Advertisement

Google Services Down!; ಜಿ ಮೇಲ್, ಯೂಟ್ಯೂಬ್, ಗೂಗಲ್ ಡ್ರೈವ್ ಸೇವೆಯಲ್ಲಿ ವ್ಯತ್ಯಯ

02:28 PM Mar 23, 2023 | Team Udayavani |

ನವದೆಹಲಿ:ತಂತ್ರಜ್ಞಾನ ದಿಗ್ಗಜ ಗೂಗಲ್ ಸೇವೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಜಿ ಮೇಲ್, ಯೂಟ್ಯೂಬ್ ಮತ್ತು ಗೂಗಲ್ ಡ್ರೈವ್ ಬಳಕೆದಾರರು ಸಮಸ್ಯೆ ಎದುರಿಸುವಂತಾಗಿತ್ತು ಎಂದು ವರದಿಯಾಗಿದೆ.

Advertisement

ಇದನ್ನೂ ಓದಿ:ಐಪಿಎಲ್ ಆರಂಭಕ್ಕೆ ಮೊದಲೇ ಪಂಜಾಬ್ ಕಿಂಗ್ಸ್ ಗೆ ಆಘಾತ; ಸ್ಟಾರ್ ಕ್ರಿಕೆಟರ್ ಔಟ್

ಸಾವಿರಾರು ಬಳಕೆದಾರರು Errors ಕುರಿತು ರಿಪೋರ್ಟ್ ಮಾಡಿದ್ದರು. ಈ ಬಗ್ಗೆ ಗೂಗಲ್ ಸರ್ವೀಸ್ ಕೂಡಾ ಸ್ಪಷ್ಟನೆ ನೀಡಿದೆ.ಈಗಾಗಲೇ ಡೌನ್ ಡಿಟೆಕ್ಟರ್ ಮೂಲಕ ಗ್ರಾಹಕರ ದೂರುಗಳನ್ನು ಪರಿಗಣಿಸಿ, ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಗೂಗಲ್ ತಿಳಿಸಿತ್ತು.

“ಬಳಕೆದಾರರು ರಿಪೋರ್ಟ್ಸ್ ಮಾಡಿರುವ ಟ್ವೀಟ್ ನಲ್ಲಿ, ಗೂಗಲ್ 11-22AM ನಿಂದ, ಜೀ ಮೇಲ್ 11-22 AM ಹಾಗೂ ಯೂಟ್ಯೂಬ್ 11-19 AMನಿಂದ ಸಮಸ್ಯೆ ಕಾಣಿಸಿಕೊಂಡಿರುವುದಾಗಿ” ತಿಳಿಸಿದ್ದಾರೆ.

ತನ್ನ ಪ್ರತಿಸ್ಪರ್ಧಿ Bardಗೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ChatGPTಯನ್ನು ಪ್ರಾರಂಭಿಸುತ್ತಿರುವುದಾಗಿ ಗೂಗಲ್ ಬುಧವಾರ (ಮಾರ್ಚ್ 22) ಘೋಷಿಸಿತ್ತು. ಈ ಮೊದಲು Bard ಅಮೆರಿಕ, ಬ್ರಿಟನ್ ನಲ್ಲಿ ಚಾಟ್ ಜಿಪಿಟಿಯನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ದೇಶಗಳಲ್ಲಿ ಚಾಟ್ ಜಿಪಿಟಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next