ಬೆಟಗೇರಿ: ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಓಕುಳಿ ಸಂಪನ್ನಗೊಂಡಿತು. ಮಾರುತಿ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಪುರಜನರಿಂದ ಪೂಜೆ-ಪುನಸ್ಕಾರ, ನೈವೇದ್ಯ ಸಮರ್ಪಣೆ, ಹರಕೆ ತಿರಿಸುವ ಕಾರ್ಯಕ್ರಮ ನಡೆಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ವಿವಿಧ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳಲಾಯಿತು.
ಶ್ರೀ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಶಿವಾನಂದ ಬುಳ್ಳಿ, ರಾಮಯ್ಯ ಮಠದ, ಸತ್ತೆಪ್ಪ ಹೊಸಟ್ಟಿ, ಬಾಳಪ್ಪ ಬುಳ್ಳಿ, ಬಸವರಾಜ ಬುಳ್ಳಿ, ಸುರೇಶ ಮಠದ, ಪ್ರಕಾಶ ಪಾಟೀಲ ಸೇರಿದಂತೆ ಗ್ರಾಮದ ವಿವಿಧ ಸಮುದಾಯದ ಹಿರಿಯರು, ಇಲ್ಲಿಯ ಮಾರುತಿ ದೇವರ ಓಕುಳಿ ಉತ್ಸವ ಆಚರಣಾ ಸಮಿತಿ ಸದಸ್ಯರು, ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತರು ಇದ್ದರು.
Advertisement
ಸಂಜೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ವಿವಿಧ ದೇವರುಗಳ ಓಕಳಿ ಕೊಂಡಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ಸಂಭ್ರಮದಿಂದ ನಡೆದ ಬಳಿಕ ನೀರು ಎರಚುವ ಕಡೆ ಓಕಳಿ ಜರುಗಿತು. ನಂತರ ಮಹಾಪ್ರಸಾದ ನಡೆಯಿತು.