Advertisement

ಸಾಮೂಹಿಕ ವಿವಾಹದಿಂದ ಏಕತೆ

05:46 PM Jan 31, 2020 | Naveen |

ಗೊರೇಬಾಳ: ಜಾತಿ, ಮತ, ಪಂಥಗಳನ್ನು ಮೀರಿ ಸಾಮೂಹಿಕ ವಿವಾಹಗಳು ನಡೆಯುತ್ತಿರುವುದು ಸಾಮಾಜಿಕ ಐಕ್ಯತೆಗೆ ಪೂರಕವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ಸಿಂಧನೂರು ತಾಲೂಕಿನ ಗೋನವಾರ ಗ್ರಾಮದಲ್ಲಿ ಮಲ್ಲಯ್ಯ ತಾತನವರ ನೇತೃತ್ವದಲ್ಲಿ ಗುರುವಾರ ನಡೆದ ಶ್ರೀ ಮಹಾಂಕಾಳಿ, ಶ್ರೀ ಮಹಾಲಕ್ಷ್ಮೀ,ಮಹಾಸರಸ್ವತಿ ಒಳಗೊಂಡ 12 ಜ್ಯೋರ್ತಿಲಿಂಗಗಳ, 18 ಶಕ್ತಿ ಪೀಠಗಳ ಪಂಚಭೂತ ಶಿವ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 39 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಬಡ ಕುಟುಂಬಗಳಿಗೆ ಶ್ರೀರಕ್ಷೆಯಾಗಿವೆ. ದುಂದು ವೆಚ್ಚ ಮಾಡಿ ಅದ್ಧೂರಿ ವಿವಾಹ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಿಜೆಪಿ ಸರ್ಕಾರದಿಂದ ಈಗಾಗಲೇ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಇಂತಹ ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಇಂತಹ ಸರಳ ವಿವಾಹ ಕಾರ್ಯಕ್ರಮವನ್ನು ಗ್ರಾಮದ ಮಲ್ಲಯ್ಯ ತಾತನವರು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ 39 ಜೋಡಿಗಳು ಕಷ್ಟ-ಸುಖಗಳಲ್ಲಿ ಒಂದಾಗಿ ಜೀವನ ಸಾಗಿಸಬೇಕು. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ಮಲ್ಲಯ್ಯ ತಾತನವರು ಪ್ರತಿ ವರ್ಷ ವಿಭಿನ್ನ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ ಎಂದರು. ಸಾನಿಧ್ಯ ವಹಿಸಿದ್ದ ಮಲ್ಲಯ್ಯ ತಾತ ಗೋನವಾರ ಮಾತನಾಡಿ, ಗ್ರಾಮದಲ್ಲಿ 12 ಜ್ಯೋರ್ತಿಲಿಂಗಗಳ ಹಾಗೂ 18 ಶಕ್ತಿ ಪೀಠಗಳ ಪಂಚಭೂತ ಶಿವ ದೇವಾಲಯಗಳು ಕಟ್ಟುವ ಗುರಿ ನನ್ನದಾಗಿತ್ತು. ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

Advertisement

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕಾಡಾ ಅಧ್ಯಕ್ಷ ಆರ್‌.ಬಸನಗೌಡ ತುರ್ವಿಹಾಳ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ನಗರ ಯೋಜನಾ ಪ್ರಾ ಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಜಿಪಂ ಸದಸ್ಯ ಎನ್‌.ಶಿವನಗೌಡ ಗೊರೇಬಾಳ, ಮುಖಂಡರಾದ ವಿರೂಪಾಕ್ಷಪ್ಪ ನಾಯಕ, ಆರ್‌.ಸಿದ್ದನಗೌಡ ತುರ್ವಿಹಾಳ, ವೆಂಕಟೇಶ ರಾಗಲಪರ್ವಿ, ಪ್ರಸನ್ನ ಪಾಟೀಲ ಮಸ್ಕಿ, ಖಾಜಾಹುಸೇನ್‌ ರೌಡಕುಂದಾ, ಟಿ.ಸುಬ್ಬರಾವ್‌, ಸಿದ್ದು ಹೂಗಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next