Advertisement

38 ಆ್ಯಪ್‌ ಗಳು ಪ್ಲೇ ಸ್ಟೋರ್‌ನಿಂದ ಔಟ್‌ ; ಇಲ್ಲಿದೆ ಡಿಟೇಲ್ಸ್

02:31 AM Jun 19, 2020 | Hari Prasad |

ನಿಮಗೆ ದಿನಕ್ಕೊಂದು ಫೇಸ್‌ಬುಕ್‌ ಪ್ರೊಪೈಲ್‌ ಪಿಕ್‌, ಗಂಟೆ ಗಂಟೆಗೂ ವಾಟ್ಸ್‌ಆ್ಯಪ್‌ ಡಿಪಿ ಬದಲಿಸುವ ಹವ್ಯಾಸ ಇದೆಯಾ?

Advertisement

ಅದಕ್ಕೆಂದೇ ಮುಖದ ಮೇಲಿನ ಕಲೆಗಳನ್ನೆಲ್ಲ ತೊಳೆದು ಚಂದದ ಫೋಟೊ ಕ್ಲಿಕ್ಕಿಸಲು ವಿಶೇಷ ಆ್ಯಪನ್ನು ನೀವು ಬಳಸುತ್ತಿದ್ದೀರಾ?

ಹೌದು ಎಂದಾದರೆ ಇದು ನೀವು ತಿಳಿದುಕೊಳ್ಳಲೇಬೇಕಾದ ವಿಷಯ. ಅದೇನೆಂದರೆ ಪ್ಲೇ ಸ್ಟೋರ್‌ನಿಂದ 38 ಆ್ಯಂಡ್ರಾಯ್ಡ್ ಆ್ಯಪ್‌ಗಳನ್ನು ಗೂಗಲ್‌ ತೆಗೆದುಹಾಕಿದೆ. ಅವೆಲ್ಲವೂ ಫೋಟೊ ಕ್ಲಿಕ್ಕಿಸುವ ಮತ್ತು ಎಡಿಟಿಂಗ್‌, ಕೊಲಾಜ್‌ ಮಾಡುವುದಕ್ಕೆ ಸಂಬಂಧಿಸಿದ ಆ್ಯಪ್‌ಗಳು. ಹಾಗೇ ಈ ಆ್ಯಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಕೂಡಲೆ ಅನ್‌ಇನ್‌ಸ್ಟಾಲ್‌ ಮಾಡಿ ಎಂದು ಸೆಕ್ಯೂರಿಟಿ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಯಾವ ರೀತಿ ಆ್ಯಪ್ಲಿಕೇಷನ್‌ಗಳು?
ಎ8 ಆ್ಯಪ್‌ಗಳ ಪೈಕಿ ಬಹುತೇಕ ಫೋಟೊ, ಬ್ಯೂಟಿ ಮತ್ತು ಸೆಲ್ಫಿಗೆ ಸಂಬಂಧಿಸಿದ ಆ್ಯಪ್‌ಗಳಿವೆ. ಇವೆಲ್ಲವೂ 2019ರ ಜನವರಿಯಿಂದ ಈಚೆಗೆ ಪ್ಲೇಸ್ಟೋರ್‌ಗೆ ಅಪ್‌ಲೋಡ್‌ ಆಗಿದ್ದು, 2 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಮಾಡಲಾಗಿದೆ. ಯುವಜನ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಯುವತಿಯರು ಈಗಲೂ ಈ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ.

ನಿಷೇಧಿಸಲ್ಪಟ್ಟ ಪ್ರಮುಖ ಆ್ಯಪ್‌ಗಳು
ಲೈಟ್‌ ಬ್ಯೂಟಿ ಕ್ಯಾಮೆರಾ, ಬ್ಯೂಟಿ ಕೊಲಾಜ್‌ ಲೈಟ್‌, ಬ್ಯೂಟಿ ಆ್ಯಂಡ್‌ ಫಿಟ್ನೆಸ್‌ ಕ್ಯಾಮೆರಾ, ಗ್ರೇಟ್‌ ಬ್ಯೂಟಿ ಕ್ಯಾಮೆರಾ, ಕವೂನ್‌ ಫೋಟೊ ಎಡಿಟರ್‌ ಆ್ಯಂಡ್‌ ಸೆಲ್ಫಿ ಬ್ಯೂಟಿ ಕ್ಯಾಮೆರಾ, ಬೆಂದು ಸೆಲ್ಫಿ ಬ್ಯೂಟಿ ಕ್ಯಾಮೆರಾ, ಪಿನಟ್‌ ಸೆಲ್ಫಿ ಬ್ಯೂಟಿ ಕ್ಯಾಮೆರಾ, ರೋಸ್‌ ಫೋಟೊ ಎಡಿಟರ್‌ ಆ್ಯಂಡ್‌ ಸೆಲ್ಫಿ ಬ್ಯೂಟಿ ಕ್ಯಾಮೆರಾ, ಸನ್‌ ಪ್ರೊ ಬ್ಯೂಟಿ ಕ್ಯಾಮೆರಾ, ಲಿಟಲ್‌ ಬೀ ಬ್ಯೂಟಿ ಕ್ಯಾಮೆರಾ.

Advertisement

ನಿಷೇಧ ಏಕೆ?

– ಆ್ಯಪ್ಲಿಕೇಷನ್‌ಗಳು ಅನಗತ್ಯವಾಗಿರುವ ಜಾಹೀರಾತುಗಳನ್ನು ಪ್ರಕಟಿಸುತ್ತಿದ್ದವು.

– ಬಳಕೆದಾರರು ಲಿಂಕ್‌ ಮೇಲೆ ಕ್ಲಿಕ್ಕಿಸದಿದ್ದರೂ ಬ್ರೌಸರ್‌ಗೆ ಅಕ್ರಮ ಪ್ರವೇಶ.

– ಬಳಕೆದಾರರ ಅನುಮತಿ ಇಲ್ಲದೆಯೇ ನೇರವಾಗಿ ಅವರ ಫೋನ್‌ನಲ್ಲಿರುವ ಮಾಹಿತಿಗೆ ಕನ್ನ

Advertisement

Udayavani is now on Telegram. Click here to join our channel and stay updated with the latest news.

Next