಾ. ಮೊದಲು ಕೇಳಿದ್ದು ಬಿಗ್‌ಬಾಸ್‌ ಅನುಭವದ ಬಗ್ಗೆ, ಚಾನ್ಸ್‌ ಸಿಕ್ರೆ ಖಂಡಿತ ಹೋಗಿ ಅಂದಿದ್ದ ಅವರ ಅನುಭವದ ಒನ್‌ಲೈನ್‌. 

ಉಳಿದಂತೆ ಅಲ್ಲಿಂದ ಬಂದ ಮೇಲೆ ಉಳಿದವರಿಗೆ ಆಗುವಹಾಗೆ ಭಯಂಕರ ಎಕ್ಸೆ„ಟ್‌ಮೆಂಟ್‌, ಎರಡೇ ತುತ್ತು ಊಟ ಮಾತ್ರ ಒಳಹೋಗುವ ಊಟ, ಪ್ರತೀಕ್ಷಣಕ್ಕೂ ನೆನಪಾಗುವ ಟಾಸ್ಕ್ಗಳು  ..ಈ ಥರದ ಅನುಭವಗಳಾÂವುದೂ ಶೀತಲ್‌ಗೆ ಆಗಿಲ್ಲ. 

“ಇಲ್ಲಿದ್ದಾಗಲೂ ನಾನು ತಿನ್ನೋದು ಒಂಚೂರೇ, ಅಲ್ಲೂ ಹಾಗೇ ಇರಿ¤ದ್ದೆ, ಶಾಲಿನಿ ಮತ್ತು ಕೀರ್ತಿ ನೀನೇನು ಕೋಳಿ ಪಿಳ್ಳೆ ತರ ಅನ್ನ ಕೆದಕ್ತೀಯ ಅಂತ ರೇಗಿಸ್ತಿದ್ರು. ಮನೆಯಲ್ಲಿದ್ದಾಗ ಹೇಗಿರಿ¤àನೋ ಅಲ್ಲೂ ಹಾಗೇ ಇರಿ¤ದ್ದೆ, ಅನಿಸಿದ್ದನ್ನು ನೇರವಾಗಿ ಹೇಳ್ತಿದ್ದೆ. ಅಳಬೇಕು ಅನಿಸಿದಾಗ ಅಳ್ತಿದ್ದೆ, ಉಳಿದ ಸಮಯ ಬಿದ್ದೂಬಿದ್ದೂ ನಗ್ತಿದ್ದೆ. ನನ್ನ ನಿಜ ಸ್ವಭಾವವನ್ನು ಪಂಜರದಲ್ಲಿಟ್ಟು ನಾನಲ್ಲದ ಹಾಗಿರಲು ಹೋಗ್ಲೆà ಇಲ್ಲ, ಹಾಗಾಗಿ ಅಲ್ಲೂ, ಇಲ್ಲೂ ಒಂದೇ ಥರ ಇದ್ದೀನಿ’

Advertisement

ಮೊದಲೇ ಹೊರಬರುವ ಸೂಚನೆ ಸಿಕ್ಕಿತ್ತಾ?
“ಪ್ರತೀವಾರ ಎಲಿಮಿನೇಶನ್‌ ರೌಂಡ್‌ ಬಂದಾಗ್ಲೂ ಅನಿಸೋದು, ಈ ಸಲ ಮೋಸ್ಟಿ$Éà ನಾನ್‌ ಹೊರಗೆ ಹೋಗಬಹುದು ಅಂತ. ಜನರ ಸಪೋರ್ಟ್‌ನಿಂದ ಮುಂದೆ ಹೋಗ್ತಾನೆ ಬಂದೆ. ಟೇಬಲ್‌ ಕುಟ್ಟಿ ಹೇಳ್ತೀನಿ, ನನಗೆ ಬಂದಿರುವ ಅಷ್ಟೂ ಓಟ್‌ಗಳನ್ನೂ ಜನ ಪ್ರಾಮಾಣಿಕವಾಗಿ ಮಾಡಿರೋದು. ಈಗ್ಲೂ ಅನಿಸುತ್ತೆ, ನನಷ್ಟು ಸ್ಟ್ರಾಂಗ್‌ ಸ್ಪರ್ಧಿ ಅಲ್ಲದ ಮಾಲವಿಕ ಅಂತವರು ಒಳಗಿದ್ದು ನಾನು ಹೊರಗೆ ಬಂದಿದ್ದು ಸರಿಯಲ್ಲ ಅಂತ. 

