Advertisement

ಗೂಗಲ್ ನ ‘ಈ’ ಸ್ಮಾರ್ಟ್ ಫೋನ್ ಜೂನ್ ನಲ್ಲಿ ಮಾರುಕಟ್ಟೆಗೆ ಲಗ್ಗೆ..?

04:31 PM Apr 27, 2021 | Team Udayavani |

ನವ ದೆಹಲಿ : ದಿನಕ್ಕೊಂದು ಸ್ಮಾರ್ಟ್ ಫೋನ್ ಇತ್ತೀಚೆಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಒಂದಕ್ಕೊಂದು ಜಿದ್ದಾ ಜಿದ್ದಿನ ಪೈಪೋಟಿ ಕೊಡುತ್ತಿವೆ.

Advertisement

ಈ ಸಾಲಿಗೆ ಗೂಗಲ್ ಸಂಸ್ಥೆಯ ಸ್ಮಾರ್ಟ್ ಫೋನ್ ವೊಂದು ಅತಿಶೀಘ್ರದಲ್ಲಿ ಸೇರ್ಪಡೆಯಾಗುವ ಸುದ್ದಿ ಬಹಿರಂಗವಾಗಿದೆ.  ಗೂಗಲ್ ತನ್ನ ಸ್ಮಾರ್ಟ್‌ ಫೋನ್ ಪಿಕ್ಸೆಲ್ 5 ಎ  ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬರುವ ಜೂನ್ 11 ರಂದು ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.

ಗೂಗಲ್ ಇತ್ತೀಚೆಗೆ ಪಿಕ್ಸೆಲ್ ಫೋನ್‌ಗಳ ಕ್ಯಾಮೆರಾ ಸಾಮರ್ಥ್ಯಗಳನ್ನು ಕೇಂದ್ರೀಕರಿಸುವ ಡಿವೈಸ್ ನಲ್ಲಿ ಬ್ರಾಕೆಟಿಂಗ್‌ ನೊಂದಿಗೆ HDR + ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಬ್ಲಾಗ್ ವಿವರಿಸಿತ್ತು. ಬ್ಲಾಗ್ ತನ್ನ ಮುಂಬರುವ ಪಿಕ್ಸೆಲ್ 5 ಎ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ.

ಓದಿ :  ಕರ್ಫ್ಯೂ ಸಂದರ್ಭದಲ್ಲಿ ಜನ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಡಿವೈಸ್ ನ ರೂಪಾಂತರದ ದೃಢೀಕರಣದ ಹೊರತಾಗಿ, ಎಫ್ / 2.2 ಅಪರ್ಚರ್ ಲೆನ್ಸ್ ಹೊಂದಿರುವ ಅಲ್ಟ್ರಾವೈಡ್ ಕ್ಯಾಮೆರಾದ ಎಕ್ಸಿಫ್ ಡೇಟಾವನ್ನು ವರದಿಯು ಉಲ್ಲೇಖಿಸುತ್ತದೆ.

Advertisement

ಗೂಗಲ್ ಪಿಕ್ಸೆಲ್ 5 ಎ  6.2-ಇಂಚಿನ ಎಫ್‌ ಹೆಚ್‌ ಡಿ ಪ್ಲಸ್ ಒ ಎಲ್ ಇ ಡಿ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಗೂಗಲ್ ಪಿಕ್ಸೆಲ್ 5 ಎ ಡ್ಯುಯಲ್ ಕ್ಯಾಮೆರಾ ಮತ್ತು ಫ್ಲ್ಯಾಷ್ ನನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸಲಾಗಿದೆ.  ಫೋನ್ 3.5 ಎಂಎಂ ಹೆಡ್‌ ಫೋನ್ ಜ್ಯಾಕ್, ಹಿಂಭಾಗದ ಫಿಂಗರ್‌ ಪ್ರಿಂಟ್ ರೀಡರ್ ಮತ್ತು ಸ್ಟಿರಿಯೊ ಸ್ಪೀಕರ್‌ ಗಳನ್ನು ಹೊಂದಬಹುದು ಎಂಬ ನಿರೀಕ್ಷೆ ಸ್ಮಾರ್ಟ್ ಫೋನ್ ಮಾರುಕಟ್ಟೆಯ ವಲಯದಲ್ಲಿ ನಿರೀಕ್ಷಿಸಲಾಗಿದೆ.

ಓದಿ : ಕೇರಳದ ಬೀದಿ ನಾಯಿಗಳ ಪ್ರೀತಿಯಲ್ಲಿ ಬಿದ್ದ ಈ ಬ್ರಿಟನ್ ದಂಪತಿ, ತಮ್ಮೂರಿನ ದಾರಿಯನ್ನೇ ಮರೆತರು!

Advertisement

Udayavani is now on Telegram. Click here to join our channel and stay updated with the latest news.

Next