Advertisement

WifiNanScan ಅಪ್ಲಿಕೇಶನ್ ನನ್ನು ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಬಳಸಬಹದು : ಗೂಗಲ್

01:49 PM Mar 29, 2021 | Team Udayavani |

ನವ ದೆಹಲಿ :  ರೆಸ್ಟೋರೆಂಟ್ ಗಳಲ್ಲಿ ಬುಕ್ಕಿಂಗ್ ಮಾಡಲು  ಹಾಗೂ ಸಿನೆಮಾ ಮಂದಿರಗಳಲ್ಲಿ ಟಿಕೆಟ್ ಗಳನ್ನು ಕಾಯ್ದಿರಿಸುವುದನ್ನು ವೈಫೈ ಅವೆರ್ ಪ್ರೋಟೋಕಾಲ್ ಬಳಸಿ ಇಂಟರ್ ನೆಟ್ ಸಂಪರ್ಕವಿಲ್ಲದೆಯೂ ಮಾಡಬಹದು  ಎಂದು ಗೂಗಲ್ ಸಂಸ್ಥೆ ಇತ್ತೀಚೆಗೆ ಮಾಹಿತಿ ನೀಡಿದೆ.

Advertisement

ಇನ್ನು, ಈ ಮೂಲಕ ದೊಡ್ಡ ಪ್ರಮಾಣದ ಡಾಟಾಗಳನ್ನು ಕೂಡ ನಾವು ಶೇರ್ ಮಾಡಿಕೊಳ್ಳಬಹುದು ಎಂದು ಕೂಡ ಗೂಗಲ್ ಹೇಳಿದೆ.

ಓದಿ : ನಮಗ್ಯಾವ ಒತ್ತಡವಿಲ್ಲ, ಡಿಕೆಶಿಯವರೇ ಇದನ್ನೆಲ್ಲಾ ಮಾಡುತ್ತಿದ್ದಾರೆ: ಸಿಡಿಲೇಡಿ ಪೋಷಕರ ಹೇಳಿಕೆ

ಈ ಅಪ್ಲಿಕೇಶನ್ ನನ್ನು ಡೆವಲಪರ್ಸ್, ವೆಂಡರ್ಸ್ ಮತ್ತು ಯೂನಿವರ್ಸಿಟಿಗಳ ಅಧ್ಯಯನ ನಡೆಸಲು, ಡೆಮೋನ್ ಸ್ಟ್ರೆ ಶನ್  ಮತ್ತು ಟೆಸ್ಟಿಂಗ್ ಟೂಲ್ ತರಹ ಬಳಸಲು ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದ್ದು, ಸದ್ಯ, ಗೂಗಲ್ ಈ ಅಪ್ಲಿಕೇಶನ್ WifiNanScan ಎಂಬುವ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಬಿಡುಗಡೆ ಮಾಡಿದೆ.

ಗೂಗಲ್ ಬಿಡುಗಡೆಗೊಳಿಸಿದ ಈ ಅಪ್ಲಿಕೇಶನ್‌ ನ ಸಹಾಯದಿಂದ, ನೆಟ್ ವರ್ಕ್‍ ನ ಸಹಾಯ ಇಲ್ಲದೆಯೂ ಡಾಕ್ಯುಮೆಂಟ್‌ ಗಳನ್ನು ಪ್ರಿಂಟರ್‌ ಗೆ ಕಳುಹಿಸಬಹುದಾಗಿದೆ.

Advertisement

ಇನ್ನು, ಈ ಅಪ್ಲಿಕೇಶನ್ ಆ್ಯಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ OS ಆವೃತ್ತಿಯ ಎಲ್ಲಾ ಡಿವೈಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ.  ಮತ್ತು ಯಾವುದೇ ರೀತಿಯ ಇಂಟರ್ ನೆಟ್  ಸಂಪರ್ಕವಿಲ್ಲದಿದ್ದರು ಸರ್ಚ್ ಮಾಡಲು ಮತ್ತು ನೇರ ಸಂಪರ್ಕ ಕಲ್ಪಿಸಲು ಸಹಾಯ ಮಾಡುತ್ತದೆ.

ಈ ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್‌ ನ ಸಹಾಯದಿಂದ, ಬಳಕೆದಾರರು ಬ್ಲೂಟೂತ್ ಮತ್ತು ವೈಫೈ ಸಂಪರ್ಕವಿಲ್ಲದೆ ಸಂದೇಶಗಳು ಮತ್ತು ಡಾಟಾವನ್ನು ಶೇರ್ ಮಾಡಿಕೊಳ್ಳಬಹುದು ಎಂದು ಗೂಗಲ್ ಮಾಹಿತಿ ನೀಡಿದೆ.

ಓದಿ : ನೇಪಾಳದಲ್ಲೂ ಕೆಜಿಎಫ್ 2 ಹವಾ : ಯಶ್ ಅಭಿಮಾನಿಯ ಅಭಿಮಾನಕ್ಕೆ ನೆಟ್ಟಿಗರು ಫಿದಾ..!

Advertisement

Udayavani is now on Telegram. Click here to join our channel and stay updated with the latest news.

Next