ಸೀಕ್ರೆಟ್‌ ರೂಂ ವರ ಅಲ್ಲ, ಶಾಪ!
ಅದು ಸಣ್ಣ ರೂಂ, ತಲೆ ಮೇಲೆ ಯಾವಾಗ್ಲೂ ಉರೀತಿರೋ ಎರಡು ಲೈಟ್‌ಗಳು. ಒಂದು ಗ್ರೀನ್‌, ಇನ್ನೊಂದು ರೆಡ್‌. ಗ್ರೀನ್‌ ಲೈಟ್‌ ಇರುವಷ್ಟು ಹೊತ್ತು ಅಲ್ಲೇ ಕೂತಿರಬೇಕು, ರೆಡ್‌ಲೈಟ್‌ ಬಂದಕೂಡ್ಲೆà ಎದ್ದು ಬಾತ್‌ರೂಂಗೆ ಹೋಗಬೇಕು, ಬಾತ್‌ರೂಮ್‌ನಲ್ಲೂ ಎರಡು ಲೈಟ್‌, ರೆಡ್‌ ಲೈಟ್‌ ಇರೋತನಕ ಅಲ್ಲೇ ಇರಬೇಕು, ಗ್ರೀನ್‌ ಲೈಟ್‌ ಬಂದಕೂಡಲೇ ಯಥಾಸ್ಥಾನಕ್ಕೆ ಹೋಗಬೇಕು. ಅಷ್ಟರಲ್ಲಿ ಹೊರಗಿಂದ ಯಾರೋ ಬಂದು ಊಟ ತಂದಿಟ್ಟು ಹೋಗ್ತಾರೆ.                                                                                      
ಅದರ ಎದುರು ಸ್ಕ್ರೀನ್‌. ಇಡೀ ದಿನ ಅದೆರೆದು ಕೂತಿರಬೇಕು, ಬಿಗ್‌ಬಾಸ್‌ ಮನೆಯೊಳಗೆ ಅಷ್ಟೂ ಜನ ಏನ್ಮಾಡ್ತಿರ್ತಾರೆ ಎಲ್ಲ ಕಾಣಾ¤ ಇರುತ್ತೆ. ದೊಡ್ಡ ಹಿಂಸೆ ಅದು. ತಲೆಕೆಟ್ಟು ಹೋಗುತ್ತೆ. ತಂದಿಟ್ಟ ಅನ್ನ ಒಂದಗುಳೂ ಒಳಗೆ ಹೋಗಲ್ಲ. ಎದುರಿನ ಸ್ಕ್ರೀನ್‌ನಲ್ಲಿ ನಮ್ಮ ಬಗ್ಗೆ ತಲೆಗೊಂದು ಮಾತಾಡ್ತಿರುವಾಗ ಊಟ ಹೇಗೆ ಸೇರುತ್ತೆ? 

