Advertisement

ಗೊರವನಹಳ್ಳಿ ದೇಗುಲ ಸೀಲ್‌ಡೌನ್‌

09:26 AM Jul 27, 2020 | Suhan S |

ಕೊರಟಗೆರೆ: ರಾಜ್ಯದಲ್ಲಿ ಪಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಆಡಳಿತ ಮಂಡಲಿ ಜು.20 ರಿಂದ ಸೀಲ್‌ಡೌನ್‌ ಮಾಡಿ ಭಕ್ತಾದಿಗಳಿಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರಿಗೆ ದೇವಿಯ ದರ್ಶನವಿಲ್ಲದೆ ಆಕ್ರೋಶ ವ್ಯಕ್ತಪಡಿದರು.

Advertisement

ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಹಿಂಭಾಗದ ರಸ್ತೆಯಲ್ಲಿರುವ ಮಾರಮ್ಮ ದೇಗುಲದ ಅರ್ಚಕನ ಪತ್ನಿಗೆ ಕೋವಿಡ್ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಅರ್ಚಕ ಪ್ರಥಮ ಸಂಪರ್ಕದ ವ್ಯಕ್ತಿಯಾದ ಹಿನ್ನೆಲೆಯಲ್ಲಿ ಮಾರಮ್ಮ ದೇವಾಲಯವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಶ್ರೀ ಮಹಾಲಕ್ಷ್ಮೀ ದರ್ಶನಕ್ಕೆ ಗೊರವನಹಳ್ಳಿಗೆ ಸಾವಿರಾರು ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಲಿ ಶ್ರೀ ಮಹಾಲಕ್ಷ್ಮೀ ದೇವಾಲಯವನ್ನು ಜು.20 ರಂದು ಸೀಲ್‌ಡೌನ್‌ ಮಾಡಲಾಗಿದ್ದು ಈ ಬಗ್ಗೆ ದೇವಾಲಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹಾಗೂ ಸಾರ್ವಜನಿಕ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ದೇವಿಯ ದರ್ಶನಕ್ಕೆ ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ದೊರೆಯದೆ ನಿರಾಸೆಯಿಂದ ಆಡಳಿತ ಮಂಡಲಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ದೇವಾಲಯ ಸೀಲ್‌ಡೌನ್‌ ಮಾಡಿ 7 ದಿನ ಕಳೆದರೂ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಾಹಿತಿ ನೀಡದೆ ಆಡಲಿತ ಮಂಡಳಿ ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ಶ್ರಾವಣ ಮಾಸದ ದಿನಗಳಲ್ಲಿ ದೇವಿ ಸನ್ನಿಧಾನಕ್ಕೆ ಸಾವಿರಾರು ಭಕ್ತಾದಿಗಳು ಆಗಮಿಸುವ ಮಾಹಿತಿ ದೇವಾಲಯದ ಆಡಳಿತ ಮಂಡಳಿಗೆ ಇದ್ದರೂ ಜಾಣ ಕುರುಡರಂತೆ ನಡೆದು ಕೊಳ್ಳುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಬರುವ ವರಮಹಾ ಲಕ್ಷ್ಮೀ ಹಬ್ಬಕ್ಕೆ ಮಹಾಲಕ್ಷ್ಮೀ ದೇವಿಯ ದರ್ಶನ ಇರುತ್ತಾ ಅಥವಾ ಇರಲ್ವಾ ಎಂಬುದೇ ಇನ್ನೂ ಪ್ರಶ್ನೆಯಾಗಿದ್ದು ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next