Advertisement

ಸಾಫ್ಟ್ ವೇರ್‌ ಅಲ್ಲ ಮನುಷ್ಯ ಎಂದಿದ್ದ ಸಿಬ್ಬಂದಿ ವಜಾ

07:48 PM Jul 23, 2022 | Team Udayavani |

ವಾಷಿಂಗ್ಟನ್‌: ಗೂಗಲ್‌ ಸಂಸ್ಥೆಯ ಕೃತಕ ಬುದ್ಧಿವಂತಿಕೆಯ (ಎಐ) ಚಾಟ್‌ಬಾಟ್‌ ಆಗಿರುವ ಎಲ್‌ಎಎಂಡಿಎ ಅನ್ನು ಮನುಷ್ಯ ಎಂದು ಹೇಳಿದ್ದ ಸಿಬ್ಬಂದಿ ಬ್ಲೇಕ್‌ ಲೆಮೋಯ್ನ ಅನ್ನು ಸಂಸ್ಥೆ ಕೆಲಸದಿಂದ ತೆಗೆದುಹಾಕಿದೆ.

Advertisement

ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ಇಂಜಿನಿಯರ್‌ ಬ್ಲೇಕ್‌ ಅವರು ಚಾಟ್‌ಬಾಟ್‌ ಅನ್ನು ಮನುಷ್ಯರೇ ನಿರ್ವಹಿಸುತ್ತಿದ್ದಾರೆ. ಆದರೆ ಅದನ್ನು ಎಐ ನಿರ್ವಹಿಸುತ್ತಿದೆ ಎಂದು ಸಂಸ್ಥೆ ಸುಳ್ಳು ಹೇಳಿದೆ ಎನ್ನುವ ಗಂಭೀರ ಆರೋಪ ಮಾಡಿದ್ದರು. ಅದನ್ನು ಗೂಗಲ್‌ ತಳ್ಳಿಹಾಕಿದ್ದು, ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬ್ಲೇಕ್‌ ಅವರನ್ನು ಕೆಲಸದಿಂದ ತೆಗೆದಿದೆ. ಕಳೆದ ತಿಂಗಳು ಸಂಸ್ಥೆ ಬ್ಲೇಕ್‌ಗೆ ಒತ್ತಾಯದ ರಜೆ ಘೋಷಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next