ಕಾರುಣ್ಯಂಗೆ ಬೂತ ಕಾಣಿಸಿದ್ದರೆ ಹಿಂದೆ ಸೀಕ್ರೆಟ್‌ರೂಂನಲ್ಲಿದ್ದವರ ಕೈವಾಡ ಇತ್ತಾ?
ಈ ವಿಷಯ ವಾಪಾಸ್‌ ಬಿಗ್‌ಬಾಸ್‌ ಮನೆಗೆ ಹೋದ ಮೇಲೆ ಗೊತ್ತಾಗಿದ್ದು. ಇದರ ಹಿಂದೆ ನಮ್ಮ ಕೈವಾಡ ಖಂಡಿತಾ ಇಲ್ಲ. ಯಾಕಂದರೆ ನಾವು ಹಾಗೆಲ್ಲ ಓಡಾಡುವ ಹಾಗೇ ಇರ್ಲಿಲ್ಲ. ಸ್ಕ್ರೀನ್‌ ಮುಂದೆ ಕೂತೇ ಇರಬೇಕಿತ್ತು. ಮತ್ತೆ ಆ ಮನೆಗೆ ಹೋದ್ಮೇಲೆ ಉಳಿದವರ ಹತ್ರ ಕೇಳೆª, ಏನೋ ಕಾರುಣ್ಯಂಗೆ ಮಾತ್ರ ಕಾಣಿಸ್ತಂತೆ. ನಮಗೇನೂ ಕಾಣಿಸ್ಲಿಲ್ಲಪ್ಪ ಅಂದ್ರು. 

ಸ್ಪ್ಲಿಟ್‌ ಪರ್ಸನಾಲಿಟಿ ಅಂದಾಗ ಅತ್ತಿದ್ದು ಯಾಕೆ? 
ಆ ಅಳು ಆ ಕ್ಷಣಕ್ಕೆ ಬಂದಿದ್ದು ಅನ್ನೋದಕ್ಕಿಂತ ಅಷ್ಟೂ ದಿನಗಳ ನೋವು ಆ ಕ್ಷಣ ಅಳುವಾಗಿ ಬಂತು ಅನ್ನಬಹುದೇನೋ. ಮೊದಲಿಂದಲೂ ನಂಗೆ ಫಿಲ್ಟರ್‌ ಮಾಡಿ ಮಾತನಾಡಿ ಅಭ್ಯಾಸ ಇಲ್ಲ. ಅನಿಸಿದ್ದನ್ನು ನೇರವಾಗಿ ಹೇಳ್ಳೋದು ನನ್ನ ಸ್ವಭಾವ. ಆದರೆ ನನ್ನ ಈ ಸ್ವಭಾವವನ್ನು ಕೆಲವ್ರು ಕೆಟ್ಟದು ಅನ್ನೋ ಹಾಗೆ ನೋಡ್ತಿದ್ರು.ನನ್ನ ಕ್ಲೋಸ್‌ ಗ್ರೂಪ್‌ನಲ್ಲಿ ಇರುವರೇ ಇದನ್ನು ವಿರೋಧಿಸಿ ಮಾತನಾಡಿದ್ರು. ಅದು ನಂಗೆ ಬೇಜಾರಾಗ್ತಿತ್ತು. ಈ ಘಟನೆಯಲ್ಲಿ ಕೀರ್ತಿ ತಮಾಷೆಗೆ ನಂಗೆ ಸ್ಪ್ಲಿಟ್‌ ಪರ್ಸನಾಲಿಟಿ ಇದೆ ಅಂತ ಹೇಳಿದ್ರು ಅನಿಸುತ್ತೆ. ಆದ್ರೂ ಅವರು ಈ ಮಾತನ್ನು ಹೇಳಿ ಆಮೇಲೆ ತಾನು ಹಾಗೆ ಹೇಳಲೇ ಇಲ್ಲ ಅಂದಿºಟ್ರಾ, ಅರೆ, ಈ ಕ್ಷಣ ಹೇಳಿ, ಇನ್ನೊಂದು ಕ್ಷಣಕ್ಕೆ ಇಲ್ಲ ಅಂದಿºಟ್ರಲ್ಲ, ನಂದೇ ತಪ್ಪು ಅನ್ನೋ ಹಾಗೆ ಮಾತಾಡ್ತಿದ್ದಾರಲ್ಲ ಅನಿಸ್ತು, ಉಳಿದವರನ್ನು ಕೇಳಿದ್ರೆ, ಅವರೂ ಕೀರ್ತಿ ಹಾಗೆ ಹೇಳೇ ಇಲ್ಲ ಅಂದ್ರು, ನನಗೆ ಸಿಕ್ಕಾಪಟ್ಟೆ ಬೇಜಾರಾಯ್ತು, ನಾನು ಒಂಟಿ ಅನಿಸಲಿಕ್ಕೆ ಶುರುವಾಯ್ತು, ಎಲಿÅಗೂ ನಮಸ್ಕಾರ ಹೇಳಿ ನಾನು ಒಳಗೆ ಹೋದೆ.

