Advertisement
ದೂರುದಾರರಿಗೆ ಜೂ. 26ರಂದು ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್‌ಗೆ ಸಂದೇಶ ಕಳುಹಿಸಿ, ಆನ್‌ಲೈನ್ ಗೂಗಲ್ ರಿವ್ಯೂ ಟಾಸ್ಕ್ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿದ್ದಾನೆ. ಇದನ್ನು ನಂಬಿದ ಅವರು ಹಂತ-ಹಂತವಾಗಿ ತಮ್ಮ ವಿವಿಧ ಬ್ಯಾಂಕ್ ಖಾತೆಯಿಂದ 4,08,000 ರೂ. ಪಾವತಿಸಿದ್ದಾರೆ. ಆದರೆ ಬಳಿಕ ಕಮಿಷನ್ ಹಣವಾಗಲೀ, ಪಾವತಿಸಿದ ಹಣವಾಗಲೀ ವಾಪಸು ನೀಡದೆ ವಂಚನೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು: ಉದ್ಯೋಗ ನೀಡುವುದಾಗಿ ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಇ-ಮೇಲ್‌ಗೆ ಅಪರಿಚಿತನೋರ್ವ hr@teams-subaru.com ನಿಂದ ಮಾ. 18ರಂದು ವಿದೇಶದಲ್ಲಿ ಉದ್ಯೋಗದ ಬಗ್ಗೆ ಸಂದೇಶ ಕಳುಹಿಸಿದ್ದ. ಅನಂತರ ಆಫರ್ ಲೆಟರ್ ಕಳುಹಿಸಿದ್ದ. ಅನಂತರ ನೇಮಕಾತಿ ಸಂಬಂಧವಾಗಿ ಠೇವಣಿ ಹಣ ನೀಡಬೇಕೆಂದು ತಿಳಿಸಿ ಹಂತ ಹಂತವಾಗಿ ಒಟ್ಟು 1,12,760 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಲಾಗಿದೆ.