Advertisement

ಬ್ಲಾಕ್‌ ಆಗಿರುವ ಖಾತೆ ಪುನಸ್ಥಾಪಿಸಲು ಗೂಗಲ್‌ ನಕಾರ

07:01 PM Aug 23, 2022 | Team Udayavani |

ವಾಷಿಂಗ್ಟನ್‌: ವೈದ್ಯಕೀಯ ಕಾರಣಗಳಿಗಾಗಿ ತೆಗೆದಿದ್ದ ತನ್ನ ಮಗನ ತೊಡೆಸಂದುವಿನ ಚಿತ್ರವನ್ನು ತಪ್ಪಾಗಿ ಅಪ್‌ಲೋಡ್‌ ಮಾಡಿದ್ದ ವ್ಯಕ್ತಿಯ ಖಾತೆಯನ್ನು ಮರುಸ್ಥಾಪಿಸಲು ಗೂಗಲ್‌ ನಿರಾಕರಿಸಿದೆ. ಅದು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್‌ ಆಗಿರುವುದರಿಂದ, ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಅವರ ಖಾತೆ ಬ್ಲಾಕ್‌ ಆಗಿರುತ್ತದೆ ಎಂದೂ ಸಂಸ್ಥೆ ಹೇಳಿದೆ.

Advertisement

ಮಗುವಿನ ತೊಡೆಸಂದುವಿನಲ್ಲಿ ಉರಿ ಶುರುವಾಗಿ ಅದು ಕೆಂಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ, ಮಗುವಿನ ತಂದೆ ಮಾರ್ಕ್‌ ಅದರ ಫೋಟೋವನ್ನು ಕ್ಲಿಕ್ಕಿಸಿ, ವೈದ್ಯರಿಗೆ ಕಳುಹಿಸಿದ್ದರು. ಆ ಫೋಟೋಗಳು ತಪ್ಪಾಗಿ ಕ್ಲೌಡ್‌ಗೆ ಅಪ್‌ಲೋಡ್‌ ಆಗಿದ್ದು, ಗೂಗಲ್‌ನ ವ್ಯವಸ್ಥೆಯು ಅದನ್ನು “ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕಂಟೆಂಟ್‌’ ಎಂದು ಗುರುತಿಸಿತ್ತು.

2 ದಿನಗಳ ಬಳಿಕ ಮಾರ್ಕ್‌ ಅವರ ಜಿಮೇಲ್‌, ಗೂಗಲ್‌ ಫೈ(ಫೋನ್‌ ಸೇವೆ ನೀಡುವ ವ್ಯವಸ್ಥೆ) ಮತ್ತು ಇತರೆ ಗೂಗಲ್‌ ಖಾತೆಗಳು ಬ್ಲಾಕ್‌ ಆದವು. ಜತೆಗೆ, ಸ್ಯಾನ್‌ ಫ್ರಾನ್ಸಿಸ್ಕೋ ಪೊಲೀಸರು ಕೂಡ ಮಾರ್ಕ್‌ ವಿರುದ್ಧ ತನಿಖೆ ಆರಂಭಿಸಿ, ಅವರದ್ದೇನೂ ತಪ್ಪಿಲ್ಲ ಎಂಬುದನ್ನು ಕಂಡುಕೊಂಡರು. ಆದರೆ, ಗೂಗಲ್‌ ಮಾತ್ರ ತನ್ನ ನಿಯಮಕ್ಕೆ ಬದ್ಧವಾಗಿದ್ದು, ಮಾರ್ಕ್‌ ಅವರ ಖಾತೆಗಳನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದೆ. ಗೂಗಲ್‌ನ ಈ ನಡೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next