ಹೇರ್‌ಸ್ಟೈಲ್‌ ಕತೆ
ನಾಳೆ ಶನಿವಾರ ಅಂದರೆ ನಮಗೆಲ್ಲ ಖುಷಿ. ಹೊರಜಗತ್ತಿನ ಒಬ್ಬ ವ್ಯಕ್ತಿ ಜೊತೆಗೆ ಮಾತಾಡಬಹುದಲ್ವಾ ಅಂತ. ಶುಕ್ರವಾರ ಸಾಮಾನ್ಯವಾಗಿ ನಮಗೆ ಬಿಡುವಿರುತ್ತಿತ್ತು. ಶಾಲಿನಿ ನಂಗೆ ಏನೇನೋ ಹೇರ್‌ಸ್ಟೈಲ್‌ ಮಾಡೋರು, ನಾನು ಖುಷಿ ಖುಷಿಯಾಗಿ ಮಾಡಿಸ್ಕೊಳ್ತಿದ್ದೆ. ಒಂದಿನ ಅಂತೂ ನನ್ನ ಹೇರ್‌ಸ್ಟೈಲ್‌ ಕಂಡು ಸುದೀಪ್‌ ಅವ್ರು, ಇದೇನು ಕ್ಯಾಬೇಜ್‌ ಸ್ಟೈಲಾ ಅಂತ ಕೇಳಿದ್ರು. 

ಮುದ್ದು ಹುಡುಗ ಪ್ರಥಮ, ಸಂಜನಾ ಸುಳ್‌ ಹೇಳ್ತಾಳೆ!
ಪ್ರಥಮ ಸುಳ್ಳು ಹೇಳ್ಳೋ ವ್ಯಕ್ತಿ ಅಲ್ಲ, ಪಾಪದ ಹುಡ್ಗ ಅವನು, ಅವ°ಲ್ಲಿ ಒಳ್ಳೆತನ ಇದೆ. ಅಷ್ಟೋ ಸಲ ಒಂಥರ ಮುದ್ದು ಹುಡುಗ ಅನಿಸುತ್ತೆ, ಶುರು ಶುರುವಲ್ಲಿ ಸಿಕ್ಕಾಪಟ್ಟೆ ಇರಿಟೇಟ್‌ ಮಾಡ್ತಿದ್ದ ಒಪ್ತಿàನಿ. ಆದರೆ ಆಮೇಲಾಮೇಲೆ ಅವನನ್ನು ಎಲ್ರೂ ತಪ್ಪು ತಿಳ್ಕೊಂಡಿದ್ರು. ಸಂಜನಾ ಈ ಪ್ರಕರಣದಲ್ಲಿ ಸುಳ್ಳು ಹೇಳಿದ್ದಾಳೆ ಅನ್ನೋದು ನನ್ನ ನಂಬಿಕೆ. ಯಾಕಂದ್ರೆ ಅವಳು ತುಂಬ ಸುಳ್ಳು ಹೇಳ್ತಾಳೆ ಅನ್ನೋದು ನಂಗೆ ಸೀಕ್ರೆಟ್‌ ರೂಂನಲ್ಲಿ ಕೂತಿದ್ದಾಗಲೇ ಗೊತ್ತಾಗಿದೆ, ಹಾಗಂತ ಅವ್ಳು ನನ್ನ ಬಗ್ಗೆ ಏನೇ ಹೇಳಿದ್ರೂ ಅವಳ ಬಗ್ಗೆ ನಂಗೆ ಸಿಟ್ಟಿಲ್ಲ, ಆದ್ರೆ ಪ್ರಥಮ್‌ ಬಗ್ಗೆ ಕಾಳಜಿ ಇದೆ, ಆ ಕಾಳಜಿಯಿಂದಲೇ ನಾನು ಅವರ ಪ್ರಕರಣವನ್ನು ಪ್ರಶ್ನೆ ಮಾಡಿದ್ದು, ಸಂಜನಾ, ಭುವನ್‌, ಪ್ರಥಮ್‌ ಬಗ್ಗೆ ಎಲ್ಲರೂ ಮಾತಾಡಿಕೊಳ್ತಿದ್ರು. ಆದರೆ ನಾನು ನೇರವಾಗಿ ಕೇಳಿದೆ, ಇದನ್ನ ಇಲ್ಲೇ ಕ್ಲಿಯರ್‌ ಮಾಡಿಬಿಡೋಣ ಅನಿಸ್ತು. ಅದನ್ನು ಕೆಲವರು ನಾನು ಎಲ್ಲ ಕಡೆ ಮೂಗ್‌ ತೂರಿಸ್ತೀನಿ ಅಂದ್ರು. ಆದರೆ ಇದನ್ನಿಲ್ಲಿ ಕ್ಲಿಯರ್‌ ಮಾಡದಿದ್ರೆ ಒಳ್ಳೆಯವರ ಇಮೇಜ್‌ ಹಾಳಾಗುತ್ತೆ. 

