Advertisement

ಶಾರ್ಟ್ ವಿಡಿಯೋದತ್ತ ಗೂಗಲ್ ಚಿತ್ತ

01:50 PM Jan 02, 2021 | Team Udayavani |

ನವದೆಹಲಿ: ವಿಶ್ವದ ಬೃಹತ್ ಸರ್ಚ್ ಇಂಜಿನ್ ಸೈಟ್ ಆಗಿರುವ ಗೂಗಲ್, ತನ್ನ ಬಳಕೆದಾರರಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಇದೀಗ ಶಾರ್ಟ್ ವಿಡಿಯೋ ಸೌಲಭ್ಯ ನೀಡುವತ್ತ  ಚಿಂತನೆ ನಡೆಸಿದೆ.

Advertisement

ಟಿಕ್ ಟಾಕ್ ಸಂಸ್ಥೆ ಮೊದಲು ಆರಂಭಿಸಿದ್ದ  ಈ ಶಾರ್ಟ್ ವಿಡಿಯೋ ಸೌಲಭ್ಯವನ್ನು  ತದನಂತರ  ಇನ್ಸ್ಟಾಗ್ರಾಮ್ ಸೇರಿದಂತೆ ಫೇಸ್ ಬುಕ್ ಜಾಲತಾಣಗಳೂ ಇದನ್ನು ಅಳವಡಿಸಿಕೊಂಡವು. ಇದೀಗ ಈ ಪ್ರಯೋಗಕ್ಕೆ ಗೂಗಲ್ ಕೂಡಾ ಕೈ ಹಾಕಿದ್ದು, ಈ ಸೌಲಭ್ಯದ ಮೂಲಕ ಬೇರೆ ಬೇರೆ ಜಾಲತಾಣಗಳಲ್ಲಿರುವ ವಿಡಿಯೋಗಳನ್ನು ಗೂಗಲ್ ಮೂಲಕ ವೀಕ್ಷಿಸಬಹುದಾಗಿದೆ.

ಮಾಹಿತಿ ಪ್ರಕಾರ ಗೂಗಲ್ ಸರ್ಚ್ ಬಾರ್ ನ ಬಲಭಾಗದಲ್ಲಿ ಶಾರ್ಟ್ ವಿಡಿಯೋ ಎಂಬ ಪ್ರತ್ಯೇಕ ಆಯ್ಕೆಯನ್ನು ನೀಡಲಿದ್ದು, ಈ ಆಯ್ಕೆಯನ್ನು ಕ್ಲಿಕ್ ಮಾಡಿದ ತಕ್ಷಣ ಅದು ಟಿಕ್ ಟಾಕ್ ಅಥವಾ ಇತರ ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಓಪನ್ ಆಗಲಿದೆ  ಎನ್ನಲಾಗಿದೆ.

ಈ ಶಾರ್ಟ್ ವಿಡಿಯೋ ಸೌಲಭ್ಯವನ್ನು ಆರಂಭಿಸುವ ಕುರಿತಾಗಿ ಚಿಂತನೆಯನ್ನು ನಡೆಸುತ್ತಿದ್ದು ಇದು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ . ಸದ್ಯಕ್ಕೆ ಕೆಲವೇ ಕೆಲವು ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ಯಾವುದೇ  ಅಧಿಕೃತ ಮಾಹಿತಿಗಳನ್ನು ಈವರೆಗೂ ಗೂಗಲ್ ಸಂಸ್ಥೆ ಹಂಚಿಕೊಂಡಿಲ್ಲ.

ಇದನ್ನೂ ಓದಿ:ಏಪ್ರಿಲ್‌ 1ಕ್ಕೆ ಯುವರತ್ನ ರಿಲೀಸ್‌

Advertisement

ಒಂದು ವೇಳೆ ಈ ಹೊಸ ಪ್ರಯೋಗ ಯಶಸ್ವಿಯಾದರೆ  ಗೂಗಲ್ ಸಂಸ್ಥೆ ಸದ್ಯಕ್ಕೆ ಈ ಹೊಸ ಸೌಲಭ್ಯವನ್ನು ಕೇವಲ ಮೊಬೈಲ್ ಬಳಕೆದಾರರಿಗೆ ಮಾತ್ರ ನೀಡಲಿದೆ ಹಾಗೂ  ಮುಂಬರುವ ದಿನಗಳಲ್ಲಿ ಡೆಸ್ಕ್ ಟಾಪ್ ಸೇರಿದಂತೆ ಇತರ ಬಳಕೆದಾರರಿಗೂ ನೀಡುವ  ಸಾದ್ಯತೆಗಳಿವೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next