ಗೂಗಲ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಫೋಲ್ಡೆಬಲ್ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸಿಕೊಂಡಿದೆ.
Advertisement
“ಪಿಪಿಟ್’ ಹೆಸರಿನ ಮಡಚುವ ಫೋನು ಆಕ್ಟಾ ಕೋರ್ ಪ್ರೊಫೆಸರ್ ಹೊಂದಿರಲಿದೆ.
ಆ್ಯಂಡ್ರಾಯ್ಡ 12 ವರ್ಷನ್‌ನ ಫೋನು ಇದಾಗಿರಲಿದೆ. ಇದರಲ್ಲಿ 12GB RAM ಇರಲಿದೆ. 256 ಜಿಬಿ ಮತ್ತು 512 ಜಿಬಿ ಇಂಟರ್‌ನಲ್ ಸ್ಟೋರೇಜ್ ಆಯ್ಕೆ ಇರುವ ಸಾಧ್ಯತೆಯಿದೆ.
12.2ಎಂಪಿಯ ಐಎಂಎಕ್ಸ್ 363 ಕ್ಯಾಮರಾ ಸೆನ್ಸಾರ್‌ನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ.ಸದ್ಯ ಈ ಮಾಹಿತಿಗಳು ಗೀಕ್‌ಬೆಂಚ್ ವರದಿಯಿಂದಾಗಿ ಹೊರಬಿದ್ದಿದೆ. ಗೂಗಲ್ ಸಂಸ್ಥೆಯು ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.