ನನ್ನ ನೋವು ನಂಗೆ
ಇಷ್ಟೆಲ್ಲ ಲವಲವಿಕೆಯಿಂದ ಮಾತಾಡಿದ ಶೀತಲ್‌ ಒಂದು ಪ್ರಶ್ನೆಗೆ ಮಾತ್ರ ತುಸು ಗಲಿಬಿಲಿಯಲ್ಲಿ ಉತ್ತರಿಸಿದರು, ಪ್ರಶ್ನೆ ಮತ್ತೇನಲ್ಲ, “ಬಿಗ್‌ಬಿ ಮನೆಯಲ್ಲಿ ಪದೇ ಪದೇ ನಾನು ಬಹಳ ನೋವು ತಿಂದಿದ್ದೀನಿ ಅಂತಿದ್ರಲ್ಲಾ? ಅದೇನು’ ಅಂತ ಕೇಳಿದ್ದು. ಅಲ್ಲೇ ಏನು ಅಂತ ಹೇಳದವಳು ಇಲ್ಲಿ ಹೇಳ್ತೀನಿ ಅನ್ಸುತ್ತಾ? ಅಂತ ಕೇಳಿದ್ರು, ನಂಗೆ ನೋವನ್ನು, ಪ್ರೈವೆಟ್‌ ವಿಚಾರಗಳನ್ನು ಮಾರ್ಕೆಟ್‌ ಮಾಡಲು ಇಷ್ಟ ಇಲ್ಲ. ಹಾಗೆ ಮಾಡೋದು ತಪ್ಪು ಅಂತಲ್ಲ, ನಾನು ಹಾಗೆ ಮಾಡಲ್ಲ ಅಷ್ಟೇ ಅಂದ್ರು. 
**
ಕಿಚನ್‌ ದರ್ಬಾರ್‌!
ಕಿಚನ್‌ ಡಿಪಾರ್ಟ್‌ಮೆಂಟ್‌ ನಿರ್ವಹಿಸಿದ್ದು ಹೇಗಿತ್ತು?

