Advertisement

ವೈಭವದ ಹಾಲಬಾವಿ ವೀರಭದ್ರೇಶ್ವರ ಜಾತ್ರೆ

11:18 AM Nov 26, 2018 | Team Udayavani |

ಮುದಗಲ್ಲ; ಪಟ್ಟಣದ ಹೊರವಲಯದ ಶ್ರೀ ಹಾಲಭಾವಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಶನಿವಾರ ಸಾವಿರಾರು
ಭಕ್ತರ ಮಧ್ಯೆ ಅದ್ಧೂರಿಯಾಗಿನಡೆಯಿತು. ಜಾತ್ರೆ ಅಂಗವಾಗಿ ಕುಂಬಾರಪೇಟೆ ಬಸವೇಶ್ವರ ದೇವಸ್ಥಾನದಿಂದ ಕುಂಭ, ವೀರಭದ್ರೇಶ್ವರ ಭಾವಚಿತ್ರ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ 108 ಸುಮಂಗಲಿಯರು ಕುಂಭಗಳನ್ನು ಹೊತ್ತು ಸಾಗಿದರು. ಡೊಳ್ಳು ಕುಣಿತ, ಪುರವಂತರ ಸೇವೆಯೊಂದಿಗೆ ನಡೆದ ಮೆರವಣಿಗೆಯಲ್ಲಿ ಅನೇಕ ಭಕ್ತರು ಶಸ್ತ್ರ ಹಾಕಿಸಿಕೊಂಡು ಭಕ್ತಿ ಮೆರೆದರು.

Advertisement

ಗಮನ ಸೆಳೆದ ಕಲಾತಂಡ: ಜಾತ್ರಾ ಮಹೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೇವಸ್ಥಾನದ ಸಮಿತಿ ವತಿಯಿಂದ ವಿವಿಧ ಕಲಾ ತಂಡಗಳು ಭಾಗಿಯಾಗಿ ಜಾತ್ರೆ ಮೆರಗು ಹೆಚ್ಚಿಸಿದ್ದವು. ಸಿಂಧನೂರಿನ ಮಹಿಳಾ ವೀರಗಾಸೆ ತಂಡ, ಜಾನಪದ ವೀರಗಾಸೆ ತಂಡದವರು ವೀರಗಾಸೆ ನೃತ್ಯ ಪ್ರದರ್ಶಿಸಿದರು. ಬಸವರಾಜ ತಾವರಗೇರಿ ಹಾಗೂ ಬೂದಗುಂಪಾದ ಬಸಯ್ಯಸ್ವಾಮಿ ಅವರು ಪುರವಂತಿಕೆ ಸೇವೆ ಸಲ್ಲಿಸಿದರು.

ಮುದಗಲ್‌ ಮೇಗಳಪೇಟೆ, ಕನ್ನಾಪುರಹಟ್ಟಿ, ಗೊಲ್ಲರಹಟ್ಟಿ ಸೇರಿ ವಿವಿಧೆಡೆಯಿಂದ ಡೊಳ್ಳು ಕುಣಿತದ ತಂಡಗಳು ಭಾಗಿಯಾಗಿದ್ದವು. ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಹಾಗೂ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ಅನೇಕ ಭಕ್ತರು ಶ್ರೀ ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸಿ, ಕಾಯಿ, ಹಣ್ಣು ಸಮರ್ಪಿಸಿದರು.

ಸಿದ್ದಯ್ಯಸ್ವಾಮಿ ಸಾಲಿಮಠ, ಸುರೇಶಗೌಡ ಪಾಟೀಲ, ಗುರುಬಸಪ್ಪ ಸಜ್ಜನ, ಪುರಸಭೆ ಸದಸ್ಯರಾದ ಶ್ರೀಕಾಂತಗೌಡ ಪಾಟೀಲ, ಗುಂಡಪ್ಪ ಗಂಗಾವತಿ, ಪುರಸಭೆ ಮುಖ್ಯಾಧಿಕಾರಿ ನರಸಿಂಹ ಮೂರ್ತಿ, ಶಿವಾನಂದ ಸುಂಕದ, ಚನ್ನಬಸನಗೌಡ ಕನ್ನಾಳ, ಮಲ್ಲಿಕಾರ್ಜುನ ಮಾಟೂರು, ಷಣ್ಮುಖಪ್ಪ ಖೇಣೆದ, ಶಶಿಕಲಾ ಭೋವಿ, ಸಂಗಪ್ಪ ಪಟ್ಟಣಶೆಟ್ಟಿ, ಪ್ರಭು ಕಂಡಕ್ಟರ್‌, ಸಂಗಪ್ಪ ಕೊಡೇಕಲ್‌, ಈರಣ್ಣ ಹಡಪದ, ಶರಣಪ್ಪ ಸಜ್ಜನ್‌, ಬಸವರಾಜ ಬಳಿಗೇರ ಸೇರಿ ಶಾಂಭವಿ ಸದ್ಭಕ್ತ ಮಂಡಳಿ, ಗಜಾನನ ಯುವಕ ಮಂಡಳಿ ಸದಸ್ಯರು, ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next