Advertisement

ಸಾವಿನ ದಿನ ಹೇಳುವ ಗೂಗಲ್‌

09:47 AM Jun 19, 2018 | Harsha Rao |

ನ್ಯೂಯಾರ್ಕ್‌: ಅಂತರ್ಜಾಲದಿಂದ ಮಾಹಿತಿ ಹೆಕ್ಕಿ ಕೊಡುತ್ತಿದ್ದ ಗೂಗಲ್‌ ಇನ್ನು ನಾವು ಅನಾರೋಗ್ಯಗೊಂಡರೆ ಎಷ್ಟು ದಿನ ಬದುಕಿರುತ್ತೇವೆ ಎಂಬ ಭವಿಷ್ಯವನ್ನೂ ಹೇಳಲಿದೆ. ವೈದ್ಯಕೀಯ ತಪಾಸಣೆಯ ದತ್ತಾಂಶಗಳನ್ನು ವಿಶ್ಲೇಷಿಸಿ, ರೋಗಿಯ ಸ್ಥಿತಿಯನ್ನು ಕ್ಷಣಮಾತ್ರದಲ್ಲಿ ತೆರೆದಿಡಬಹುದಾದ ಮೆಡಿಕಲ್‌ ಬ್ರೇನ್‌ ಅನ್ನು ಗೂಗಲ್‌ ಅಭಿವೃದ್ಧಿಪಡಿಸುತ್ತಿದೆ. ಇತ್ತೀಚೆಗೆ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಸ್ತನ ಕ್ಯಾನ್ಸರ್‌ನ ಕೊನೆಯ ಹಂತದಲ್ಲಿದ್ದ ಮಹಿಳೆಯ 1,75,639 ವಿಧದ ದತ್ತಾಂಶವನ್ನು ವಿಶ್ಲೇಷಿಸಿದ್ದ ಗೂಗಲ್‌ನ ಮೆಡಿಕಲ್‌ ಬ್ರೇನ್‌, ಸಾವನ್ನಪ್ಪುವ ಪ್ರಮಾಣ ಶೇ. 19.9ರಷ್ಟು ಎಂದು ಹೇಳಿತ್ತು. ಮಹಿಳೆ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಳು.

Advertisement

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಹಾಗೂ ನ್ಯೂರಲ್‌ ಇಂಜಿನ್‌ಗಳನ್ನು ಬಳಸಿ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಇದನ್ನು ಬಳಸುತ್ತ ಹೋದಂತೆ ನಿಖರತೆ ಹೆಚ್ಚಲಿದ್ದು, ಸ್ವಯಂ ಕಲಿಕೆ ಸೌಲಭ್ಯವನ್ನೂ ಹೊಂದಿದೆ.

ಇದಕ್ಕಾಗಿ ಗೂಗಲ್‌ ಎಂಜಿನಿಯರ್‌ಗಳು ವರ್ಷಗಟ್ಟಲೆ ವೈದ್ಯಕೀಯ ದಾಖಲೆಗಳನ್ನು ಅಧ್ಯಯನ ನಡೆಸಿದ್ದಾರೆ. ವೈದ್ಯಕೀಯ ದಾಖಲೆಗಳು ಮತ್ತು ರೋಗಿಯ ಸ್ಥಿತಿಗತಿ ವಿವರಗಳು ಕಾಗದದಲ್ಲೇ ಇದ್ದು, ಇವುಗಳನ್ನು ಡಿಜಿಟಲ್‌ ರೂಪಕ್ಕೆ ಇಳಿಸುವುದು ಸವಾಲಾಗಿತ್ತು. ಲಕ್ಷಗಟ್ಟಲೆ ಗಿಗಾಬೈಟ್‌ ದತ್ತಾಂಶವನ್ನು ಗೂಗಲ್‌ ಈ ವ್ಯವಸ್ಥೆಗಾಗಿ ಸಂಸ್ಕರಿಸಿದೆ. ರೋಗಿ ಮಾಹಿತಿ ಅಧ್ಯಯನ ನಡೆಸಲು ಬಳಸುವ ಶೇ. 80ರಷ್ಟು ಸಮಯ ಇದರಿಂದ ಕಡಿಮೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next