ಬಿಗ್‌ ಬಿಯಲ್ಲಿ ಕಿಚನ್‌ ಡಿಪಾರ್ಟ್‌ಮೆಂಟ್‌ನ್ನು ಬೇರೆ ಬೇರೆ ರೀತಿಯಲ್ಲಿ ಅನಾಲಿಸಿಸ್‌ ಮಾಡ್ತಾರೆ. ಆದರೆ ನಿಜಕ್ಕೂ ಹಾಗಿರಲಿಲ್ಲ. ನಾವು ಅಷ್ಟು ಕಾಳಜಿಯಿಂದ ಕಿಚನ್‌ನ ನಿರ್ವಹಿಸಿದ ಕಾರಣ ಎಲ್ಲರಿಗೂ ವಾರದ ಅಷ್ಟೂ ದಿನ ಹೊಟ್ಟೆ ತುಂಬುವಷ್ಟು ಊಟ ಸಿಕು¤. ಕಳೆದ ಸೀಸನ್‌ ಥರ ಖಾಲಿ ಹೊಟ್ಟೆ ಇರಲಿಲ್ಲ. 

ಬಿಗ್‌ಬಿ ಮನೆಯವ್ರು ಊಟ, ತಿಂಡಿ ಕೊಡದೆ ಸತಾಯಿಸ್ತಾರೆ ಅನ್ನೋ ಕಂಪ್ಲೇಂಟ್‌ ಬಗ್ಗೆ?
ಹೊಟ್ಟೆ ತುಂಬ ತಿಂದು ಟಾಸ್ಕ್ ಮಾಡೋದ್ರಲ್ಲಿ ಏನು ಹೆಚ್ಚುಗಾರಿಕೆ ಇರುತ್ತೆ. ಎಲ್ಲ ಸನ್ನಿವೇಶಗಳಲ್ಲೂ ಎಲ್ಲರೂ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದೆ ಇಲ್ಲಿ ಮುಖ್ಯ. ಆಟದ ವಿಧಾನ ಇದು, ತಪ್ಪು ಅಂತ ಅನಿಸಲ್ಲ. 
ವಾರಕ್ಕೆ 6 ಲೀಟರ್‌ ಹಾಲು, 1ಕೆಜಿ ಸಕ್ರೆ ಸಿಗ್ತಿತ್ತು. ಮತ್ತೆ ಎಂಟಿಆರ್‌ ಮಿಕ್ಸ್‌ಗಳು, ಕಡಿಮೆ ತರಕಾರಿ, ಸಿಕ್ಕಾಪಟ್ಟೆ ಆಲೂಗಡ್ಡೆ ಇತ್ತು. ಹೀಗಿದ್ರೂ ನಾವು ಸಮವಾಗಿ ಹಂಚಿಕೊಂಡು ತಿಂದ್ವಿ. 

ನಿಮ್ಮಲ್ಲಿ ಉಳಿಸೋದ್ರಲ್ಲಿ ಎಕ್ಸ್‌ಪರ್ಟ್‌ ಯಾರು?
ಶಾಲಿನಿ, ಅವರು ಪ್ರತಿಯೊಂದನ್ನೂ ಒದಗು ಬರೋ ಹಾಗೆ ಮಾಡ್ತಿದ್ರು. ರುಚಿ ರುಚಿಯಾಗೂ ಅಡುಗೆ ಮಾಡ್ತಿದ್ರು. ನಮ್‌ ಡಿಂಪಿಗಿಂತ್ಲೂ ಕಡಿಮೆ ತಿಂತೀಯಾ ಅಂತಿದ್ರು ಯಾವಾಗ್ಲೂ. 

ಸಂಜನಾಗೇನೋ ಊಟ, ತಿಂಡಿ ಪ್ರಾಬ್ಲೆಂ ಆಯ್ತಂತೆ?
ಅವಳನ್ನು ಚಿಕ್ಕವಯಸ್ಸಿಂದಲೇ ರಾಯಲ್‌ ಆಗಿ ಬೆಳೆಸಿದ್ದಾರೆ ಅನ್ಸತ್ತೆ, ನಮ್ಗೆಲ್ಲ ಮೂರು ವರ್ಷದವರೆಗೆ ಮಾತ್ರ ಅನ್ನವನ್ನು ತಟ್ಟೆಗೆ ಹಾಕಿ ತಂದು ತಿನ್ನಿಸ್ತಿದ್ದಿದ್ದು. ಆಮೇಲೆ ಬೇಕಾದ್ರೂ ತಿನ್ನು, ಇಲ್ಲಾಂದ್ರೆ ಎದ್‌ ಹೋಗು ಅಂತಿದ್ರು, ನಾವೆಲ್ಲ ಹಾಗೇ ಬೆಳೆದವರು, ಎಲ್ಲಕಡೆ ಅಡೆjಸ್ಟ್‌ ಆಗ್ತಿàವಿ. 

ಬಿಗ್‌ಬಿ ಮನೆಯಲ್ಲಿ ನೆನಪಾಗ್ತಿದ್ದ ತಿಂಡಿ?
ಹಾಗೇನಿಲ್ಲ, ನಂಗೆ ಊಟ ತಿಂಡಿ ಅಂದ್ರೆ ಅಂಥಾ ಆಸಕ್ತಿ ಅಲ್ಲ, ನಾನು ಫ‌ುಡೀನೂ ಅಲ್ಲ. ಹಾಗಾಗಿ ಅಲ್ಲಿ ಸಿಕ್ಕಿದ್ದು ತಿನಿ¤ದ್ದು, ಇನ್ನೂ ಏನೋ ತಿನ್ಬೇಕು ಅನಿಸಿಲ್ಲ. ಹೊರಗೆ ಬಂದ್ಮೇಲೆ ಚಿಕನ್‌ ಸ್ವಲ್ಪ ತಿಂದೆ.
**

ಒಂಥರ ಟಾಮ್‌ಬಾಯ್‌ ಥರ ಇರೋವ್ಳು ನಾನು. ಲೂಸ್‌ ಲೂಸ್‌ ಪ್ಯಾಂಟ್‌ಗಳು, ಹರಿದ ಪ್ಯಾಂಟ್‌ಗಳನ್ನೇ ಹಾಕೋದು. ಬ್ರೈಟ್‌ ಕಲರ್‌ಗಳಿಷ್ಟ. ಬಟ್ಟೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳಲ್ಲ. ಬಿಗ್‌ಬಾಸ್‌ ಮನೆಯಲ್ಲಿ ನಾನ್‌ ತಂದಿರೋ ಶೂಸ್‌ ನೋಡಿ ಭುವನ್‌ ಹೇಳಿದ್ರು, ಇದ್ರಲ್ಲಿ ಒಂದೇ ಒಂದು ಹುಡುಗಿಯರು ಹಾಕೋ ಥರದ ಶೂವೇ ಇಲ್ವಲ್ಲಾ ಅಂತ!
*
ನನ್ನ ಕಂಪೆನಿ “ಮೀಡಿಯಾ ಮನೆ’ಯಲ್ಲಿ ತೊಡಗಿಸಿಕೊಂಡಿದ್ದೀನಿ. ಜೊತೆಗೆ “ಚೇಸ್‌’ ಅಂತ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀನಿ. ಇನ್ನೊಂದು ಹೆಸರಿಡದ ಮಹಿಳಾ ಪ್ರದಾನ ಚಿತ್ರದಲ್ಲಿ ಅವಕಾಶ ಸಿಕ್ಕಿದೆ, ಅದು ನಾನು ಈವರೆಗೆ ಮಾಡದಂಥ ವಿಶೇಷ ಪಾತ್ರ.
– ಶೀತಲ್‌ ಶೆಟ್ಟಿ, ನಟಿ, ನಿರೂಪಕಿ

Advertisement

Udayavani is now on Telegram. Click here to join our channel and stay updated with the latest news.

Next